Price Hike: ಉಚಿತ ಭಾಗ್ಯಗಳ ಬೆನ್ನಲ್ಲೇ ನಾಳೆಯಿಂದ ಬೆಲೆ ಏರಿಕೆ ಶಾಕ್!

ಆಗಸ್ಟ್ ತಿಂಗಳಿನಿಂದ ನೀವು ದುಡಿಯೋ ಸಂಬಳ ಸಾಲೋದಿಲ್ಲ. ಒಂದಷ್ಟು ಹೆಚ್ಚು ದುಡಿಯಲೇಬೇಕು. ಅದಕ್ಕೆ ಕಾರಣ ದುಬಾರಿ ದುನಿಯಾ. ಸಿದ್ಧರಾಮಯ್ಯ ಮಂಡಿಸಿದ್ದ ಬಜೆಟ್‌ನ ಸಮಯದಲ್ಲಿ ಈಗಾಗಲೇ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಬಕಾರಿ ಇಲಾಖೆಯಲ್ಲಿ ದರ ಏರಿಕೆಯನ್ನು ಸಿದ್ಧರಾಮಯ್ಯ ಸರ್ಕಾರ ಖಚಿತಪಡಿಸಿದೆ.

ಇದನ್ನೂ ಓದಿ; ಮೂಡಿಗೆರೆ: ಕಾಡಾನೆ ದಾಳಿಯಿಂದ ಬೆಳೆಗಳು ನಾಶ

ಹಲವು ಉಚಿತ ಗ್ಯಾರಂಟಿ ಭಾಗ್ಯಗಳನ್ನ ಕರುಣಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ನುಡಿದಂತೆ ನಡೆದಿದ್ದೇವೆ ಎಂದು ಬೀಗುತ್ತಿದೆ. ಆದರೆ, ಇದರ ನಡುವಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ ಕೂಡಾ ಸಖತ್ತಾಗೇ ತಟ್ಟುತ್ತಿದೆ. ವಿದ್ಯುತ್, ನೀರು ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಕೇಳಿ ಬರ್ತಿದೆ. ಹಾಗಾದರೆ ನಾಳೆಯಿಂದ ಯಾವುದೆಲ್ಲಾ ಬೆಲೆಗಳು ಜಾಸ್ತಿಯಾಗುತ್ತದೆ ಅಂತ ನೋವುದಾದರೆ.

ಇದನ್ನೂ ಓದಿ; ಚಿಕ್ಕಮಗಳೂರು: ಗ್ಯಾಸ್ ಗೀಸರ್ ಸೋರಿಕೆ; ಯುವಕ ಸಾವು

1. ಹಾಲಿನ ದರ 3 ರೂಪಾಯಿ ಏರಿಕೆ:
ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು ಎನ್ನುವಾಗಲೇ, ಕೆಎಂಎಫ್ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾಪ ಇಟ್ಟಿತ್ತು. ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವ ನಿರ್ಧಾರ ಮಾಡಿದ್ದ ಕೆಎಂಎಫ್, ಸರ್ಕಾರದ ಜೊತೆಗಿನ ಚರ್ಚೆಯ ಬಳಿಕ 3 ರೂಪಾಯಿ ಏರಿಕೆಗೆ ನಿರ್ಧಾರ ಮಾಡಿದೆ. ಆಗಸ್ಟ್ 1 ರಿಂದ ಇದು ಜಾರಿಯಾಗಲಿದೆ.

2. ಹೋಟೆಲ್ ಕಾಫಿ ತಿಂಡಿಗಳ ಬೆಲೆ ಏರಿಕೆ:
ಹಾಲಿನ ದರ ಏರಿಕೆ ಬೆನ್ನಲ್ಲಿಯೇ ಹೋಟೆಲ್ ಮಾಲೀಕರ ಸಂಘ, ಕಾಫಿ ತಿಂಡಿಗಳ ಬೆಲೆ ಏರಿಕೆ ಮಾಡಿದೆ. ನಾಳೆಯಿಂದ ಹೋಟೆಲ್‌ಗಳಲ್ಲಿ ಒಂದು ಪುಟ್ಟ ಕಾಫಿ ತೆಗೆದುಕೊಂಡರೆ, 18 ರೂಪಾಯಿ ಕೊಡಬೇಕು. ಇನ್ನು ಮಿನಿ ಮೀಲ್ಸ್ ತಿನ್ನೋ ಹಣದಲ್ಲಿ ಬೆಂಗಳೂರಿನಿಂದ-ಮೈಸೂರಿಗೆ ನೀವು ಪ್ರಯಾಣ ಮಾಡಿ ಬರಬಹುದು.

