SDEF Scholarships:puc ಪಾಸ್‌ ಆದ ವಿದ್ಯಾರ್ಥಿಗೆ 10,000 ಸ್ಕಾಲರ್ಶಿಪ್

(SDEF Scholarships) 2024-25 ನೇ ಸಾಲಿನ ಎಸ್ಡಿಇಎಫ್ ‘ಶ್ರೀಮತಿ ಶ್ಯಾಮ್ ಲತಾ ಗರ್ಗ್’ ಇಂಡಿಯಾ ಸ್ಕಾಲರ್ಶಿಪ್ಸ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ಎಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಚರ್ ಇತ್ಯಾದಿ ಸೇರಿದಂತೆ ವೃತ್ತಿಪರ ಕೋರ್ಸ್ಗಳು ಮತ್ತು ಇತರ ಅಂಡರ್ಗ್ರಾಜುಯೇಟ್ ಕಾರ್ಯಕ್ರಮಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲು ಸ್ವಾಮಿ ದಯಾನಂದ್ ಎಜುಕೇಶನ್ ಫೌಂಡೇಶನ್ (ಎಸ್ಡಿಇಎಫ್)ನ ಉಪಕ್ರಮವಾಗಿದೆ.


ಇದನ್ನೂ ಓದಿ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್‌ ಆಫರ್; 10th ಪಾಸ್‌ ಆದವರು ಅರ್ಜಿ ಸಲ್ಲಿಸಿ


ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡುವ ಎಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಚರ್ ಇತ್ಯಾದಿ ಸೇರಿದಂತೆ ವೃತ್ತಿಪರ ಕೋರ್ಸ್ಗಳು ಮತ್ತು ಇತರ ಅಂಡರ್ಗ್ರಾಜುಯೇಟ್ ಕಾರ್ಯಕ್ರಮಗಳಿಗೆ ದಾಖಲಾದ ಭಾರತೀಯ ವಿದ್ಯಾರ್ಥಿಗಳು ಅರ್ಹರು.
* ಅಭ್ಯರ್ಥಿಗಳು ತಮ್ಮ 12ನೇ ತರಗತಿಯಲ್ಲಿ ಸಿಬಿಎಸ್ಸಿ ಬೋರ್ಡ್ನಲ್ಲಿಯಾದರೆ ಕನಿಷ್ಠ 80% ಅಥವಾ ಇತರ ಬೋರ್ಡ್ಗಳಲ್ಲಿಯಾದರೆ 70% ಅಥವಾ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.
* ಎರಡನೆಯ ವರ್ಷದ ವಿದ್ಯಾರ್ಥಿಗಳಿಗೆ ಕನಿಷ್ಠ 8.0 ಸಿಜಿಪಿಎ ಅವಶ್ಯಕ.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ.8 ಲಕ್ಷವನ್ನು ಮೀರಬಾರದು.


ಇದನ್ನೂ ಓದಿ; ಗೃಹ ಸಾಲ ಪಡೆಯುವವರಿಗೆ ಭರ್ಜರಿ ಸುದ್ದಿ;  RBI ನಿಂದ ಹೊಸ ನಿಯಮಗಳು ಜಾರಿ


ಎಷ್ಟು ಸ್ಕಾಲರ್‌ ಶಿಪ್‌ ಲಭ್ಯ:
* 2500ಕ್ಕಿಂತ ಒಳಗಿನ ಎಐಆರ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರೂ. 50,000 ಮೊತ್ತದ ವಿದ್ಯಾರ್ಥಿವೇತನ.
* 2501ರಿಂದ 5,000ದೊಳಗಿನ ಎಐಆರ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರೂ. 40,000 ಮೊತ್ತದ ವಿದ್ಯಾರ್ಥಿವೇತನ.
* 5,001ರಿಂದ 7500ರೊಳಗಿನ ಎಐಆರ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರೂ. 30,000 ಮೊತ್ತದ ವಿದ್ಯಾರ್ಥಿವೇತನ.
* 7500ರ ಮೇಲಿನ ಎಐಆರ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರೂ. 20,000 ಮೊತ್ತದ ವಿದ್ಯಾರ್ಥಿವೇತನ.
* ಜೊತೆಗೆ, ಬಿ.ಎ., ಬಿ.ಎಸ್ಸಿ, ಬಿ.ಕಾಂ, ಬಿಬಿಎ ಇತ್ಯಾದಿಯಂತಹ ನಾನ್-ಟೆಕ್ನಿಕಲ್ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ. 10,000 ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.


ಇದನ್ನೂ ಓದಿ; ಗೃಹಜ್ಯೋತಿ ಯೋಜನೆ ನೋಂದಣಿಗೆ ಇನ್ನೂ ಇದೆ ಅವಕಾಶ;  ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ


ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/SDEFSL1 ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
31-12-2024

SDEF Scholarships:puc ಪಾಸ್‌ ಆದ ವಿದ್ಯಾರ್ಥಿಗೆ 10,000 ಸ್ಕಾಲರ್ಶಿಪ್
SDEF Scholarships:puc ಪಾಸ್‌ ಆದ ವಿದ್ಯಾರ್ಥಿಗೆ 10,000 ಸ್ಕಾಲರ್ಶಿಪ್

ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ


ಇತ್ತೀಚಿನ ಜನಪ್ರಿಯ ಸುದ್ದಿಗಳು