ITR Filing: ITRಸಲ್ಲಿಸೋದು ಮಿಸ್ ಆಯ್ತಾ!

ITR Filing: ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ಗೆ ಕೊನೆಯ ದಿನಾಂಕ ಮುಗಿದಿದೆ. ಒಂದು ವೇಳೆ ಗಡುವು ತಪ್ಪಿಸಿಕೊಂಡರೆ, ನೀವು ದಂಡ ಶುಲ್ಕ ಪಾವತಿಸಬೇಕಾಗುತ್ತದೆ. ನೀವು ಪಾವತಿಸಬೇಕಾದ ತೆರಿಗೆ ಬಾಕಿ ಇದ್ದು, ಇನ್ನೂ ತೆರಿಗೆ ಪಾವತಿಸದೆ ಇದ್ದರೆ ಏನಾಗಲಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ; ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು

ಕೊನೆಯ ದಿನಾಂಕ ಯಾವಾಗ?:
2022- 23 ರ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ (ನಿನ್ನೆ) ಆಗಿದೆ.

ಐಟಿಆರ್ ಇಂದಿನಿಂದ ಫೈಲ್ ಮಾಡಬಹುದಾ?
* ಇಂದಿನಿಂದ ದಂಡ ಪಾವತಿಸಿ ಐಟಿಆರ್ (ITR) ಸಲ್ಲಿಸಬಹುದು. ಸೆಕ್ಷನ್ 139 ರ ಪ್ರಕಾರ ಐಟಿಆರ್ ಸಲ್ಲಿಸದೆ ಇರುವವರಿಗೆ ಯಾವುದೇ ದಂಡವಿಲ್ಲ. ಆದರೆ, ಡೆಡ್‌ಲೈನ್ ಮುಗಿದ ಬಳಿಕ ಐಟಿಆರ್ ಸಲ್ಲಿಸಿದವರಗೆ 5 ಸಾವಿರ ರೂಪಾಯಿವರೆಗೆ ದಂಡ ಇರುತ್ತದೆ.
* ಐಟಿಆರ್ ಸಲ್ಲಿಸದೆ ಇರುವವರು ಸೆಕ್ಷನ್ 139 ರ ಪ್ರಕಾರ ಐಟಿಆರ್ (ITR) ರಿಟರ್ನ್ ಅಪ್‌ಡೇಟ್ ಮಾಡಬೇಕು. ಈ ರೀತಿ ಅಪ್‌ಡೇಟೆಡ್ ರಿಟರ್ನ್ ಸಲ್ಲಿಸಲು 24 ತಿಂಗಳ ಅವಕಾಶವಿರುತ್ತದೆ. ಡೆಡ್‌ಲೈನ್ ಬಳಿಕದ ಸಮಯಕ್ಕೆ ನೀವು ದಂಡ ಪಾವತಿಸಬೇಕಾಗುತ್ತದೆ.

ITR Filing:
ITR Filing:

ಯಾವ ಸಂದರ್ಭದಲ್ಲಿ ದಂಡ ವಿಧಿಸಲಾಗುತ್ತದೆ?:.
* ತೆರಿಗೆ ವಿನಾಯಿತಿ ನಂತರವೂ ತೆರಿಗೆ ಪಾವತಿಸಬೇಕಿದ್ದು, ಇನ್ನೂ ತಮ್ಮ ಐಟಿಆರ್ (ITR) ಸಲ್ಲಿಸದೆ ಇದ್ದರೆ, ನಂತರ ಸೆಕ್ಷನ್ 234 ಎಫ್ ಪ್ರಕಾರ, ಅವರಿಗೆ ರೂ 5,000 ದಂಡ ವಿಧಿಸಬಹುದು.
* 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ತೆರಿಗೆದಾರರು ತಡವಾಗಿ ಸಲ್ಲಿಸಿದ್ದಕ್ಕಾಗಿ 1,000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   


ITR Filing: ಜೈಲು ಶಿಕ್ಷೆ ಇದೆಯೇ?:
ತೆರಿಗೆ ಕಟ್ಟಿದ ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆಯೂ ಇದೆ. ನಿಮ್ಮ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಬಹುದು. ತೆರಿಗೆ ವಂಚನೆಯ ಸಂದರ್ಭದಲ್ಲಿ, ನಿಮಗೆ ಕನಿಷ್ಠ ಮೂರು ತಿಂಗಳಿಂದ ಗರಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. 25 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ವಂಚನೆ ಪ್ರಕರಣದಲ್ಲಿ 7 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು.

ಇದನ್ನೂ ಓದಿ; ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ

ಪ್ರತಿವರ್ಷ ಐಟಿಆರ್ ಫೈಲ್ ಮಾಡಲು ಮರೆಯಬೇಡಿ ಇಂದಿನಿಂದ ಡಿಸೆಂಬರ್ 31 ರವರೆಗೆ ದಂಡ ಪಾವತಿಯೊಂದಿಗೆ ಐಟಿಆರ್ ಸಲ್ಲಿಸಲು ಅವಕಾಶವಿದೆ.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
  2. ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು
  3. ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ
  4. ಚಿಕ್ಕಮಗಳೂರು: ಯಾರೂ ಬಿ.ಆರ್.ಪಾಟೀಲ್ ಅವರ ಕ್ಷಮೆ ಕೇಳಿಲ್ಲ
  5. easy life: ಕೃಷಿಕರಿಗೆ ಬೇಕಾದ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯ
  6. ಳೆದು ಹೊದ ಮೊಬೈಲ್ ಹೇಗೆ ಹುಡುಕೊದು?;ಮೊಬೈಲ್ ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ
  7. ಕೊಪ್ಪ: ಸಮಬಲದ ಹೋರಾಟದ ನಡುವೆ ಶಾನುವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶರತ್ ಬಿಳುಕೊಪ್ಪ ಆಯ್ಕೆ
  8. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-31.07.2023
  9. ಉಚಿತ ಭಾಗ್ಯಗಳ ಬೆನ್ನಲ್ಲೇ ನಾಳೆಯಿಂದ ಬೆಲೆ ಏರಿಕೆ ಶಾಕ್!

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