ಇದನ್ನೂ ಓದಿ; ಸೀಬೆ ಹಣ್ಣಿನಲ್ಲಿ ಅಡಗಿದೆ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು

3. ತರಕಾರಿಗಳ ಬೆಲೆ ಕೇಳೋದೇ ಬೇಡ:
ರಾಜ್ಯದಲ್ಲಿ ಟೊಮೆಟೋ ಬೆಲೆ 200 ರೂಪಾಯಿ ದಾಟಿದೆ. ಅದಕ್ಕೆ ಏನೇ ಕಾರಣವಿರಲಿ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ತರಕಾರಿಗಳನ್ನ ವಿತರಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿಲ್ಲ. ಟೊಮೆಟೋ ಜೊತೆ ಇತರ ತರಕಾರಿಗಳು ಬಹುತೇಕ ಎಲ್ಲದರ ಬೆಲೆಯಲ್ಲೂ ಏರಿಕೆಯಾಗಿದೆ.

4. ವಿದ್ಯುತ್ ಉಚಿತ.. ದರ ಏರಿಕೆ ಖಚಿತ!
ಇಂಧನ ವೆಚ್ಚದ ನೆಪ ಇಟ್ಟುಕೊಂಡು ರಾಜ್ಯ ಸರ್ಕಾರ ವಿದ್ಯುತ್ ಬಿಲ್ ದರ ಏರಿಕೆ ಮಾಡಿದೆ. ಸಾಮಾನ್ಯ ಜನರು ಗೃಹಜ್ಯೋತಿಯ ಉಚಿತ 200 ಯುನಿಟ್ ಲಾಭ ಪಡೆದರೂ, ಕಮರ್ಷಿಯಲ್ ವಿದ್ಯುತ್ ಮೀಟರ್‌ಗಳ ಬೆಲೆ ದುಬಾರಿಯಾಗಿದೆ. ವಿದ್ಯುತ್ ಬಿಲ್ ಏರಿಕೆ ಈಗಾಗಲೇ ಜಾರಿಗೆ ಬಂದಿದೆ.

Price Hike:
Price Hike:

ಇದನ್ನೂ ಓದಿ; ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ!; ಭಾರತದ ರಫ್ತು ನಿಷೇಧಕ್ಕೂ ಇದಕ್ಕೂ ಏನು ಸಂಬಂಧ!

5. ಪ್ಲಂಬರ್, ಎಲೆಕ್ಟ್ರಿಶಿಯನ್, ಮನೆಗೆಲಸದವರ ಶುಲ್ಕ ಏರಿಕೆ:
ಎಲ್ಲಾ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲಿಯೇ ಪ್ಲಂಬರ್‌ಗಳು, ಎಲೆಕ್ಟ್ರಿಶಿಯನ್ ಹಾಗೂ ಮನೆಗೆಲಸದವರ ಶುಲ್ಕ ಕೂಡ ಏರಿಕೆಯಾಗಲಿದೆ. ಈವರೆಗೂ 700-800 ರೂಪಾಯಿಗೆ ಸಿಗುತ್ತಿದೆ. ಇನ್ನು ಮುಂದೆ ಇವರ ಶುಲ್ಕ 1100ಕ್ಕೆ ಏರಿಕೆಯಾಗುವ ಲಕ್ಷಣವಿದೆ.

