land 25: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ

(land 25:) ಕೃಷಿ ಭೂಮಿಯಲ್ಲಿರುವ ಮರಗಳನ್ನು ಕಡಿಯಲು ಅಥವಾ ಬೆಳೆಗಳಿಗೆ ತೊಂದರೆ ಉಂಟು ಮಾಡುವ ಮರಗಳನ್ನು ಕಡಿಯುವುದನ್ನು ಸಾರಾಗಗೊಳಿಸಲು ಕೇಂದ್ರ ಸರ್ಕಾರ ಮಾದರಿ ನಿಯಮಗಳನ್ನು ಹೊರಡಿಸಿದೆ. ಈ ನಿರ್ಣಯವು ರೈತರ ಆದಾಯವನ್ನು ದ್ವಿಗುಣಗೊಳಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಾಯಕವಾಗಿದೆ. ಮತ್ತು ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ನ್ನೂ ಓದಿ: ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ


ಈ ಸಂಬಂಧ ಜೂನ್​ 19 ರಂದು ಪರಿಸರ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಕಳುಹಿಸಿದೆ. ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯುವ ಮಾದರಿ ನಿಯಮಗಳ ಉದ್ದೇಶವು, ಕೃಷಿ ಅರಣ್ಯೀಕರಣದಲ್ಲಿ ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವುದು ಮತ್ತು ಅನಗತ್ಯ ಅಡೆತಡೆಗಳನ್ನು ಎದುರಿಸದೆ ರೈತರು ತಮ್ಮ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

(land 25:) ರೈತರ ಆದಾಯವನ್ನು ದ್ವಿಗುಣಗೊಳಿಸಲು, ಕಾಡುಗಳ ಹೊರಗೆ ಮರಗಳ ಹೊದಿಕೆಯನ್ನು ಹೆಚ್ಚಿಸಲು, ಹವಾಮಾನ ಬದಲಾವಣೆಯನ್ನು ತಗ್ಗಿಸಲು, ಮರದ ಆಮದನ್ನು ಕಡಿಮೆ ಮಾಡಲು ಸರ್ಕಾರವು ಕೃಷಿ ಅರಣ್ಯೀಕರಣವನ್ನು ಉತ್ತೇಜಿಸುತ್ತಿದೆ. ಇದು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಹವಾಮಾನ ಗುರಿಗಳನ್ನು ಸಹ ಬೆಂಬಲಿಸುತ್ತದೆ.


ನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್‌ ಆ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್‌ ಶಿಪ್


ಇಷ್ಟು ದಿನಗಳ ಕಾಲ ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯಲು ಸ್ಪಷ್ಟವಾದ, ಸರಳ ನಿಯಮಗಳು ಇಲ್ಲದಿದ್ದರಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೈತರಿಗೆ ಅಡಚಣೆಯಾಗುತ್ತಿತ್ತು. ಈ ಹೊಸ ಮಾರ್ಗಸೂಚಿಯಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯುವುದು ಸಲುಭವಾಗಲಿದೆ. ಮತ್ತು ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೂಪಿಸಲಾದ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಮಾದರಿ ನಿಯಮಗಳ ಪ್ರಕಾರ, 2016 ರ ಮರ-ಆಧಾರಿತ ಕೈಗಾರಿಕೆಗಳು (ಸ್ಥಾಪನೆ ಮತ್ತು ನಿಯಂತ್ರಣ) ಮಾರ್ಗಸೂಚಿಗಳ ಅಡಿಯಲ್ಲಿ ಈಗಾಗಲೇ ರಚಿಸಲಾದ ರಾಜ್ಯ ಮಟ್ಟದ ಸಮಿತಿ (SLC) ಈ ನಿಯಮಗಳಿಗಾಗಿ ಕಾರ್ಯನಿರ್ವಹಿಸುತ್ತದೆ. ಇದೀಗ ಸಮಿತಿಯಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸೇರಿದ್ದಾರೆ. ವಾಣಿಜ್ಯ ಮೌಲ್ಯದ ಮರಗಳನ್ನು, ವಿಶೇಷವಾಗಿ ಮರಗಳನ್ನು ಕಡಿಯುವುದು ಮತ್ತು ಸಾಗಣೆ ಮಾಡುವ ನಿಯಮಗಳನ್ನು ಸರಳಗೊಳಿಸುವ ಮೂಲಕ ಕೃಷಿ ಅರಣ್ಯೀಕರಣವನ್ನು ಹೇಗೆ ಉತ್ತೇಜಿಸಬೇಕು ಎಂಬುದರ ಕುರಿತು ಸಮಿತಿಯು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಿದೆ.


ನ್ನೂ ಓದಿ: 7th ಹಾಗೂ SSLC ಪಾಸ್‌ ಆಗಿದ್ರು ಸಿಗುತ್ತೆ ಬ್ಯಾಂಕ್‌ ನಲ್ಲಿ ಕೆಲಸ; 12,000 ದಿಂದ 30,000 ಸಂಬಳ


(land 25:) ಮರ ಕಡಿಯಲು NTMS ಪೋರ್ಟ್​ಲ್​ನಲ್ಲಿ ನೋಂದಣಿ ಕಡ್ಡಾಯ:
10 ಕ್ಕಿಂತ ಹೆಚ್ಚು ಮರಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಹೊಂದಿರುವ ಭೂಮಿ ಮಾಲೀಕರು NTMS ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಕಡಿಯಬೇಕಾದ ಮರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು.

ನೋಂದಣಿ ಪ್ರಕ್ರಿಯೆ:
* ರೈತರು ತಮ್ಮ ಭೂಮಿಯ ವಿವರಗಳನ್ನು NTMS ಪೋರ್ಟಲ್​ನಲ್ಲಿ ನಮೂದಿಸಬೇಕು.
* ಮರಗಳ ಸಂಖ್ಯೆ ಪ್ರಭೇದ, ನೆಟ್ಟ ದಿನಾಂಕ ಮತ್ತು ಎತ್ತರದ ವಿವರಗಳನ್ನು ನೀಡಬೇಕು.
* ಎಸ್​ಎಲ್​ಸಿ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತದೆ.
* ಮರಗಳನ್ನು ಕಡಿಯಲು ಮತ್ತು ಸಾಗಾಣಿಕೆ ಮಾಡಲು ಅನುಮತಿ ಪತ್ರದ ಅಗತ್ಯವಿದೆ.
* ಅರಣ್ಯ, ಕೃಷಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಅಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ.

land 25: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ
land 25: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ

ನ್ನೂ ಓದಿ: ಅಕ್ಕಿ, ಬೇಳೆ ಕಾಳುಗಳ ದರ ಇಳಿಕೆ; ಕಾರಣಗಳೇನು ಗೊತ್ತಾ?


ಇತ್ತೀಚಿನ ಜನಪ್ರಿಯ ಸುದ್ದಿಗಳು (land 25:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