Kkrtc: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್‌ ಆಫರ್

(Kkrtc) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ಹುದ್ದೆಯ ವಿವರ:
ಚಾಲಕರ ಹುದ್ದೆ
ತಾಂತ್ರಿಕ ಸಹಾಯಕರ ಹುದ್ದೆ

ಚಾಲಕರ ಹುದ್ದೆಗಳನ್ನು ಬೀದರ್-1, ಬೀದರ್-2, ಭಾಲ್ಕಿ, ಔರಾದ್, ಬಸವಕಲ್ಯಾಣ ಮತ್ತು ಹುಮನಾಬಾದ್ ಘಟಕಗಳ ಬಸ್‌ ಚಾಲನೆಗೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ.


ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ


ನೇರ ಸಂದರ್ಶನವನ್ನು ಕೆಳಗಿನ ದಿನಾಂಕಗಳನ್ನು ಏರ್ಪಡಿಸಲಾಗಿದೆ:
ಡಿಸೆಂಬರ್ 02 ರಿಂದ 04 ರವರೆಗೆ ಚಾಲಕ ಹುದ್ದೆಗೆ ನೇರ ಸಂದರ್ಶನ.
ಡಿಸೆಂಬರ್ 06 ರಿಂದ 07 ರವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ನೇರ ಸಂದರ್ಶನ.

ಅರ್ಹರು ಮತ್ತು ಆಸಕ್ತರು ಈ ಮೇಲಿನ ದಿನಾಂಕಗಳಂದು ವಿಳಾಸ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ಹಳೆ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯ ಸಮಯದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.


ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಜಾರಿಗೆ ಬರಲಿವೆ ಈ ಹೊಸ ನಿಯಮಗಳು!


ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕೃತ ವೆಬ್‌ಸೈಟ್‌ ವಿಳಾಸ:
https://kkrtc.karnataka.gov.in/english

ಚಾಲಕರ ಹುದ್ದೆಗೆ ವಿದ್ಯಾರ್ಹತೆ:
* ಚಾಲಕ ಹುದ್ದೆಗೆ SSLC ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಮುಕ್ತ ವಿವಿಯಿಂದ ಪಡೆದ ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.
* ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು.
* ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್‌ ಹೊಂದಿರಬೇಕು.


ಇದನ್ನೂ ಓದಿ; ಯಜಮಾನಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್; ಏನದು? ಮಹಿಳೆಯರೇ ಮಿಸ್‌ ಮಾಡ್ದೆ ಈ ಸುದ್ದಿ ಓದಿ


ತಾಂತ್ರಿಕ ಸಹಾಯಕರ ಹುದ್ದೆಗೆ ವಿದ್ಯಾರ್ಹತೆ:
ಐಟಿಐ ಅಥವಾ ಡಿಪ್ಲೊಮ ಶಿಕ್ಷಣವನ್ನು ಮೆಕ್ಯಾನಿಕಲ್ ಬ್ರ್ಯಾಂಚ್‌ನಲ್ಲಿ ಪಡೆದಿದ್ದು, ಮೆಕ್ಯಾನಿಕ್ ಕೆಲಸದ ಅನುಭವ ಇರುವವರನ್ನು ನೇಮಿಸಿಕೊಳ್ಳಲಾಗುತ್ತದೆ.

ಈ ದಾಖಲೆ ಕಡ್ಡಾಯ:
ನೇರ ಸಂದರ್ಶನಕ್ಕೆ ಹಾಜರಾಗುವವರು ಹುದ್ದೆಗಳಿಗೆ ಅರ್ಹತೆಯ ಪ್ರಮಾಣಪತ್ರಗಳು, ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ, ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್‌, ಮೆಡಿಕಲ್ ಸರ್ಟಿಫಿಕೇಟ್‌ ಅನ್ನು ತೆಗೆದುಕೊಂಡು ಹಾಜರಾಗುವುದು.


ಇದನ್ನೂ ಓದಿ; ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೆ ಕೇಂದ್ರದಿಂದ ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಆಯ್ಕೆ ವಿಧಾನ:
ಮೂಲ ದಾಖಲಾತಿಗಳ ಪರಿಶೀಲನೆ / ದೈಹಿಕ ಅರ್ಹತೆಯ ಪರಿಶೀಲನೆ / ಚಾಲನಾ ವೃತ್ತಿ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

Kkrtc: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್‌ ಆಫರ್
Kkrtc: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್‌ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು