C T RAVI: ಸಿ ಟಿ ರವಿಗೆ ವಿಧಾನ ಪರಿಷತ್ ಟಿಕೆಟ್ ಘೋಷಣೆ ಮಾಡಿದ ಬಿಜೆಪಿ

(C T RAVI) ಬೆಂಗಳೂರು/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.


ಇದನ್ನೂ ಓದಿ: ರೈತರಿಗೆ ಭರ್ಜರಿ ಗುಡ್ ನ್ಯೂಸ್..!; ಪಿಎಂ ಕಿಸಾನ್ ಹಣ 2000 ಹಣ ಬಿಡುಗಡೆ.!; ಈ ಕೆಲಸ ತಪ್ಪದೇ ಮಾಡಿ


ಮಾಜಿ ಸಚಿವ ಸಿ.ಟಿ. ರವಿ, ಎನ್. ರವಿಕುಮಾರ್, ಎಂ.ಜಿ. ಮುಳೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ. ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

C T RAVI: ಸಿ ಟಿ ರವಿಗೆ ವಿಧಾನ ಪರಿಷತ್ ಟಿಕೆಟ್ ಘೋಷಣೆ ಮಾಡಿದ ಬಿಜೆಪಿ
C T RAVI: ಸಿ ಟಿ ರವಿಗೆ ವಿಧಾನ ಪರಿಷತ್ ಟಿಕೆಟ್ ಘೋಷಣೆ ಮಾಡಿದ ಬಿಜೆಪಿ

ವಿಧಾನಸಭೆಯಿಂದ ವಿಧಾನಪರಿಷತ್‌ ಗೆ ನಡೆಯಲಿರುವ 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಈ ನಡುವೆ ಬಿಜೆಪಿ ತನ್ನ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿಯಿಂದ ಸಿ.ಟಿ. ರವಿ, ರವಿಕುಮಾರ್‌ ಹಾಗೂ ಎಂ.ಜಿ. ಮುಳೆ ಅವರಿಗೆ ಟಿಕೆಟ್‌ ನೀಡಲಾಗಿದ್ದು, ನಾಳೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ಶೃಂಗೇರಿಯಲ್ಲಿ ಸರ್ಜಿ ಭರ್ಜರಿ ಪ್ರಚಾರ;

ಜೂ.3 ರಂದು ನಡೆಯುವ ವಿ.ಪರಿಷತ್ ಚುನಾವಣೆಯು ಕಾರ್ಯಕರ್ತರ ಮತ್ತು ಸಂಘಟನೆಯ ಚುನಾವಣೆ ಆಗಿದ್ದು ಕಾರ್ಯಕರ್ತರ ಪರಿಶ್ರಮದಿಂದ ತಾನು ಪ್ರತಿಶತ 100 ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಜಯಶಾಲಿಗ ಆಗುವೆ ಎಂಬ ವಿಶ್ವಾಸವನ್ನು ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವ್ಯಕ್ತಪಡಿಸಿದರು.

ಅವರು ಶನಿವಾರ ಶೃಂಗೇರಿಗೆ ಭೇಟಿ ಇತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಂಘಟನೆಯ ಶಕ್ತಿಯೇ ಪ್ರಧಾನಿ ಮೋದಿಯವರಿಗೆ ಅಸಾಧ್ಯಗಳನ್ನು ಸಾಧ್ಯವಾಗಿಸಲು ನೆರವಾಯಿತು. ನಾನು 10ರ ಹರೆಯದಿಂದಲೇ ರಾ.ಸ್ವ.ಸಂಘದ ಕಾರ್ಯಕರ್ತ. ಸಂಘ ಶಿಕ್ಷಣ ಪಡೆದಿದ್ದು ಸಂಘದ ವಿಕಾಸ ಟ್ರಸ್ಟ್ ನ್ನು ನಡೆಸುತ್ತಿದ್ದೇನೆ. ಕೈಲಾಗದ ಶತ್ರುವಿಗೆ ಅಪಪ್ರಚಾರವೇ ಕೊನೆಯ ಅಸ್ತ್ರವಾಗಿರುತ್ತದೆ. ಕ್ಷೇತ್ರದಲ್ಲಿ ಎಲ್ಲೂ ಬಂಡಾಯದ ಬಿಸಿ ಇಲ್ಲ ಎಂದು ಹೇಳಿದರು.


ಇದನ್ನೂ ಓದಿ: ಬಡ್ಡಿ ರಹಿತ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್; 3 ಲಕ್ಷ ವರೆಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ರಾಜ್ಯದಲ್ಲಿ ಪ್ರತಿ ವರ್ಷ 3.70 ಲಕ್ಷ ಪದವೀಧರರು ಹೊರ ಬರುತ್ತಿದ್ದು ಅವರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡುವ ಮೂಲಕ ರಾಜ್ಯದ ಆಸ್ತಿ ಆಗಿಸಲು ಕೆಲಸ ಮಾಡುತ್ತೇನೆ. ಜ್ಯೋತಿ ಸಂಜೀವಿನಿ, ಓಪಿಎಸ್/ಎನ್ ಪಿಎಸ್ ಗೊಂದಲಗಳ ವಿರುದ್ದ ಧ್ವನಿ ಎತ್ತುತ್ತ್ತೇನೆ ಎಂದರು.

ಈ ಮತದಾನ ವಿಶಿಷ್ಟದ್ದಾಗಿದ್ದು ಮತಪತ್ರದಲ್ಲಿ ನಮ್ಮ ಹೆಸರು ಭಾವಚಿತ್ರ ಮತ್ತು ಪಕ್ಷದ ಹೆಸರು ಇರುತ್ತದೆ. ಎದುರು ಇರುವ ಬಾಕ್ಸ್ ನಲ್ಲಿ ಚುನಾವಣಾ ಸಿಬ್ಬಂದಿ ಕೊಡುವ ಪೆನ್ನಿನಿಂದ 1 ಎಂದು ಮಾತ್ರ ಬರೆದು ಮತ ಚಲಾಯಿಸಬೇಕಾಗಿರುತ್ತದೆ. ಈ ಕುರಿತು ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಡಿ.ಎನ್.ಜೀವರಾಜ್, ದತ್ತಾತ್ರಿ, ಮಹಾಂತೇಶ್, ತಲಗಾರು ಉಮೇಶ್, ಪುಣ್ಯಪಾಲ, ಬಿ.ಶಿವಶಂಕರ್, ಶ್ರಂಗೇರಿ ಸುಬ್ಬಣ್ಣ ಮತ್ತು ವೇಣುಗೋಪಾಲ್ ಇದ್ದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    7. ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
    8. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    9. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    10. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