ಹಾಸನ: (ನ್ಯೂಸ್ ಮಲ್ನಾಡ್ ವರದಿ) ಮಸೀದಿ ಹಾಗೂ ದರ್ಗಾಗಳನ್ನೇ ಟಾರ್ಗೆಟ್ ಮಾಡಿ ಸ್ವೀಕರ್, ಕ್ಯಾಮೆರಾ ಸೇರಿ ಹಲವು ವಸ್ತುಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಸುಹೇಬ್ (35) ಬಂಧಿತ ಆರೋಪಿ.
ಇದನ್ನೂ ಓದಿ; ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ
ಇದನ್ನೂ ಓದಿ; ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ
ಈತ ವಿರಾಜಪೇಟೆಯ ಸುನ್ನತ್ ಬೀದಿಯ ನಿವಾಸಿ. ಬಂಧಿತನಿಕದ 5,35,000 ರೂ. ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
7 ಆಂಪ್ಲಿಪ್ಲೇಯರ್, 6 ಸಿಸಿ ಕ್ಯಾಮೆರಾಗಳು, 1 ಕಂಪ್ಯೂಟರ್, 1 ಟಿವಿ, 1 ಸೌಂಡ್ ಮಿಕ್ಸರ್, 2 ಸ್ಪೀಕರ್, 2 ಮಾನಿಟರ್, 1 ಡಿವಿಆರ್, ಬೀಗ ಹೊಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್, 2 ಸ್ಪೀಕರ್ ಇರುವ ಹೋಂ ಥಿಯೇಟರ್, ಸಿಸಿ ಕ್ಯಾಮೆರಾ ಸ್ವಿಚ್, ಒಂದು ಮಾನಿಟರ್, ಕ್ಯಾನೆನ್ ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾರದಾಂಬೆ ದೇಗುಲ
- ಲಾರಿಗೆ ಡಿಕ್ಕಿ ಹೊಡೆದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು
- ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವು
ಮೈಸೂರಿನ ಇಲವಾಲದ ರಬ್ಬಾನಿ ಮಸೀದಿ, ಬಿಳಿಕೆರೆಯ ಈದ್ಗಾ ಮಸೀದಿ, ಪಿರಿಯಾಪಟ್ಟಣದ ಪಿರ್ದೋಸ್ ಮಸೀದಿ, ಹಳೆ ಹುಣಸೂರಿನ ಗೌಸಿಯಾ ಮಸೀದಿ, ಕೆ.ಆರ್.ನಗರದ ಜಾಮೀಯಾ ಮಸೀದಿ, ಹಾಸನದ ಕುಬಾ ಮಸೀದಿ ಮತ್ತು ಗುಜರಾತಿ ದರ್ಗಾ, ಗಂಡಸಿಯ ಮದಿನಾ ಮಸೀದಿ, ಅರಸೀಕೆರೆ ನಗರದ ಜಾಮೀಯಾ ಮಸೀದಿ ಮತ್ತು ಖಾದರ್ ಚಾವಲಿ ದರ್ಗಾಗಳಲ್ಲಿ ಮೊಹಮ್ಮದ್ ಸುಹೇಬ್ ಕೈಚಳಕ ತೋರಿದ್ದನು.
ಕಳ್ಳತನ ಮಾಡಿದ ವಸ್ತುಗಳನ್ನು ಶ್ರೀರಂಗಪಟ್ಟಣದ ಮನೆಯೊಂದರಲ್ಲಿ ಇಟ್ಟು ನಂತರ ಮಾರಾಟ ಮಾಡುತ್ತಿದ್ದನು. ಹತ್ತು ಮಸೀದಿ ಹಾಗೂ ದರ್ಗಾಗಳಲ್ಲಿ ಕಳ್ಳತನ ಮಾಡಿದ ಈತ, ಒಟ್ಟು ಎಂಟು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು. ಮದುವೆಯಾದ ನಂತರ ಈತನನ್ನು ಜಮಾತ್‌ನಿಂದ ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಮೊಹಮ್ಮದ್ ಸುಹೇಬ್ ದರ್ಗಾ, ಮಸೀದಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾರ್ ಕ್ಯಾಷಿಯರ್ ನ ಬರ್ಬರ ಕೊಲೆ
ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಾರ್ ನ ಕ್ಯಾಷಿಯರ್ ನನ್ನು ಡ್ರ‍್ಯಾಗರ್ ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಚಿನ್ ಕುಮಾರ್ (27) ಕೊಲೆಯಾದ ವ್ಯಕ್ತಿ.
ಇದನ್ನೂ ಓದಿ; ತರೀಕೆರೆ ಶಾಸಕರ ಅಭಿನಂದನಾ ಸಮಾರಂಭದಲ್ಲೇ ವ್ಯಕ್ತಿಯ ಬರ್ಬರ ಕೊಲೆ
ನಿನ್ನೆ ರಾತ್ರಿ 10.00 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದ ಮೂರು ಜನ ಆರೋಪಿಗಳು ರಾತ್ರಿ 11.30 ಆದರೂ ಮದ್ಯ ಸೇವಿಸುತ್ತಿದ್ದರು. “11.30 ಆಗಿದೆ ಬಂದ್ ಮಾಡ್ತೇವೆ ಹೊರಡಿ” ಎಂದು ಕ್ಯಾಶಿಯರ್ ಹೇಳಿದ್ದಕ್ಕೆ ಮೂವರು ಖ್ಯಾತೆ ತೆಗೆದಿದ್ದಾರೆ.
“ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ” ಅಂತಾ ಆರೋಪಿಗಳು ಗಲಾಟೆ ಮಾಡಿ ಯುವಕನ ಎದೆಗೆ ಡ್ರ‍್ಯಾಗರ್ ನಿಂದ ಚುಚ್ಚಿದ್ದಾರೆ. ಇದೆ ವೇಳೆ 112 ವಾಹನ ಕೂಡ ಬಂದಿದ್ದು, ಪೊಲೀಸರ ಎದುರೆ ಜಗಳ ನಡೆದು ಕೊಲೆಯಾಗಿದೆ. ನಿರಂಜನ, ಸತೀಶ, ಅಶೋಕನಾಯ್ಕ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ; ಡ್ರೈವಿಂಗ್ ಸ್ಕೂಲ್ ಕುಮಾರಣ್ಣ ಇನ್ನಿಲ್ಲ, ಅನಾರೋಗ್ಯ ಕಾರಣದಿಂದ ನಿಧನ
ಇನ್ನು ಮೃತ ಸಚಿನ್ ಗೆ ಆಯನೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಮೊದಲೇ ಸಚಿನ್ ಸಾವನ್ನಪ್ಪಿದ್ದಾನೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಪೈಪ್ ಲೈನ್ ದುರಸ್ತಿ ಕಾಮಗಾರಿಯಿಂದ ತೊಂದರೆ: ಸ್ಥಳೀಯರ ಪ್ರತಿಭಟನೆ