(PM-KISAN) ರೈತರು ಬೆಳೆದ ಬೆಳೆಗಳು ಅಕಾಲಿಕ ಮಳೆ, ಬರ, ಬೆಳೆನಾಶ ಸೇರಿದಂತೆ ನಾನಾ ಕಾರಣಗಳಿಂದ ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಪರಿಸ್ಥಿತಿಯನ್ನು ಅರಿತ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್ ಯೋಜನೆ) ಜಾರಿಗೆ ತಂದಿದೆ. ಈ ಯೋಜನೆಗೆ ಇನ್ನೂ ಕೂಡ ನೋಂದಣಿ ಮಾಡದಿದ್ದರೆ ಈ ಕೆಳಗಿನ ಹಂತವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದಾಗಿದೆ, ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಇದನ್ನೂ ಓದಿ; ಯುಗಾದಿ ಹೊತ್ತಲ್ಲೇ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ
ಈ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಈ ಯೋಜನೆ 2018ರ ಡಿ. 1ರಿಂದ ಆರಂಭವಾಗಿದ್ದು, ಆಗಿನಿಂದಲೂ ಈ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ.
ಇದನ್ನೂ ಓದಿ; ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್
ಈ ಯೋಜನೆಗೆ ನೋಂದಾವಣಿ ಹೇಗೆ?
ತಮ್ಮ ತಾಲೂಕು ವ್ಯಾಪ್ತಿಯ ಕಂದಾಯ ಅಧಿಕಾರಿಗಳನ್ನು ಅಥವಾ ಪಿಎಂ ಕಿಸಾನ್ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು. ಪಿಎಂ ಕಿಸಾನ್ ನೋಡಲ್ ಅಧಿಕಾರಿಗಳನ್ನು ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳು ನಿಯೋಜಿಸಿರುತ್ತವೆ. ಆ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ದಾಖಲೆಗಳನ್ನು ನೀಡಿ ಈ ಯೋಜನೆಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಹೆಸರುಗಳನ್ನು ನೋಂದಾಯಿಸಬೇಕು.
ಇದನ್ನೂ ಓದಿ; ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಾಲ!; ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಡಿಟೈಲ್ಸ್
ಅಥವಾ ಆನ್ ಲೈನ್ ಮೂಲಕವೂ ನೀವು ನೋಂದಣಿ ಮಾಡಬಹುದಾಗಿದೆ.
* pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಿ
* NEW FARMER REGISTRATION ಎಂಬ ಐಕಾನ್ ಕ್ಲಿಕ್ ಮಾಡಿ,
* ಆಗ ತೆರೆಯಲ್ಪಡುವ NEW FARMER REGISTRATION FORM ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ಹೆಸರನ್ನು ನೋಂದಾಯಿಸಬಹುದು.
ಇದನ್ನೂ ಓದಿ; ಇಸ್ರೋದಲ್ಲಿ ಭರ್ಜರಿ ಜಾಬ್ ಆಪರ್; ಅರ್ಜಿ ಸಲ್ಲಿಕೆ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಅಥವಾ ನಿಮ್ಮ ಗ್ರಾಮ/ತಾಲೂಕುಗಳಲ್ಲಿ ನಿಯೋಜಿಸಿರುವ ಸಿಎಸ್.ಸಿ ಸೆಂಟರ್ ಗಳಲ್ಲಿ ನೊಂದಣಿ ಮಾಡಬಹುದಾಗಿದೆ.
ಇದನ್ನೂ ಓದಿ; ಕೇಂದ್ರ ಸರ್ಕಾರದ ಯೋಜನೆ; ಬಡ್ಡಿ ಇಲ್ಲದೆ ಸಿಗುತ್ತೆ 10-50 ಸಾವಿರ ಸಾಲ!








Leave a Reply