(Mumps Symptoms Kannada) ಈ ಭೂಮಿಯ ಮೇಲೆ ಅನೇಕ ರೋಗಗಳಿವೆ. ಅವು ಮನುಷ್ಯರನ್ನು ಬಲವಾಗಿ ಕಾಡುತ್ತವೆ. ಅಂತಹ ರೋಗಗಳಲ್ಲಿ ಮಂಗ ಬಾವು (Mumps Symptoms) ಸಹ ಒಂದು ಮಂಗ ಬಾವು ವೈರಸ್ ಸೋಂಕಿನಿಂದ ಉಂಟಾಗುವ ರೋಗವಾಗಿದೆ. ಗ್ರಂಥಿಗಳ ಮೇಲೆ ಅದರಲ್ಲೂ ವಿಶೇಷವಾಗಿ ಪಾರೊ ಟಿಡ್ ಎಂಬ 2 ಕೆನ್ನೆಯ ಮೇಲೆ ಬಳಿ ಇರುವ ಜೊಲ್ಲು ಗ್ರಂಥಿಯ ಮೇಲೆ ಪ್ರಭಾವ ಬೀರುತ್ತದೆ. ಪ್ಯಾರ ಮಿಕ್ಸೂ ವೈರಸ್ ಎಂಬ ವೈರಾಣು ಸೋಂಕು ಎಲ್ಲೆಡೆ ಇದ್ದು ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹರಡುತ್ತದೆ. ಇದು ಎಲ್ಲ ವಯಸ್ಸಿನವರಿಗೂಬರುತ್ತದೆ. ಆದರೆ ಮಕ್ಕಳಲ್ಲಿಬರುತ್ತದೆ. ತಾಯಿಯಿಂದ ಪಡೆದ ಆ್ಯಂಟಿ ಬಾಡಿಗಳು 3 ವರ್ಷದವರೆಗಿನ ಮಗುವಿಗೆ ಸೋಂಕು ಬರದಂತೆ ತಡೆಗಟ್ಟುತ್ತದೆ.
ಸೋಂಕು ಹರಡುವಿಕೆ:
ರೋಗಿಯ ಎಂಜಲು ಸೋಂಕು ಉಂಟು ಮಾಡುವ ವೈರಾಣುಗಳಿಂದ ಕೂಡಿದೆ. ಎಂಜಲು ಸೋಕಿದ ಬಟ್ಟಿಗಳು ಕರವಸ್ತ್ರಗಳಿಂದ ಅಥವ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಕೆನ್ನೆಯ (Cheeks) ಬಾವು ಕಾಣುವ ಒಂದು ವಾರ ಹಾಗೂ ಬಂದ ನಂತರ 9 ದಿನಗಳವರೆಗೆ ರೋಗಿಯಿಂದ ಸೋಂಕು ಹರಡುತ್ತದೆ.

ಲಕ್ಷಣಗಳು ಏನು?
• ಸೋಂಕು ತಗುಂದ 2 ರಿಂದ 4 ವಾರಗಳ ನಂತರ ರೋಗದ ಲಕ್ಷಣ ಕಾಣುತ್ತದೆ.
• 3 ನೇ ಒಂದು ಭಾಗದಷ್ಟು ಜನರಿಗೆ ಇದು ರೋಗ ಬಂದಿದ್ದು ಗೊತ್ತಾಗುವುದಿಲ್ಲ.
• ಕೆಲವರಿಗೆ ಜ್ವರ ತಲೆನೋವಸುಸ್ತು ಸಂಕಟ ಊಟ ಸೇರದೆ ಇರುವುದು ವಾಂತಿ ಮಾಡುವ ಹಾಗೆ ಆಗುವುದು ಇಂತಹ ಲಕ್ಷಣಗಳು ಆರಂಭವಾಗುತ್ತದೆ.
