Monday, December 11, 2023
HomeUncategorizedಎನ್.ಆರ್.ಪುರ: ತಾಯಿಯನ್ನೇ ಬಡಿಗೆಯಿಂದ ಹೊಡೆದು ಹತ್ಯೆ

ಎನ್.ಆರ್.ಪುರ: ತಾಯಿಯನ್ನೇ ಬಡಿಗೆಯಿಂದ ಹೊಡೆದು ಹತ್ಯೆ

ಎನ್.ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ತಾಯಿಯನ್ನೇ ಬಡಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಆಲ್ದಾರ ಗ್ರಾಮದಲ್ಲಿ ಸೋಮವಾರ ನಡೆದಿದೆ. ಆಲ್ದಾರ ಗ್ರಾಮದ ಪಾರ್ವತಮ್ಮ(55) ಹತ್ಯೆಯಾದ ವ್ಯಕ್ತಿ.

ಇದನ್ನೂ ಓದಿ;  ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ

ಇದನ್ನೂ ಓದಿ;  ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ

ಪಾರ್ವತಮ್ಮ(55), ಪತಿ ಸಿದ್ದಪ್ಪ (60) ಬೆಳಗ್ಗೆ ಬೇಗ ಎದ್ದೇಳಲಿಲ್ಲ ಎಂಬ ಕಾರಣಕ್ಕಾಗಿ ಮಗ ನಾಗರಾಜ್ (26) ಮನೆಯ ಒಲೆಯಲ್ಲಿದ್ದ ಬಡಿಗೆಯನ್ನು ತೆಗೆದುಕೊಂಡು ತಾಯಿ ಹಾಗೂ ತಂದೆಯನ್ನು ಮನ ಬಂದಂತೆ ಥಳಿಸಿದ್ದಾನೆ. ತೀವ್ರ ಗಾಯಗೊಂಡಿದ್ದ ಪಾರ್ವತಮ್ಮ ಅವರನ್ನು ಅಕ್ಕಪಕ್ಕದವರು ಶಿವಮೊಗ್ಗದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾರ್ವತಮ್ಮ ಮೃತಪಟ್ಟಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಸಿದ್ಧಪ್ಪನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ನಾಗರಾಜ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾರ್ ಕ್ಯಾಷಿಯರ್ ನ ಬರ್ಬರ ಕೊಲೆ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಾರ್ ನ ಕ್ಯಾಷಿಯರ್ ನನ್ನು ಡ್ರ‍್ಯಾಗರ್ ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಚಿನ್ ಕುಮಾರ್ (27) ಕೊಲೆಯಾದ ವ್ಯಕ್ತಿ.

ಇದನ್ನೂ ಓದಿ; ತರೀಕೆರೆ ಶಾಸಕರ ಅಭಿನಂದನಾ ಸಮಾರಂಭದಲ್ಲೇ ವ್ಯಕ್ತಿಯ ಬರ್ಬರ ಕೊಲೆ

ನಿನ್ನೆ ರಾತ್ರಿ 10.00 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದ ಮೂರು ಜನ ಆರೋಪಿಗಳು ರಾತ್ರಿ 11.30 ಆದರೂ ಮದ್ಯ ಸೇವಿಸುತ್ತಿದ್ದರು. “11.30 ಆಗಿದೆ ಬಂದ್ ಮಾಡ್ತೇವೆ ಹೊರಡಿ” ಎಂದು ಕ್ಯಾಶಿಯರ್ ಹೇಳಿದ್ದಕ್ಕೆ ಮೂವರು ಖ್ಯಾತೆ ತೆಗೆದಿದ್ದಾರೆ.

“ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ” ಅಂತಾ ಆರೋಪಿಗಳು ಗಲಾಟೆ ಮಾಡಿ ಯುವಕನ ಎದೆಗೆ ಡ್ರ‍್ಯಾಗರ್ ನಿಂದ ಚುಚ್ಚಿದ್ದಾರೆ. ಇದೆ ವೇಳೆ 112 ವಾಹನ ಕೂಡ ಬಂದಿದ್ದು, ಪೊಲೀಸರ ಎದುರೆ ಜಗಳ ನಡೆದು ಕೊಲೆಯಾಗಿದೆ. ನಿರಂಜನ, ಸತೀಶ, ಅಶೋಕನಾಯ್ಕ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ; ಡ್ರೈವಿಂಗ್ ಸ್ಕೂಲ್ ಕುಮಾರಣ್ಣ ಇನ್ನಿಲ್ಲ, ಅನಾರೋಗ್ಯ ಕಾರಣದಿಂದ ನಿಧನ

ಇನ್ನು ಮೃತ ಸಚಿನ್ ಗೆ ಆಯನೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಮೊದಲೇ ಸಚಿನ್ ಸಾವನ್ನಪ್ಪಿದ್ದಾನೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಪೈಪ್ ಲೈನ್ ದುರಸ್ತಿ ಕಾಮಗಾರಿಯಿಂದ ತೊಂದರೆ: ಸ್ಥಳೀಯರ ಪ್ರತಿಭಟನೆ

Most Popular

Recent Comments