6. ಮದ್ಯದ ಬೆಲೆಯಲ್ಲಿ ಏರಿಕೆ:
ಸರ್ಕಾರದ ಐದು ಗ್ಯಾರಂಟಿ ಜಾರಿಗೆ ಹಣಕಾಸು ಹೊಂದಿಕೆ ಮಾಡುವ ಕಾರಣಕ್ಕೆ ಸರ್ಕಾರ ಬಂದ ಬೆನ್ನಲ್ಲಿಯೇ ಮದ್ಯದ ದರಗಳಲ್ಲಿ ಭಾರೀ ಏರಿಕೆ ಮಾಡಿದೆ. ಬಿಯರ್, ವಿಸ್ಕಿ, ಬ್ರ‍್ಯಾಂಡಿ ಎಲ್ಲಾವುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಈಗಾಗಲೇ ಇದು ಜಾರಿಗೆ ಬಂದಿದೆ.

7. ನೋಂದಣಿ ಮತ್ತು ಮುದ್ರಾಂಕ ಇಲಾಖೆ:
ಭೂಮಿಯ ನೋಂದಣಿ, ಜಾಗ ಖರೀದಿ, ಮನೆ ಮಾಡಿಕೊಳ್ಳುವುದು ಕೂಡ ಕಷ್ಟವಾಗಲಿದ್ದು, ಸರ್ಕಾರ ಈಗಾಗಲೇ ಇವುಗಳ ನೋಂದಣಿಗಳ ಬೆಲೆಯಲ್ಲಿ ಏರಿಕೆ ಮಾಡಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   


Price Hike: 8. ಗಣಿ ಮತ್ತು ಭೂಜ್ಞಾನ ಇಲಾಖೆ:
ಈ ಇಲಾಖೆಯ ರಾಜಸ್ವ ಸಂಗ್ರಹ ಏರಿಕೆಯ ಗುರಿ ನೀಡಲಾಗಿದೆ. ಇದರಿಂದಾಗಿ ಮನೆ ನಿರ್ಮಾಣದ ವಸ್ತುಗಳಾದ ಜಲ್ಲಿ, ಮರಳು, ಎಂಸ್ಯಾಂಡ್, ಗ್ರ‍್ಯಾನೈಟ್ ಇವೆಲ್ಲವುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.

9. ಮೋಟಾರ್ ವೆಹಿಕಲ್ ಟ್ಯಾಕ್ಸ್ ಏರಿಕೆ:
ಶಾಲೆ-ಕಾಲೇಜು ವಾಹನ, ಕ್ಯಾಬ್ ಗಳ ಮೇಲೆ ವಿಧಿಸುವ ತೆರಿಗೆಯನ್ನು ಸರ್ಕಾರ ಹೆಚ್ಚಿಸಿದೆ. 15 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್ ಗಳಿಗೆ ಆ ವಾಹನದ 15% ರಷ್ಟು ತೆರಿಗೆ, 10 ಲಕ್ಷ ರೂ. ನಿಂದ 15 ಲಕ್ಷ ರೂ. ಬೆಲೆಯ ಕ್ಯಾಬ್ ಗಳಿಗೆ ಅದರ ಮೌಲ್ಯದ 9% ರಷ್ಟು ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಹೆಚ್ಚಳದಿಂದ 472 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

10. ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ:
ಒಪ್ಪಂದದ ಆಧಾರದಲ್ಲಿ ನಿರ್ವಹಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ದರಗಳನ್ನು ಏರಿಕೆ ಮಾಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗೆ ನೀಡುವ ಸಾಂದರ್ಭಿಕ ಒಪ್ಪಂದದ ಬಸ್‌ಗಳ ಪ್ರಯಾಣ ದರ ಏರಿಸಿದ ಕೆಎಸ್‌ಆರ್‌ಟಿಸಿ. ಪ್ರತಿ ಕಿ.ಮೀ ಗೆ 2 ರೂ.ನಿಂದ 5 ರೂ.ವರೆಗೆ ದರ ಏರಿಕೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾಡಿದೆ. ಪರಿಷ್ಕೃತ ದರವು ಇದೇ ಆಗಸ್ಟ್ 1ರಿಂದಲೇ ಜಾರಿಯಾಗಲಿದೆ.