• ರೋಗ ಉಲ್ಬಣಗೊಂಡು ಕಿವಿಯ ಕೆಳಗಡೆ ಭಾಗದಲ್ಲಿ ನೋವು ತಿನ್ನಲು ಕಷ್ಟ ಪಡುವುದು ಆರಂಭವಾಗುತ್ತದೆ. ಆರಂಭದಲ್ಲಿ ಕೆನ್ನೆಯ ಒಂದು ಬದಿ ಜೊಲ್ಲು ಗ್ರಂಥಿ ಊದಿ ದಪ್ಪನಾಗಿ ನೋವಾಗುತ್ತದೆ.
• ಕಿವಿ ತಳಭಾಗವು ಮುಚ್ಚಿಕೊಳ್ಳುತ್ತದೆ. ನಂತರ 2 ದಿನಗಳಲ್ಲಿ ಇನ್ನೊಂದು ಜೊಲ್ಲು ಗ್ರಂಥಿಯು ಉಬ್ಬಿಕೊಳ್ಳುತ್ತದೆ. ಅದರ ಮೇಲಿನ ಚರ್ಮ ಬಿಗಿದು ನೋವಾಗುತ್ತದೆ ಜೊಲ್ಲು ರಸ ಕಡಿಮೆಯಾಗಿ ಆಹಾರ ತಿನ್ನಲು ಕಷ್ಟ ಪಡಬೇಕಾಗುತ್ತದೆ.
• ಕೆಳದವಡೆ ಅಡಿಯಲ್ಲಿ ನಾಲಿಗೆ ಯ ಕೆಳ ಭಾಗದಲ್ಲಿ ಜೊಲ್ಲು ಗ್ರಂಧಗ್ರಂಥಿಗಳು ಊದಿಕೊಳ್ಳುತ್ತವೆ. ಈ ಊತ 6 ರಿಂದ 10 ದಿನವಿದ್ದು ನಂತರ ಹೋಗುತ್ತದೆ. ಶೇ 10 ರಷ ರಷ್ಟು ರೋಗಿಗಳಲ್ಲಿ ಸೋಂಕು ಮೆದುಳಿಗೆ ಹರಡಿ ಮೆದುಳಿನ ಮೇಲಿನ ಪದರ ದ ಸೋಂಕಿನಿಂದ ಮೆನಿಂಜೈಟಿಸ್ ಉಂಟಾಗುತ್ತದೆ.
• ನಂತರ ತೀವ್ರ ತಲೆನೋವು ವಾಂತಿ ಮತ್ತು ಕತ್ತು ಚಲಿಸಲು ತಡೆ ಒಡ್ಡುತ್ತದೆ. ಇದನ್ನು ಬೆನ್ನಿನ ಮೂಲಕ ಮೆದುಳಿನ ಪದರದಲ್ಲಿರುವ ಸೆರೆಬ್ರೋ ಸೈೈನಲ್ ದ್ರವವನ್ನು ತೆಗೆದು ಪರಿಕ್ಷೀಸುವ ಮೂಲಕ ಗುರುತಿಸಲಾಗುವುದು, ಕೆಲವು ಬಾರಿ ಸೋಂಕು ಮೆದುಳಿನ ಒಳಭಾಗಕ್ಕೆ ಹರಡಿ ಮೆದುಳು ಜ್ವರವನ್ನು ಉಂಟು ಮಾಡುತ್ತದೆ. ಅಲ್ಲದೆ ಕೆಲವು ನರಗಳಿಗೂ ಸೋಂಕು ಹರಡಬಹುದು.
