BBK12: ಬಿಗ್‌ ಬಾಸ್ ಕನ್ನಡ‌ -12ರ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

(BBK12: ) ಬಿಗ್ ಬಾಸ್ ಕನ್ನಡ – 12ರ ಬಗ್ಗೆ ಆಯೋಜಕರು ಮಹತ್ವದ ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮದ ಬಗ್ಗೆ ಬಿಗ್‌ ಅಪ್ಡೇಟ್ ನೀಡಿದ್ದಾರೆ.


ನ್ನೂ ಓದಿ: ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ


ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭದ ಕುರಿತು ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಪ್ರತಿ ಸಲ ಶೋ ಆರಂಭವಾಗುವ ಮುನ್ನ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಇರುತ್ತಾರೆ ಎನ್ನುವ ಬಗ್ಗೆ ಸಾಮಾಹಿಕ ಜಾಲತಾಣದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡಲು ಶುರುವಾಗುತ್ತಿತ್ತು. ಆದರೆ ಈ ವರ್ಷ ಬಿಗ್ ಬಾಸ್ ಹೋಸ್ಟ್ ಯಾರು ಎನ್ನುವುದೇ ಎಲ್ಲರಿಗೂ ಕುತೂಹಲವಿತ್ತು. ಈ ಬಗ್ಗೆ ಆಯೋಜಕರು ಸುದ್ದಿಗೋಷ್ಠಿ ನಡೆಸಿ ‘ಬಿಗ್ ಬಾಸ್ ಕನ್ನಡ – 12ರ ಬಗ್ಗೆ ಮಾಹಿತಿ ನೀಡಿದ್ದಾರೆ.

(BBK12: ) ಜೀಯೋ ಸಂಸ್ಥೆಯ ಕೃಷ್ಣನ್ ಅವರು ಮಾತನಾಡಿ, ಬಿಗ್ ಬಾಸ್ ಎನ್ನುವುದು ಬರೀ ಶೋವಲ್ಲ. ಇದು ಜನರೊಂದಿಗೆ ಬೆರೆತ ಕಾರ್ಯಕ್ರಮ. ಸುದೀಪ್ ಅವರೇ ಈ ಬಾರಿ ಶೋ ನಡೆಸಿಕೊಡಲಿದ್ದಾರೆ ಎಂದಿದ್ದಾರೆ. ಆ ಬಳಿಕ ಕಿಚ್ಚ ಸುದೀಪ್ ಅವರ, 11ಸೀಸನ್ ಗಳ ನಿರೂಪಣೆ ಜರ್ನಿಯನ್ನು ರಿವೀಲ್ ಮಾಡಲಾಗಿದೆ. ಇದರ ಮೂಲಕ ಮುಂದಿನ ಸೀಸನ್ (ಬಿಗ್ ಬಾಸ್ ಕನ್ನಡ – 12) ಗೂ ಅವರೇ ನಿರೂಪಕ ಎನ್ನುವುದನ್ನು ರಿವೀಲ್ ಮಾಡಲಾಗಿದೆ.


ನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್‌ ಆ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್‌ ಶಿಪ್


ಎಲ್ಲವೂ ಪ್ರಾಮಾಣಿಕತೆಯಿಂದಲೇ ಆದದ್ದು, ಆವತ್ತು ನಾನು ಶೋ ಮಾಡೋಕೆ ಆಗಲ್ಲ ಹೇಳಿದ್ದು ಪ್ರಾಮಾಣಿಕತೆಯಿಂದಲೇ. ನಾನು ಆವತ್ತು ಟ್ವಿಟ್ ರಾತ್ರಿ 2:30ಗೆ ಹಾಕಿದ್ದೆ. ಅದನ್ನು ಬಹುಶಃ ಯಾರೂ ಸೀರಿಯಸ್ ಆಗಿ ತಕ್ಕೊಂಡಿಲ್ಲ. ಇಲ್ಲಿಗೆ ವಾಪಾಸ್ ಬಂದಿರೋದು ಕೂಡ ಅಷ್ಟೇ ಪ್ರಾಮಾಣಿಕತೆಯಿಂದ. ಜನರ ರಿಯಾಕ್ಷನ್ ನೋಡಿ ನನಗೆ ತುಂಬಾ ಖುಷಿಯಾಯಿತು. ನಾನು ಕೂಡ ಖುಷಿಯಾಗಿದ್ದೀನಿ ಎಂದು ಸುದೀಪ್‌ ಹೇಳಿದ್ದಾರೆ.

