Rice prices: ಅಕ್ಕಿ, ಬೇಳೆ ಕಾಳುಗಳ ದರ ಇಳಿಕೆ

(Rice prices:) ಕಳೆದ ವರ್ಷದ ಉತ್ತಮ ಮುಂಗಾರು ಹಾಗೂ ಕೇಂದ್ರ ಸರಕಾರ ಕೈಗೊಂಡಿದ್ದ ಕ್ರಮಗಳು ಫಲ ನೀಡಲಾರಂಭಿಸಿವೆ. ಸಗಟು ಮಾರುಕಟ್ಟೆಯಲ್ಲಿ ಬೇಳೆಗಳು ಹಾಗೂ ಅಕ್ಕಿ ದರ ಗಣನೀಯ ಇಳಿಕೆಯಾಗಿದೆ. ಚಿಲ್ಲರೆ ವರ್ತಕರು ಸಹ ಬೆಲೆ ಇಳಿಕೆ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗುತ್ತಿದ್ದಾರೆ.


ನ್ನೂ ಓದಿ: ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!


ದಿನನಿತ್ಯದ ಅಡುಗೆಯಲ್ಲಿ ಅತ್ಯಗತ್ಯವಾಗಿರುವ ತೊಗರಿಬೇಳೆ, ಉದ್ದಿನಬೇಳೆ ಜೊತೆ ಇತರ ಬೇಳೆಕಾಳುಗಳು ಹಾಗೂ ಸ್ಟೀಮ್‌ ರೈಸ್‌ ದರ ಗಣನೀಯವಾಗಿ ಇಳಿಕೆಯಾಗಿದೆ. ಕೇಂದ್ರ ಸರಕಾರ ಕೆಲವು ಅನ್ಯ ದೇಶಗಳಿಂದ ತೊಗರಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ತೊಗರಿಬೇಳೆ ದರ ಕಡಿಮೆಯಾಗಿದೆ. ಕೇಂದ್ರ ಸರಕಾರವು ಕಳೆದ ಅಕ್ಟೋಬರ್‌ ನಲ್ಲಿಯೇ ಅಕ್ಕಿ ಆಮದು-ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದೆ. ಅದರಿಂದಾಗಿ ನೆರೆಯ ಮ್ಯಾನ್ಮಾರ್‌, ಥಾಯ್ಲೆಂಡ್‌ ಮೊದಲಾದ ದೇಶಗಳಿಂದ ಅಕ್ಕಿ ಆಮದು ಹೆಚ್ಚಿದೆ.


ನ್ನೂ ಓದಿ: ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ


(Rice prices:) ಪಡಿತರ ವಿತರಣೆಯಲ್ಲೂ ಭರಪೂರ ಅಕ್ಕಿ
ಬಿಪಿಎಲ್‌ ಕುಟುಂಬದವರಿಗೆ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುತ್ತಿರುವುದರಿಂದ, ಕೆಲವು ಕುಟುಂಬಗಳಿಗೆ ಅರ್ಧದಿಂದ ಒಂದು ಕ್ವಿಂಟಲ್‌ವರೆಗೆ ಅಕ್ಕಿ ಸಿಗುತ್ತಿದೆ. ಬಹುತೇಕ ಕುಟುಂಬಗಳಿಗೆ ಅಷ್ಟೊಂದು ಪ್ರಮಾಣದ ಅಕ್ಕಿ ಅಗತ್ಯವಿಲ್ಲ. ಆ ಅಕ್ಕಿ ಬಹುತೇಕ ಹೋಟೆಲ್‌ಗಳಿಗೆ ಹೋಗುತ್ತಿದೆ. ಸ್ಟೀಮ್‌ ಅಕ್ಕಿ ದರ ಕುಸಿತಕ್ಕೆ ಇದೂ ಒಂದು ಕಾರಣವಾಗಿದೆ. ಆದರೆ ‘ರಾ ರೈಸ್‌’ ಹೆಚ್ಚು ಪೂರೈಕೆಯಿಲ್ಲದ ಕಾರಣ ಅದರ ದರ ಇಳಿಕೆಯಾಗಿಲ್ಲ.


ನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ


(Rice prices:) ಬೆಲೆ ಇಳಿಕೆಗೆ ಕಾರಣಗಳೇನು?
1. ದೇಶದಲ್ಲಿಅಧಿಕ ಭತ್ತ ಉತ್ಪಾದನೆ
2. ತೊಗರಿ ಆಮದು ಹೆಚ್ಚಳ; ಅಕ್ಕಿ ರಫ್ತು, ಆಮದು ನಿರ್ಬಂಧ ತೆರವು
3. ನೆಟೆ ರೋಗ ನಿಯಂತ್ರಣದಿಂದ ತೊಗರಿ ಉತ್ಪಾದನೆ ಹೆಚ್ಚಳ
4. ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ರೈತರಿಂದ ದಾಸ್ತಾನು ಮಾಡಿದ್ದ ಅಕ್ಕಿ, ಬೇಳೆ ಮಾರಾಟ
5. ಆವಕ ಹೆಚ್ಚಳದಿಂದ ಹಳೆ ದಾಸ್ತಾನು ಖಾಲಿ ಮಾಡಲು ಮುಂದಾದ ವರ್ತಕರು

Rice prices: ಅಕ್ಕಿ, ಬೇಳೆ ಕಾಳುಗಳ ದರ ಇಳಿಕೆ
Rice prices: ಅಕ್ಕಿ, ಬೇಳೆ ಕಾಳುಗಳ ದರ ಇಳಿಕೆ

ಇತ್ತೀಚಿನ ಜನಪ್ರಿಯ ಸುದ್ದಿಗಳು  (Rice prices:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?