(Election Effect on Share Market) ಇಂದು ಸೋಶಿಯಲ್ ಮೀಡಿಯಾ ನ್ಯೂಸ್ ಚಾನೆಲ್ ಗಳಲ್ಲಿ ಎಕ್ಸಿಟ್ ಪೋಲ್ ಮತ್ತು ಲೋಖಾಸಭೆಯ ಎಲೆಕ್ಷನ್ ರಿಸಲ್ಟ್ ಷೇರ್ ಮಾರ್ಕೆಟ್ ಯಾವ ರೀತಿ ಪರಿಣಾಮ ಬೀರುತ್ತದೆ, ಯಾವ ಷೇರುಗಳನ್ನು ಖರೀದಿಸಬೇಕು?, ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಯಲ್ಲಿ ಕಾಲ್ ಆಪ್ಷನ್ ತಗೋಬೇಕೋ ಇಲ್ಲಾ ಪುಟ್ ಆಪ್ಷನ್ ತಗೋಬೇಕೋ?, ಎಂಬುದರ ಹಲವು ತಿಂಗಳಿನಿಂದ ತುಂಬಾ ಬಿಸಿ ಬಿಸಿಯಾದ ಗಂಭೀರ ಚರ್ಚೆಗಳು ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಷೇರು ಮಾರುಕಟ್ಟೆ ಕೇವಲ ಎಲೆಕ್ಷನ್ ರಿಸಲ್ಟ್, ಬಜೆಟ್, ಅಥವಾ ಇನ್ನಿತರ ವಿಶೇಷ ಸಂಧರ್ಭ ಗಳಿಗೆ ಮಾತ್ರ ಸೀಮಿತವಲ್ಲ, ಷೇರು ಮಾರುಕಟ್ಟೆ ವ್ಯವಹಾರ ನಿರಂತರವಾಗಿ ಮುಂದುವರೆಯುವಂತದ್ದು. ದೇಶದಲ್ಲಿ ಉತ್ತಮ ಹಾಗು ಸ್ಥಿರ ಸರ್ಕಾರವನ್ನು ನಿರೀಕ್ಷಿಸುವುದು ಕೇವಲ ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲ, ಅದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಅಭಿಲಾಷೆಯು ಆಗಿರುತ್ತದೆ.
Share Market Kannada: ನಿಫ್ಟಿ ಸೂಚ್ಯಾಂಕದಲ್ಲಿ ಇನ್ನಷ್ಟು ಕುಸಿತದ ಸಾಧ್ಯತೆ..!?
ಇನ್ನು, ಲೋಕಸಭಾ ಎಲೆಕ್ಷನ್ ರಿಸಲ್ಟ್ (Lok Sabha Election Result) ದಿನದಂದು ಮಾರುಕಟ್ಟೆಯಲ್ಲಿ ಹೇಗೆ ಟ್ರೇಡ್ ಮಾಡಬೇಕು ಕಾಲ್ ಸೈಡ್ ತಗೋಬೇಕೋ ಪುಟ್ ಸೈಡ್ ಹೋಗಬೇಕೋ ಎನ್ನುವವರು ಮಾರ್ಕೆಟ್ ಇಂದ ದೂರ ಉಳಿದು ತಮ್ಮ ಹಣವನ್ನು ಸುರಕ್ಷಿತವಾಗಿಸಿಕೊಳ್ಳುವುದು ಉತ್ತಮ ನಿರ್ಧಾರ ಎನಿಸುತ್ತದೆ. ಏಕೆಂದರೆ ನಿಫ್ಟಿ ವೊಲಟೈಲಿಟಿ ಹಾಗು ಆಪ್ಷನ್ ಪ್ರೀಮಿಯಂ ಅಧಿಕವಾಗಿರುವುದರಿಂದ ಈ ಸಮಯಲ್ಲಿ ಆಪ್ಶನ್ ಬೈಯಿಂಗ್ ನಿಂದ ದೂರ ಇರುವುದು ಒಳ್ಳೆಯದು.
ಉತ್ತಮ ಹಾಗು ಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಉತ್ತಮ ಅಭಿವೃದ್ಧಿಯಾಗಿ, ಹೂಡಿಕೆದಾರನಿಗೆ ತನ್ನ ಹೂಡಿಕೆಯ ಮೇಲೆ ಅತ್ಯುತ್ತಮ ರಿಟರ್ನ್ಸ್ ಸಿಗುತ್ತದೆ ಎನ್ನುವ ಮನಸ್ಥಿತಿಯಲ್ಲಿ ಲೋಕಸಭೆ ಎಲೆಕ್ಷನ್ ರಿಸಲ್ಟ್ ನಿರೀಕ್ಷಿಸುವುದು ಒಳ್ಳೆಯದು, ಹಾಗು ಅದರಂತೆಯೇ ಮಾರ್ಕೆಟ್ ಗೆ ಅನುಗುಣವಾಗಿ ಟ್ರೇಡ್/ಇನ್ವೆಸ್ಟ್ ಮಾಡುವುದು ಒಳಿತು.
ನಿಫ್ಟಿಯ ಮುಂದಿನ ವಾರದ ಪ್ರೈಸ್ ಆಕ್ಷನ್ ಏನಾಗಬಹುದು?

ಪ್ರೈಸ್ ಆಕ್ಷನ್ ಪ್ರಕಾರ ಅನಲೈಸ್ ಮಾಡುವುದಾದರೆ, ಹಿಂದಿನ (ಶುಕ್ರವಾರ) ಬರಹದಲ್ಲಿ ತಿಳಿಸಿದಂತೆ ನಿಫ್ಟಿಯು ಇನ್ನೊಂದು ಡಿಪ್ ಕೊಡುವ ಸಾಧ್ಯತೆ ಇರಬಹುದು, ಇದಕ್ಕೆ ಪೂರಕವೆಂಬಂತೆ ನಿಫ್ಟಿಯ ಕಳೆದ ವಾರದ ಕ್ಯಾಂಡಲ್ 22715 ಕೆಳಗೆ ಕ್ಲೋಸ್ ಆಗಿದ್ದು ಅಲ್ಲದೇ 5EMA ಇಂದ ಕೆಳಗೆ ಕ್ಲೋಸ್ ಆಗಿದೆ. ಹಾಗು ಮೊದಲೇ ಹೇಳಿದ್ದಂತೆ 22500 ಹಂತವು ಮೇಜರ್ ಸಪೋರ್ಟ್ ಆಗಿರಲಿದೆ, ಕಳೆದ ವಾರ 22500ರ ಹಂತವನ್ನು ಎರಡು ಬಾರಿ ರೀಟೇಸ್ಟ್ ಮಾಡಿ ವಾಪಸಾಗಿದ್ದ ನಿಫ್ಟಿ ಬುಲ್ಲಿಶ್ ಸೈಡ್ ನಲ್ಲಿ ಉತ್ತಮ ಕ್ಲೋಸಿಂಗ್ ಕೊಟ್ಟಿಲ್ಲ.
Share Market Kannada: ಷೇರು ಮಾರುಕಟ್ಟೆಯ ಈ ಬೇಸಿಕ್ ವಿಚಾರಗಳನ್ನು ಸಿಂಪಲ್ಲಾಗಿ ತಿಳಿಯಿರಿ!
ಒಂದು ವೇಳೆ ನಿಫ್ಟಿಯು 23100ರ ಮೇಲೆ ಓಪನ್ ಆಗಿ 23150-200ರ ಮೇಲೆ ಕ್ಲೋಸ್ ಆದಲ್ಲಿ ಬುಲ್ಲಿಶ್ ಮಾರ್ಕೆಟ್ ನ ನಿರೀಕ್ಷೆ ಹೊಂದಬಹುದು, ಆದರೆ 23150 ರ ಹಂತದಲ್ಲೇ ಮೇಜರ್ ರೆಸಿಸ್ಟನ್ಸ ಇರುವುದರಿಂದ, ಸಾಧ್ಯತೆಗಳು ಕಡಿಮೆ ಇದೆ ಅಂದು ಹೇಳಬಹುದು. ಇದನ್ನೂ ಮೀರಿ ಬುಲ್ಲಿಶ್ ಆಗಬೇಕಿದ್ದರೆ 23150 ರ ಮೇಲೆ ಗ್ಯಾಪ್ ಅಪ್ ಓಪನ್ ಆಗಬೇಕಾಗುತ್ತದೆ.
ಇದನ್ನೂ ಓದಿ: ರೈತರಿಗೆ ಭರ್ಜರಿ ಗುಡ್ ನ್ಯೂಸ್..!; ಪಿಎಂ ಕಿಸಾನ್ ಹಣ 2000 ಹಣ ಬಿಡುಗಡೆ.!; ಈ ಕೆಲಸ ತಪ್ಪದೇ ಮಾಡಿ
ಅಂತೆಯೇ 22715ರ ಕೆಳಗೆ ಓಪನ್ ಆಗಿ 22500 ರ ಹಂತಕ್ಕಿಂತ ಕೆಳಗೆ ಬಂದರೆ ಕರಡಿಗಳ ಕುಣಿತ ಮುಂದುವರೆಯಲಿದೆ. ಒಟ್ಟಾರೆ ನೋಡುವುದಾದರೆ ನಿಫ್ಟಿಯು ಇನ್ನೊಂದು ಕುಸಿತವನ್ನು ಕಂಡು ಮತ್ತೆ ಬುಲ್ಲಿಶ್ ರಿವರ್ಸಲ್ ನೀಡುವ ಸಾಧ್ಯತೆ ಇದೆ.
(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ, ಮೇಲಿನ ಬರಹವು ಕೇವಲ ವೈಯಕ್ತಿಕ ಅಧ್ಯಯನವಾಗಿರುತ್ತದೆ)