• ಇದರಿಂದ ಕಿವಿ ಮುಖದ ಒಂದು ಭಾಗದ ಪಾರ್ಶ್ವವಾಯು ಉಂಟಾಗಬಹುದು. ಮೆದುಳಿಗೆ ಹರಡಿದೆ ಸೋಂಕು ಸರಿಯಾದ ಚಿಕಿತ್ಸೆ ಪಡೆದರೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್
ಇತರೆ ದುಷ್ಪರಿಣಾಮಗಳು:
ಹರೆಯನ ಹುಡುಗರಲ್ಲಿ ವೃಷಣಕ್ಕೆ ಸೋಂಕು ಹರಡಿ ಊದಿಕೊಳ್ಳುತ್ತದೆ. ಕೆಲವರಿಗೆ ೩ ಕಡೆಯು ಊಗಿಕೊಳ್ಳುತ್ತದೆ. ಕೆನ್ನೆಯ ಬಾವು ಕಂಡ ನಂತರ ಕಾಣುವ ಈ ತೊಂ ದರೆ ವಾಸಿಯಾದ ನಂತರ ವೃಷ್ಣ ಚಿಕ್ಕದಾಗಬಹುದು. ಕೆಲವು ರೋಗಿಗಳಲ್ಲಿ ಪ್ಯಾಂಕ್ರಿಯಾಸ್ ಗ್ರಂಥಿಗೆ ಸೋಂಕು ತಗುಲಿ ಹೊಟ್ಟೆ ನೋವು ವಾಂತಿ, ಜ್ವರ ಜಾಸ್ತಿಯಾಗಬಹುದು. ಹೆಣ್ಣು ಮಕ್ಕಳಿಗೆ ಅಂಡಾಶಯದಲ್ಲಿ ಸೋಂಕು ಹರಡಬಹುದು. ಅಲ್ಲದೆ ಕಿಡ್ನಿಗೆ ಸಹ ತೊಂದರೆಯಾಗಬಹುದು.
ಗರ್ಭಿಣಿಯರಲ್ಲಿ ಸೋಂಕು ತಗುಲಿದರೆ ಗರ್ಭಪಾತವಾಗಬಹುದೆನ್ನಲಾಗಿದೆ. ಅಲ್ಲದೆ ಮಗುವಿನ ತೂಕ ಕಡಿಮೆ ಇದ್ದು ಹಾರ್ಟ್ ಸಮಸ್ಯೆಗಳು ಉಂಟಾಗಬಹುದು. ಮಂಗ ಬಾವು ಬಂದಿದೆ. ಎಂದು ತಿಳಿಯಬೇಕೆಂದರೆ ವೈರಸನ್ನು ಗಂಟಲಿನ ದ್ರವ ಯೂರಿನ್ ಹಾಗೂ ಮೆದುಳಿನ ದ್ರವದಿಂದ ಇದರ ಅನುಕೂಲ ಎಲ್ಲ ಭಾಗದಲ್ಲಿ ಇಲ್ಲವಾದರೆ ಎಲಿಸಾ PCR ಮತ್ತು ರಕ್ತ ಪರೀಕ್ಷೆಯಿಂದ ಗುರುತಿಸಿಕೊಳ್ಳಬಹುದು. ಈ ರೋಗಕ್ಕೆ ವೈದ್ಯರಲ್ಲಿ ಸಲಹೆ ಪಡೆಯಬೇಕು. ಬಿಸಿ ನೀರನ್ನು ಉಪಯೋಗಿಸಬೇಕು. ಈ ಸೋಂಕನ್ನು ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು ಹಳ್ಳಿಯ ಕಡೆ ಇದನ್ನು ಅರ್ಪತಿ ಎ೦ದು ಚಿನ್ನವನ್ನು ಬ್ಸಿ ಸಿ ಮಾಡಿ ಕೆನ್ನೆಗೆ ಮುಟ್ಟಿಸುತ್ತಾರೆ. ಆದರೆ ಯಾವುದೇ ಸಂದೇಹ ಬಂದರೆ ವೈದ್ಯರಲ್ಲಿ ಸಲಹೆ ಪಡೆಯುವುದೇ ಸೂಕ್ತ.
– ಕೆ. ಆರ್ ಲಕ್ಷ್ಮಿ ಶಾಮರಾವ್, ಕಾಳಿದಾಸನಗರ ಚಿಕ್ಕಮಗಳೂರು 702633 0946





