Jalapatha Kannada Movie: ಪ್ರಮೋದ್ ಅವರ ಲುಕ್ ರಿವಿಲ್

Jalapatha Kannada Movie:  ರವೀಂದ್ರ ತುಂಬರಮನೆ ಅವರು ನಿರ್ಮಿಸಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ “ಜಲಪಾತ” ಚಿತ್ರದಲ್ಲಿ ಅಭಿನಯಿಸುತ್ತೀರುವ ಪ್ರಮೋದ್ ಶೆಟ್ಟಿ ಅವರ ಲುಕ್ ರಿವಿಲ್ ಮಾಡಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಅಕ್ರಮ ಭೂ ಮಂಜೂರು ರೂವಾರಿ ಉಮೇಶ್ ಅಮಾನತು

ಹೌದು, ಪರಿಸರ ಕಾಳಜಿ, ಆಹಾರ ಪದ್ಧತಿ, ಜೀವನ ಶೈಲಿಯ ಕುರಿತ ಕಥೆಯನ್ನು “ಜಲಪಾತ” ಇಂಟರೆಸ್ಟಿಂಗ್ ಸಿನಿಮಾದ ಪ್ರಮೋದ್ ಅವರ ಲುಕ್ ನ ಪೋಸ್ಟರ್ ಅನ್ನು ಅವರ ಧರ್ಮಪತ್ನಿ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ ರಿವಿಲ್ ಮಾಡಿದ್ದಾರೆ.

ಪೋಸ್ಟರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು ಹೊಸಬರಿಗೆ ಪ್ರೋತ್ಸಾಹಿಸುವುದನ್ನು ಬಯಸುವವರು. ಅದರಂತೆ ರಮೇಶ್ ಬೇಗಾರ್ ಜೊತೆಗೆ ಪ್ರೀತಿಯಿಂದ 2 ನೇ ಪ್ರಾಜೆಕ್ಟ್ ಮಾಡಿದ್ದಾರೆ. ರವೀಂದ್ರ ನಿರ್ಮಾಣದ ಜಲಪಾತದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಬಲು ಸೊಗಸಾಗಿ ತೋರಿಸಿದೆ. ಪ್ರಮೋದ್ ರ ಲುಕ್ ಭರ್ಜರಿಯಾಗಿದ್ದು ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ;  ಶೃಂಗೇರಿಯಿಂದ ಇನ್ನೊಂದು ಪ್ರತಿಭೆ;. ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾದ ಈ ನಟಿ ಯಾರು?

ಸಿನಿಮಾದ ನಿರ್ದೇಶಕ ರಮೇಶ್ ಬೇಗಾರ್ ಅವರು ಮಾತನಾಡಿ, ಪರಿಸರ ಕಾಳಜಿ ಪ್ರಮೋದ್ ಶೆಟ್ಟಿ ಅವರ ವೈಯಕ್ತಿಕ ಆಸಕ್ತಿಯ ವಿಷಯ ಎಂದು ಅವರ ಚಟುವಟಿಕೆಯಿಂದ ಗಮನಿಸಿ ಈ ಪಾತ್ರಕ್ಕೆ ವಿನಂತಿಸಿದೆ. ಸಿನಿಮಾದ ಉದ್ದೇಶ ಅವರನ್ನು ಇಂಪ್ರೆಸ್ಸ್ ಮಾಡಿತು. ಹಾಗಾಗಿ ಈ ಪಾತ್ರ ಒಪ್ಪಿ ಅತ್ಯುತ್ತಮ ನಿರ್ವಹಣೆ ಮಾಡಿದ್ದಾರೆ ಎಂದರು.

Jalapatha Kannada Movie:
Jalapatha Kannada Movie:

ಇತ್ತೀಚಿನ ಜನಪ್ರಿಯ ಸುದ್ದಿಗಳು    


ಇನ್ನು ನಿರ್ಮಾಪಕ ರವೀಂದ್ರ ತುಂಬರಮನೆ ಅವರು ಮಾತಾಡಿ, ಪರಿಸರ ರಕ್ಷಣೆ ಮತ್ತು ಅರಿವನ್ನು ಒಂದು ಫೀಲ್ ಗುಡ್ ಜಾನರಾದಲ್ಲಿ ಹೇಳಲು ಹೊರಟ ನಮ್ಮ ತಂಡಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ ಮಾತ್ರವಲ್ಲ ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿದ್ದಾರೆ. ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ;  ಸಿನಿಮಾದಲ್ಲಿ ಶೃಂಗೇರಿ ನಟಿಯರ ಹವಾ ; ನಭಾ, ಸಂಗೀತ ಬಳಿಕ ಶೃಂಗೇರಿಯಿಂದ ಇನ್ನೊಂದು ಪ್ರತಿಭೆ

