(May 01) ಮೇ 1 ರಿಂದ ದೇಶದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಖಾಸಗಿ ಬ್ಯಾಂಕ್ ಗಳ ಕೆಲವು ನಿಯಮಗಳಲ್ಲಿಯೂ ಬದಲಾವಣೆಗಳಾಗಲಿವೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಬದಲಾವಣೆಯಾಗಲಿದೆ. ಹೀಗಾಗಿ ಸಾರ್ವಜನಿಕರಿಗೆ ಹೆಚ್ಚು ಎಫೆಕ್ಟ್ ಆಗುತ್ತೆ ಎನ್ನಬಹುದು. ಮೇ 1 ರಿಂದ ಯಾವುದೆಲ್ಲಾ ನಿಯಮದಲ್ಲಿ ಬದಲಾವಣೆಯಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಮೇ ಒಂದರಿಂದ ಬದಲಾಗಲಿದೆ ಈ ಎಲ್ಲ ರೂಲ್ಸ್!:
1.ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ:
ವಿವಿಧ ಬ್ಯಾಂಕುಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಮೇ 1ರಿಂದ ಬದಲಾವಣೆಯಾಗಲಿದೆ. ಯೆಸ್ ಬ್ಯಾಂಕ್ (YES BANK) ವೆಬ್ ಸೈಟ್ ಪ್ರಕಾರ ಉಳಿತಾಯ ಖಾತೆಗಳ ವಿವಿಧ ರೂಪಾಂತರಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ನಲ್ಲಿ ಬದಲಾವಣೆ ಮಾಡಲಾಗಿದೆ. ಅಕೌಂಟ್ ಪ್ರೊ ಮ್ಯಾಕ್ಸ್ ಅಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50 ಸಾವಿರ ರೂ. ಇನ್ನು ಗರಿಷ್ಠ ಶುಲ್ಕಕ್ಕೆ ಒಂದು ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಪ್ರೊ ಪ್ಲಸ್, ಯೆಸ್ ಎಸೆನ್ಸ್ ಎಸ್ ಎ, ಎಸ್ ರೆಸ್ಪೆಕ್ಟ್ ಎಸ್ ಎ ಖಾತೆಗಳಲ್ಲಿ ಗರಿಷ್ಠ ಶುಲ್ಕವನ್ನು 25 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಪ್ರೊ ಮ್ಯಾಕ್ಸ್ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್ 50 ಸಾವಿರ ರೂ.
ಇದನ್ನೂ ಓದಿ: ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
2.ವಾರ್ಷಿಕ ಶುಲ್ಕದಲ್ಲಿ ಪರಿಷ್ಕರಣೆ:
ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಗೆ ಸಂಬಂಧಿಸಿದ ಸೇವಾ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕವನ್ನು ನಗರ ಪ್ರದೇಶಗಳಲ್ಲಿ 200ರೂ.ಗೆ ಪರಿಷ್ಕರಿಸಲಾಗಿದೆ. ಹಾಗೆಯೇ ಗ್ರಾಮೀಣ ಭಾಗಗಳಲ್ಲಿ ಈ ಶುಲ್ಕ 99ರೂ. ಇದರ ಹೊರತಾಗಿ ಗ್ರಾಹಕರು 25ಕ್ಕೂ ಹೆಚ್ಚು ಲೀವ್ಸ್ ಹೊಂದಿರುವ ಚೆಕ್ ಬುಕ್ ತೆಗೆದುಕೊಳ್ಳಲು ಕೂಡ ಶುಲ್ಕ ಪಾವತಿಸಬೇಕಾಗುತ್ತದೆ. ಐಎಂಪಿಎಸ್ ವಹಿವಾಟಿನ ಮೊತ್ತವನ್ನು ಪ್ರತಿ ವಹಿವಾಟಿಗೆ 2.50ರೂ.ನಿಂದ 15ರೂ.ಗೆ ನಿಗದಿಪಡಿಸಲಾಗಿದೆ.
3.ಹಿರಿಯ ನಾಗರಿಕರಿಗೆ ವಿಶೇಷ FD ಗಳಲ್ಲಿ ಹೂಡಿಕೆ:
HDFC ಬ್ಯಾಂಕ್ ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಇದು ವಿಶೇಷ ಹಿರಿಯ ನಾಗರಿಕರ FD ಯೋಜನೆಯಾಗಿದ್ದು, ಹೆಚ್ಚಿನ ಬಡ್ಡಿದರ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯನ್ನು 2020ರ ಮೇನಲ್ಲಿ ಪ್ರಾರಂಭಿಸಲಾಯಿತು. ಇನ್ನು ಈ ಯೋಜನೆಯಲ್ಲಿ ಹೂಡಿಕೆಯ ಕೊನೆಯ ದಿನಾಂಕವನ್ನು 2024ರ ಮೇ 10ರ ತನಕ ವಿಸ್ತರಿಸಲಾಗಿದೆ.
ಇದನ್ನೂ ಓದಿ: 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಗೃಹ ಸಾಲ ಬೇಕಾ?; ಈ 5 ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ದರ!; ಇಲ್ಲಿದೆ ನೋಡಿ ಡಿಟೈಲ್ಸ್
4.LPG ಗ್ಯಾಸ್ ಸಿಲಿಂಡರ್ ಬೆಲೆ:(May 01)
LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪ್ರತಿ ತಿಂಗಳ ಮೊದಲ ದಿನ ಬದಲಾವಣೆ ಮಾಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 14 ಕೆಜಿ ಗೃಹ ಬಳಕೆ ಹಾಗೂ 19 ಕೆಜಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ದರವನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 2024ರ ಮಾರ್ಚ್ ತಿಂಗಳಲ್ಲಿ ಚುನಾವಣಾ ದಿನಾಂಕ ಘೋಷಿಸುವ ಕೆಲವು ದಿನಗಳ ಮುನ್ನ ಕೇಂದ್ರ ಸರ್ಕಾರ LPG ಸಿಲಿಂಡರ್ ಬೆಲೆಯನ್ನು 100ರೂ. ಕಡಿತಗೊಳಿಸಿತ್ತು.

5.ಕ್ರೆಡಿಟ್ ಕಾರ್ಡ್ ಶುಲ್ಕ:
IDFC ಹಾಗೂ ಯೆಸ್ ಬ್ಯಾಂಕ್ (YES BANK) ದಿನಬಳಕೆ ಬಿಲ್ ಪಾವತಿಗಳಿಗೆ ಶೇ.1ರಷ್ಟು ಜಿಎಸ್ ಟಿ (GST) ವಿಧಿಸುತ್ತದೆ. ಅದೇ ಯೆಸ್ ಬ್ಯಾಂಕ್ ಗ್ರಾಹಕರಿಗೆ ಈ ಮಿತಿ 15,000ರೂ. ಒಂದೇ ಬಿಲ್ಲಿಂಗ್ ಸೈಕಲ್ ನಲ್ಲಿ ಐಡಿಎಫ್ ಸಿ ಇದನ್ನು 20,000ರೂ.ಗೆ ಹೆಚ್ಚಿಸಿದೆ. ಹೊಸ ಶುಲ್ಕಗಳು ಮೇ 1ರಿಂದ ಜಾರಿಗೆ ಬರಲಿವೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್
- ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ







Leave a Reply