Friday, June 9, 2023
Homeಮಲೆನಾಡುಹಿಟ್‌ ಅಂಡ್‌ ರನ್‌; ತಪ್ಪಿದ ಭಾರಿ ಅನಾಹುತ, ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಹಿಟ್‌ ಅಂಡ್‌ ರನ್‌; ತಪ್ಪಿದ ಭಾರಿ ಅನಾಹುತ, ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಓವರ್ ಟೇಕ್ ಮಾಡುವಾಗ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಕಾರು ಚಾಲಕ ಎಸ್ಕೆಪ್ ಆಗಿರುವ ಘಟನೆ ಶಿವಮೊಗ್ಗದ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ; ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್ ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ಕೃಷ್ಣ ಮೂರ್ತಿ ಮತ್ತು ಸಂತೋಷ್ ಎಂಬುವವರು ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್ ರಸ್ತೆಯ ಸಿದ್ಧಾಪುರದ ಬಳಿ ಓಮಿನಿ ಕಾರನ್ನು ಬೈಕ್ ಓವರ್‌ಟೇಕ್ ಮಾಡುತ್ತಿತ್ತು. ಇದೇ ವೇಳೆ ಐ10 ಕಾರು ಬೈಕನ್ನು ಓವರ್ ಟೇಕ್ ಮಾಡಲು ರಸ್ತೆಯ ಸಂಪೂರ್ಣ ಬಲ ಭಾಗಕ್ಕೆ ಬಂದಿದೆ. ಎದುರಿನಿಂದ ಮತ್ತೊಂದು ಬೈಕ್ ಬಂದಿದ್ದರಿಂದ ಕಾರು ಚಾಲಕ ತಕ್ಷಣಕ್ಕೆ ಕಾರನ್ನು ಎಡಕ್ಕೆ ತಿರುಗಿಸಿದ್ದಾನೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕಾರು ದಿಢೀರ್ ಎಡಕ್ಕೆ ತಿರುಗಿ ಬೈಕ್‌ಗೆ ಡಿಕ್ಕಿ ಹೊಡದಿದೆ. ಬೈಕ್ ಸವಾರರಿಬ್ಬರು ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರ ಕೃಷ್ಣಮೂರ್ತಿ ಎಂಬುವವರ ಭುಜದ ಮೂಳೆ ಮುರಿದಿದೆ. ಎರಡು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಮತ್ತೊಬ್ಬ ಸವಾರ ಸಂತೋಷ್ ಅವರಿಗೂ ಗಾಯವಾಗಿದೆ.

ಕಾರು ಚಾಲಕ ಎಸ್ಕೆಪ್ ಆಗಿದ್ದು, ಅಪಘಾತದ ವಿಡಿಯೋ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ; ಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ಸಿ.ಟಿ ರವಿ ಗೆ ಶಾಕ್ ನೀಡಲು ಶಾಸಕ ಹೆಚ್ ಡಿ ತಮ್ಮಯ್ಯ ಕಸರತ್ತು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಚ್ ಡಿ ತಮ್ಮಯ್ಯ ಮಾಜಿ ಶಾಸಕ ಸಿಟಿ ರವಿಗೆ ಮತ್ತೊಂದು ಶಾಕ್ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್

ಈ ಬಾರಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತನೆಯಾಗಿತ್ತು. ಸಿಟಿ ರವಿ ಆಪ್ತ ಬಣ್ಣದಲ್ಲಿ ಗುರುತಿಸಿಕೊಂಡಿದ್ದ ಹೆಚ್ ಡಿ ತಮ್ಮಯ್ಯನೇ ಎದುರಾಳಿಯಾಗಿ ಸಿ.ಟಿ ರವಿಗೆ ಸೋಲಿನ ರುಚಿಯನ್ನು ತೋರಿಸಿದ್ದರು. ಇದೀಗ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.

ಎಚ್ ಡಿ ತಮ್ಮಯ್ಯ ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ನಗರಸಭೆ ಆಡಳಿತವನ್ನು ಬಿಜೆಪಿಯಿಂದ ತಪ್ಪಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ. ಚಿಕ್ಕಮಗಳೂರು ನಗರಸಭೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್

ಮೂಲಗಳ ಮಾಹಿತಿ ಪ್ರಕಾರ ವಿಧಾನಸಭಾ ಅಧಿವೇಶನ ಮುಗಿದ ಬಳಿಕ ನಗರಸಭಾ ಸದಸ್ಯರ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಎಚ್ ಡಿ ತಮ್ಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮೂವರು ನಗರಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸುವ ಮೂಲಕ ನಗರಸಭೆಯಲ್ಲಿ ಬಿಜೆಪಿ ಬಲವನ್ನು ತಗ್ಗಿಸುವ ಕಾರ್ಯತಂತ್ರವನ್ನು ಎಣಿದಿದ್ದಾರೆ.

ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’

ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಮೂವರು ಸದಸ್ಯರು ರಾಜೀನಾಮೆ ಕೊಟ್ಟರೆ ನಗರಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಕುಸಿತಗೊಳ್ಳಲಿದೆ ಆಗ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ಯೋಜನೆಯನ್ನು ನೂತನ ಶಾಸಕ ಎಚ್ ಡಿ ತಮ್ಮಯ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.

Most Popular

Recent Comments