PROPERTY-: ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ

(PROPERTY-:) ಇ- ಖಾತಾ ಪಡೆಯುವ ಮುನ್ನ ತಮ್ಮ ಖಾತೆಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೆ ಕೇಂದ್ರದಿಂದ ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಹೌದು, ಆಸ್ತಿ ಮಾಲೀಕರು ಇ- ಖಾತಾ ಪಡೆಯುವ ಮುನ್ನ ತಮ್ಮ ಖಾತೆಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲು ನವೆಂಬರ್ 18ರಿಂದ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ಆಯುಕ್ತ ಮುನೀಶ್ ಮೌದಿಲ್ ತಿಳಿಸಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿನ 22 ಲಕ್ಷ ಆಸ್ತಿಗಳಿಗೆ ಈಗಾಗಲೇ ಕರಡು ಇ- ಖಾತಾ ಸಿದ್ಧಪಡಿಸಲಾಗಿದೆ. ಕೆಲವು ಖಾತೆಯಲ್ಲಿ ವಿಸ್ತೀರ್ಣ, ಹೆಸರು ಸೇರಿ ಇತರೆ ಅಂಶಗಳು ತಪ್ಪಾಗಿ ನಮೂದಾದ ಬಗ್ಗೆ, ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತಪ್ಪು ಮಾಹಿತಿಯನ್ನು ಸೂಕ್ತ ದಾಖಲೆ ನೀಡಿ ಸರಿಪಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ.


ಇದನ್ನೂ ಓದಿ; BPL ಕಾರ್ಡ್ ಫಲಾನುಭವಿಗಳಿಗೆ ಸಿಹಿ ಸುದ್ದಿ; ಪರಿಷ್ಕರಣೆಯನ್ನು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ


ಇ-ಖಾತಾ ಸಂಬಂಧ ದೂರು ಸಲ್ಲಿಕೆಗೆ ಪ್ರತ್ಯೇಕ ವೆಬ್‌ ಸೈಟ್ ರಚಿಸಲಾಗುವುದು ಮೂರು ವಾರಗಳಲ್ಲಿ ಜನರ ಬಳಕೆಗೆ ನೀಡಲಾಗುವುದು. ಸದ್ಯ ಸಹಾಯವಾಣಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದರು.

ಖಾತೆ ಬದಲಾವಣೆ ಸೇರಿ ಇತರೆ ವಿಚಾರದಲ್ಲಿ ಸಮಸ್ಯೆ ತಪ್ಪಿಸಲು ಇ- ಖಾತಾ ಸೇಲ್ ಡೀಡ್ ಹೊಂದಿರುವ ಆಸ್ತಿ ಮಾಲೀಕರು 7 ದಿನಗಳಲ್ಲಿ ತಮ್ಮ ಆಸ್ತಿ ಮಾರಾಟ ಮಾಡುವ ವ್ಯವಸ್ಥೆ ತರಲಾಗಿದೆ. ಖರೀದಿದಾರರ ಮತ್ತು ಮಾರಾಟಗಾರರ ಆಧಾರ್ ಪ್ರಮಾಣ ಪತ್ರವನ್ನು ಇದಕ್ಕೆ ಕಡ್ಡಾಯವಾಗಿ ನೀಡಬೇಕಿದೆ.


ಇದನ್ನೂ ಓದಿ; KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಖಾಸಗಿ ಸೈಬರ್ ಕೇಂದ್ರಗಳ ಮೂಲಕವೂ ಇ ಖಾತಾ ನೀಡುವ ಚಿಂತನೆ ನಡೆಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಇ- ಖಾತಾ ವಿತರಣೆಗೆ ಹಣ ಕೇಳುವ ಸಿಬ್ಬಂದಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬಹುದು.

PROPERTY-: ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ
PROPERTY-: ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ

ಇತ್ತೀಚಿನ ಜನಪ್ರಿಯ ಸುದ್ದಿಗಳು