ಜಲಪಾತ ಸಿನಿಮಾದ ಥೀಮ್ ಸಾಂಗ್ ಬಿಡುಗಡೆ:
ರವೀಂದ್ರ ತುಂಬರಮನೆ ಅವರು ನಿರ್ಮಿಸಿ, ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸುತ್ತಿರುವ “ಜಲಪಾತ” (Jalapatha Kannada Movie:) ಚಲನಚಿತ್ರದ ಥೀಮ್ ಸಾಂಗ್ “ಮೇದಿನಿಗೂ ಮಾತಿದೆ-ನಮ್ಮ ಭಾವಸೋತಿದೆ” ಹಾಡನ್ನು ಆಗಸ್ಟ್ 28 ರ ಸೋಮವಾರ (ನಾಳೆ) ಬೆಳಿಗ್ಗೆ 10 ಘಂಟೆಗೆ ಎ-2 ಮ್ಯೂಸಿಕ್ ವಾಹಿನಿಯಲ್ಲಿ ಬಿಡುಗಡೆ ಆಗಲಿದೆ.

ಪ್ರಕೃತಿ ನಮಗೆ ನೀಡಿದ ಕೊಡುಗೆ ಮತ್ತು ಪ್ರಕೃತಿಗೆ ನಾವು ನೀಡಿದ ಕೊಡುಗೆಯ ಮಾರ್ಮಿಕತೆಯನ್ನು ಬಿಂಬಿಸುವ ಪರಿಸರದರಿವಿನ ಹಾಡು ಇದಾಗಿದ್ದು ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ ನೀಡಿದ್ದು ದೇಶದ ಪ್ರಸಿದ್ಧ ಗಾಯಕ ವಿಜಯಪ್ರಕಾಶ್ ಹಾಡಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಮೋದಿ ಭೇಟಿ ವೇಳೆ, ಬಿಜೆಪಿ ಶಾಸಕರ ಬಗ್ಗೆ ಟ್ವಿಟ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಸಿ.ಟಿ ರವಿ ಹೇಳಿದ್ದೇನು?

ಜಲಪಾತ ಸಿನಿಮಾದ ಕುರಿತು ವಿಜಯಪ್ರಕಾಶ್ ಅವರು ಮತನಾಡಿ, ಜಲಪಾತ ಒಂದು ಸದಭಿರುಚಿಯ ಚಿತ್ರವಾಗಿದ್ದು ಇವತ್ತಿನ ಕಾಲಘಟ್ಟಕ್ಕೆ ಅತ್ಯಂತ ವಿಶೇಷ ಸಂದೇಶವನ್ನು ನೀಡುತ್ತಿದ್ದು ಸದರೀ ಹಾಡು ಕೂಡಾ ಮನೋಜ್ಞವಾಗಿದೆ ಎಂದು ತಿಳಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಮಾತನಾಡಿ, ಗೀತೆಗೆ ಸೂಪಿ ಶೈಲಿಯ ಆರಂಭ ಒದಗಿಸಿ ನಂತರ ಅದೊಂದು ಸಮೂಹಸೆಳೆಯುವ ರೀತಿ ಕೋರಸ್, ಸ್ವರ ಪ್ರಸ್ತಾರದಂಥ ಪ್ರಾಯೋಗಿಕ ಅಂಶಗಳಿಂದ ಅಲಂಕರಿಸಿದ್ದೇನೆ ಎಂದರು.

ನಿರ್ಮಾಪಕ ಟಿ. ಸಿ. ರವೀಂದ್ರ ತುಂಬರಮನೆ ಮಾತಾಡಿ, ಇದುವರೆಗೂ ಬಹುತೇಕ ಪರಿಸರ ಗೀತೆಗಳೆಂದರೆ ಮರಗಿಡ ನೆಡುವ ವಿಷಯವನ್ನೇ ಹೆಚ್ಚಾಗಿ ಹೊಂದಿದ್ದು ಈ ಗೀತೆಯಲ್ಲಿ ನಮ್ಮ ಆತ್ಮ ವಿಮರ್ಷೆಗೆ ಒಡ್ಡುವ ವಿಶ್ಲೇಷಣೆಯನ್ನೊಳಗೊಂಡಿದೆ ಎಂದರು.

ಇನ್ನು ಈ ಚಲನಚಿತ್ರವು ಸೆಪ್ಟೆಂಬರ್ ನಲ್ಲಿ ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.