(BBK12: ) ಸೀಸನ್ ಆರಂಭದಲ್ಲೇ ನಾನು ಶೋ ಬಿಡುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದೆ, ಎಂಡ್ ಅಲ್ಲಿ ಕನ್ಫರ್ಮ್ ಮಾಡಿದೆ. ಕಳೆದ ಎರಡು – ಮೂರು ವರ್ಷಗಳಿಂದ ಶೋ ಬೆಳೆದಿದೆ. ಬಿಗ್ ಬಾಸ್ ಅಂದಾಗ ಜನ ಅದನ್ನು ಐಪಿಎಲ್ ರೀತಿ ನೋಡುತ್ತಾರೆ. ಹೀಗಿರುವಾಗ ಈ ಶೋವನ್ನು ಒಳ್ಳೆ ರೀತಿ ಮಾಡಿಕೊಡೋದು ನಮ್ಮ ಜವಾಬ್ದಾರಿ. ಬಿಗ್ ಬಾಸ್ ಎಲ್ಲರಿಗೂ ಒಂದು ಕೆರಿಯರ್ ರೂಪಿಸಿಕೊಟ್ಟಿದೆ. ಇದೊಂದು ದೊಡ್ಡ ವೇದಿಕೆ ಎಂದಿದ್ದಾರೆ.


ನ್ನೂ ಓದಿ: 7th ಹಾಗೂ SSLC ಪಾಸ್‌ ಆಗಿದ್ರು ಸಿಗುತ್ತೆ ಬ್ಯಾಂಕ್‌ ನಲ್ಲಿ ಕೆಲಸ; 12,000 ದಿಂದ 30,000 ಸಂಬಳ


ನೀವು ಕಂಡಿಷನ್ಸ್‌ಗಳನ್ನು ಹಾಕಿದ್ದೀರಾ? ಈ ಸೀಸನ್‌ನಲ್ಲಿ ವಿವಾದಿತ ಸ್ಪರ್ಧಿಗಳು ಇರುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಬಿಗ್ ಬಾಸ್ ವಿಭಿನ್ನ ಸ್ಪರ್ಧಿಗಳ ಶೋ. ಇಲ್ಲಿ ಡಿಫ್ರೆಂಟ್ ವ್ಯಕ್ತಿತ್ವಗಳು ಬೇಕು. ವಿವಿಧ ವ್ಯಕ್ತಿತ್ವ ಇಲ್ಲದಿದ್ರೆ ಬಿಗ್ ಬಾಸ್ ಹೇಗೆ ಆಗುತ್ತದೆ. ನಾವು ಯಾಕೆ ಇಂತಹ ಸ್ಪರ್ಧಿಗಳನ್ನು ಕಳುಹಿಸುತ್ತಿದ್ದೇವೆ ಎನ್ನುವ ಕ್ಲಾರಿಟಿ ಬೇಕು. ಅದಿಲ್ಲದಿದ್ರೆ ಶೋ ನಡೆಸುವಗೋಸ್ಕರ ಅನಾವಶ್ಯಕವಾಗಿ ಒಬ್ಬರನ್ನು ಹಾಕಿದಾಗೆ ಆಗುತ್ತದೆ. ಇದನ್ನು ನಾನು ನಿಭಾಯಿಸುತೇನೆ. ನಾನ್ಯಾವತ್ತೂ ಈ ರೀತಿಯ ಕಂಡಿಷನ್ಸ್ ಹಾಕಿಲ್ಲ ಎಂದಿದ್ದಾರೆ.

(BBK12: ) ಈ ಸೀಸನ್‌ನಲ್ಲಿ ಏನಾದರೂ ಐಡಿಯಸ್ ಅಥವಾ ಬಿಗ್ ಬಾಸ್ ಮನೆಯಲ್ಲಿ ಏನಾದರೂ ಬದಲಾವಣೆ ಇರುತ್ತಾದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿಚ್ಚ, ಕೆಲ ಐಡಿಯಾಸ್ ಅಳವಡಿಕೆ ಆಗಿರಲಿಲ್ಲ ಅದಕ್ಕೆ ಹೊರಗೆ ಹೋಗಿದ್ದೆ. ಈಗ ಅಳವಡಿಕೆ ಆಗಿದೆ ಅದಕ್ಕೆ ಬಂದಿದ್ದೇನೆ. ಜನ ಇದನ್ನು ತುಂಬಾ ಇಷ್ಟಪಡುತ್ತಾರೆ. ಹಾಗಾಗಿ ಇದನ್ನು ನಾನು ಒಳ್ಳೆ ರೀತಿ ಮಾಡಿಕೊಡುವುದು ನನ್ನ ಜವಾಬ್ದಾರಿ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಯಾವಾಗಿನಿಂದ ಪ್ರಸಾರ ಆಗಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಕಲರ್ಸ್ ಕನ್ನಡ ತಿಳಿಸಿದೆ.

BBK12: ಬಿಗ್‌ ಬಾಸ್ ಕನ್ನಡ‌ -12ರ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್
BBK12: ಬಿಗ್‌ ಬಾಸ್ ಕನ್ನಡ‌ -12ರ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

ನ್ನೂ ಓದಿ: ಅಕ್ಕಿ, ಬೇಳೆ ಕಾಳುಗಳ ದರ ಇಳಿಕೆ; ಕಾರಣಗಳೇನು ಗೊತ್ತಾ?


ಇತ್ತೀಚಿನ ಜನಪ್ರಿಯ ಸುದ್ದಿಗಳು (BBK12: )

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