Bigg Boss;- ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

(Bigg Boss;-) ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ಹೊಂದಿರುವ ಬಿಗ್ ಬಾಸ್ ಒಂದಷ್ಟು ವಿಘ್ನಗಳನ್ನು ಎದುರಿಸುತ್ತಿದೆ. ಕಳೆದ ಸೀಸನ್​​ನಲ್ಲಿ ಮಹಿಳಾ ಆಯೋಗದಿಂದ ಬಿಗ್ ಬಾಸ್​ ಆಯೋಜಕರಿಗೆ ನೋಟಿಸ್ ನೀಡಲಾಗಿತ್ತು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.


ಇದನ್ನೂ ಓದಿ: ವಿಂಡೋಸ್ 10 ಬಗ್ಗೆ ಡೊಡ್ಡ ಘೋಷಣೆ; ಏನದು..?


ಹೌದು, ಬಿಗ್​ ಬಾಸ್ ಕನ್ನಡ ಸೀಸನ್ 12 ಶೋ ಆಯೋಜಕರು ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್​ ನೀಡಲಾಗಿದೆ. ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ನೋಟಿಸ್ ಕೊಡಲಾಗಿದೆ.

(Bigg Boss;-) ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಒಂದು ಅಮ್ಯೂಸ್​​ಮೆಂಟ್ ಪಾರ್ಕ್. ಅದರಿಂದ ದೊಡ್ಡ ಪ್ರಮಾಣದ ತಾಜ್ಯ ನೀರು ಹೊರಬರುತ್ತಿದೆ. ಅದನ್ನು ಸರಿಯಾಗಿ ಸಂಸ್ಕರಿಸದೇ ಹೊರಗೆ ಬಿಡಲಾಗುತ್ತಿದೆ. ಅದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೇಪರ್ ತಟ್ಟೆ, ಲೋಟ, ಪ್ಲಾಸ್ಟಿಕ್ ತ್ಯಾಜ್ಯ ಮುಂತಾದ್ದನ್ನು ಕೂಡ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಆರೋಪ ಇದೆ.


ಇದನ್ನೂ ಓದಿ: ಉಚಿತ ಎಲ್‌ಪಿಜಿ ಸಂಪರ್ಕ | ಅರ್ಜಿ ಸಲ್ಲಿಕೆ ಹೇಗೆ?


ಈ ಎಲ್ಲ ಕಾರಣಗಳಿಂದಾಗಿ ಜಾಲಿವುಡ್ ಸ್ಟುಡಿಯೋಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವಿಘ್ನ ಎದುರಾದಂತೆ ಆಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್​​ಗೆ ಬಿಗ್ ಬಾಸ್ ಆಯೋಜಕರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Bigg Boss;- ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್
Bigg Boss;- ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಇದನ್ನೂ ಓದಿ: ಯುಪಿಐನಲ್ಲಿ ಬರಲಿದೆ ಹೊಸ ಫೀಚರ್; ಯಾವುದು ಈ ಫೀಚರ್‌, ಇಲ್ಲಿದೆ ನೋಡಿ


ಇತ್ತೀಚಿನ ಜನಪ್ರಿಯ ಸುದ್ದಿಗಳು (Bigg Boss;-)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