(Dkd And Comedy Khiladigalu:) ಆಂಕರ್ ಅನುಶ್ರೀ ಇತ್ತೀಚೆಗೆ ರೋಷನ್ ಎಂಬುವರ ಜೊತೆಗೆ ವಿವಾಹವಾಗಿದ್ದು, ಸ್ವಲ್ಪ ವಿರಾಮದ ಬಳಿಕ ಮತ್ತೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ʻಮಹಾನಟಿ ಸೀಸನ್ 2’ ರಿಯಾಲಿಟಿ ಶೋನ ನಿರೂಪಣೆಯಲ್ಲಿ ಅನುಶ್ರೀ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರು ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಮತ್ತು ʻಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮಗಳ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇದನ್ನೂ ಓದಿ: LIC ಫೈನಾನ್ಸ್ನಲ್ಲಿ ಜಾಬ್ ಆಫರ್; 12,000 ಸಂಬಳ
ಹೌದು, ಭಾರತದಾದ್ಯಂತ ಎಲ್ಲೇ ಕಾರ್ಯಕ್ರಮ ಮಾಡೋದಕ್ಕೆ ಹೋದರೂ ಕೂಡ, ಪ್ರತಿಯೊಬ್ಬರು ಕೇಳುವಂತಹ ಒಂದು ಕಾರ್ಯಕ್ರಮ, ʻಡಿಕೆಡಿʼ ಯಾವಾಗ ಶುರು ಮಾಡ್ತೀರಾ? ಶಿವಣ್ಣ ಅವರನ್ನ ಮತ್ತೆ ಯಾವಾಗ ಕರೆಸುತ್ತೀರಾ? ಅನ್ನೋದು. ಡ್ಯಾನ್ಸ್‌ನ್ನ ಆರಾಧಿಸುವಂತಹ ಎಲ್ಲಾ ಡ್ಯಾನ್ಸಿಂಗ್ ಕಲಾವಿದರಿಗೋಸ್ಕರ ಒಂದು ಅದ್ಭುತವಾದ ಅವಕಾಶ ಬಂದಿದೆ. ಡಿಕೆಡಿ ಮತ್ತೆ ಬರುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತೆ ಶುರುವಾಗುತ್ತಿದೆ” ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅನುಶ್ರೀ ಗುಡ್ ನ್ಯೂಸ್ ಅನ್ನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 3ಲಕ್ಷ ಬಿಪಿಎಲ್ ಕಾರ್ಡ್ ರದ್ದು!; ಸಿದ್ದರಾಮಯ್ಯ ಖಡಕ್ ಸೂಚನೆ
(Dkd And Comedy Khiladigalu:) ಇದರ ಜೊತೆಗೆ, ನಗಿಸುವುದು ಇದೆ ಅಲ್ವಾ? ಅದು ಬಹಳ ಕಷ್ಟವಾದಂತಹ ವಿಚಾರ. ಅಂತಹ ಒಂದು ಪುಣ್ಯದ ಕೆಲಸ ಮಾಡೋದಕ್ಕೆ, ನಗುವಿನ ಎಲ್ಲಾ ಕಲಾವಿದರಿಗೆ, ನಿಮ್ಮ ನೆಚ್ಚಿನ ʻಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮ ಕೂಡ ಬರುತ್ತಿದೆ. ʻಡಿಕೆಡಿʼ ಹಾಗೂ ʻಕಾಮಿಡಿ ಕಿಲಾಡಿಗಳುʼ, ಎರಡೂ ಕಾರ್ಯಕ್ರಮದ ಆಡಿಷನ್ಸ್ ಈಗ ಕರ್ನಾಟಕ ರಾಜ್ಯಾದ್ಯಂತ ನಡೀತಾ ಇದೆ. 30 ಜಿಲ್ಲೆಗಳಲ್ಲಿಯೂ ಕೂಡ ಬೇರೆ ಬೇರೆ ಜಾಗಗಳಲ್ಲಿ ನಡೆಯುತ್ತಿದೆ” ಎಂದಿದ್ದಾರೆ ಅನುಶ್ರೀ.
ಇದನ್ನೂ ಓದಿ: ಜುಲೈ, ಆಗಸ್ಟ್, ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ!; ಮಾಹಿತಿ ಕೊಟ್ಟ ಸಚಿವೆ ಹೆಬ್ಬಾಳ್ಕರ್
ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಈ ಆಡಿಷನ್ಸ್ ನಡೆಯುತ್ತದೆ. ಡ್ಯಾನ್ಸ್ ಬಗ್ಗೆ ಉತ್ಸಾಹವಿರುವವರು ಮತ್ತು ನಗಿಸುವುದರ ಬಗ್ಗೆ ಆಸಕ್ತಿ ಇರುವವರು ನೀವೆಲ್ಲರೂ ಈ ಆಡಿಷನ್ಸ್‌ಗೆ ಬಂದು ಭಾಗವಹಿಸಬಹುದು. ಯಾಕೆಂದರೆ, ಈ ವೇದಿಕೆ ನಿಮ್ಮ ಜೀವನವನ್ನ ಕಟ್ಟಿಕೊಡುವಂತಹ ವೇದಿಕೆಯಾಗಿರುತ್ತದೆ. ಮಿಸ್ ಮಾಡಬೇಡಿ..” ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳಿಗೆ ರಿಯಾಯಿತಿ ಹೆಚ್ಚಳ
ಇತ್ತೀಚಿನ ಜನಪ್ರಿಯ ಸುದ್ದಿಗಳು (Dkd And Comedy Khiladigalu:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





