(Sangeetha Sringeri) ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada Season 10)
ಪ್ರಮುಖ ಸ್ಫರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ಫಿಟ್‌ನೆಸ್ ನಿಂದ ಲಕ್ಷಾಂತರ ಜನರ ಮನಸನ್ನು ಗೆದ್ದಿದ್ದಾರೆ.

ಇದನ್ನೂ ಓದಿ; ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್; ಈ ರೀತಿ ಅರ್ಜಿ ಸಲ್ಲಿಸಿ
ಈ ಫಿಟ್‌ನೆಸ್ ಹಾಗೂ ಹೊಳೆಯುವ ತ್ವಚೆಯ ರಹಸ್ಯವನ್ನು ಈ ಹಿಂದೆ ಸಂಗೀತಾ ಶೃಂಗೇರಿ ವಿವಿಧ ಸಂದರ್ಭಗಳಲ್ಲಿ, ವಿವಿಧ ವರದಿಗಳು ಅಲ್ಲದೆ ಯೂಟ್ಯೂಬ್ ಸಂದರ್ಶನಗಳಲ್ಲಿ (YouTube interview)
ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಫರ್ಧಿ ಸಂಗೀತಾ ಶೃಂಗೇರಿ ತಮ್ಮ ಹದಿನೆಂಟನೇ ವಯಸ್ಸಿನಲ್ಲಿಯೇ ನಟನೆ ಆರಂಭಿಸಿ ಹರ ಹರ ಮಹಾದೇವ (Hara Hara Mahadeva) ಎಂಬ ಕನ್ನಡ ಧಾರವಾಹಿಯಲ್ಲಿ (Kannada serial) ಸತಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ; ಕರ್ನಾಟಕ ಹೈಕೋರ್ಟ್ನಲ್ಲಿ ಭರ್ಜರಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
ಇತ್ತೀಚೆಗೆ ಕಿಚ್ಚ ಸುದೀಪ್ ರವರು (kiccha sudeep) ಕೇಳಿರುವ ಪ್ರಶ್ನೆಗೆ ಸಂಗೀತಾ ಶೃಂಗೇರಿಯವರು ತಮ್ಮ ಡಯೆಟ್, ಜಿಮ್, ವರ್ಕೌಟ್ (Diet, gym, workout) ಕುರಿತು ಮಾಹಿತಿ ನೀಡಿದ್ದರು. ಬಹುಕಾಲದಿಂದ ಸಿಕ್ಸ್ ಪ್ಯಾಕ್ ಹೊಂದಿರಬೇಕು ಎಂಬ ಕನಸಿತ್ತು. ಅಲ್ಲದೆ ನನಗೆ ಯಾವುದೇ ತೂಕ ಹೆಚ್ಚಳ ಸಮಸ್ಯೆ ಇರಲಿಲ್ಲ ಆದರೆ ನನ್ನ ಸ್ನಾಯು ಬಿಗಿ ಕಡಿಮೆಯಾಗಿತ್ತು, ಪಿಸಿಒಡಿ ತೊಂದರೆ ಕಾಣಿಸಿಕೊಂಡಿತು, ಇದನ್ನು ಸರಿಪಡಿಸಲು ವೈದ್ಯರ ಸಮಲೋಚನೆ ಬೇಕಿತ್ತು ಅದನ್ನು ಪಡೆಯುವ ಬದಲು ನಾನೇ ಫಿಟ್ ಆಗಬೇಕೆಂಬ ದೃಢ ಸಂಕಲ್ಪ ಮಾಡಿದೆ ಎಂದು ಯೂಟ್ಯೂಬ್ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ; ಬರಪೀಡಿತ ತಾಲೂಕುಗಳಿಗೆ ಟಾಸ್ಕ್ ಫೋರ್ಸ್ ರಚನೆ; ರಾಜ್ಯ ಸರ್ಕಾರದಿಂದ ಆದೇಶ
ಸಂಗೀತಾ ಶೃಂಗೇರಿಯವರ ಕಠಿಣ ಪರಿಶ್ರಮದಿಂದ ಮತ್ತು ವೃತ್ತಿಪರ ತರಬೇತುದಾರರ ನೆರವಿನಿಂದ ತಮ್ಮ ದೇಹದ ಆಕಾರವನ್ನು ಇನ್ನಷ್ಟು ಸುಂದರವಾಗಿಸಿದ್ದು, ಇವರ ಈ ಫಿಟ್‌ನೆಸ್ ಗೆ ಫ್ಯಾನ್ಸ್ ಗಳು ಮನಸೋತಿದ್ದು ಫ್ಯಾನ್ ಫಾಲೋವರ್ಸ್ ಕೂಡ ಇನ್ನಷ್ಟು ಹೆಚ್ಚಾಗಿದ್ದಾರೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; ರೈತರೇ ತಪ್ಪದೇ ಈ ಮಹತ್ವದ ಕೆಲಸವನ್ನು ಪೂರ್ಣಗೊಳಿಸಿ







Leave a Reply