(Healthcare Expense Loan) ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರು, ಮಹಿಳೆಯರಿಗೆ ಹಲವು ಯೋಜನೆಗಳು ಜಾರಿಗೊಳಿಸಿದ್ದು, ಅದೇ ರೀತಿ ಬ್ಯಾಂಕ್ ಗಳಲ್ಲೂ ರೈತರು, ಮಹಿಳೆಯರಿಗೆ ಹಲವು ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಮಹಿಳೆಯರಿಗೆ ಬ್ಯಾಂಕ್ ನಲ್ಲಿ ಆರೋಗ್ಯದ ವೆಚ್ಚಕ್ಕಾಗಿ ಸಾಲವನ್ನೂ ನೀಡಲಾಗುತ್ತದೆ. ಹಾಗಾದರೆ ಯಾವ ಯೋಜನೆ, ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ
ಯಾವ ಬ್ಯಾಂಕ್ ನಲ್ಲಿ ಈ ಯೋಜನೆ ಲಭ್ಯ:
ಸರ್ಕಾರಿ ನಿಯಂತ್ರಣದ ಕೆನರಾ ಬ್ಯಾಂಕ್ ಈ ಯೋಜನೆಯನ್ನು ರೂಪಿಸಿದೆ. ಆರೋಗ್ಯವೆಚ್ಚಕ್ಕೆ ವಿಶೇಷ ಸಾಲದ ವ್ಯವಸ್ಥೆಯೂ ಇದರಲ್ಲಿ ಒಳಗೊಂಡಿದೆ. ಮಹಿಳಾ ಸೇವಿಂಗ್ಸ್ ಅಕೌಂಟ್, ಎಫ್‌ಡಿಗಳ ಮೇಲೆ ಆನ್ ಲೈನ್ ನಲ್ಲಿ ಸಾಲ, ಪೂರ್ವ ಅನುಮೋದಿತ ವೈಯಕ್ತಿಕ ಸಾಲ ಇತ್ಯಾದಿ ಹೊಸ ಸೇವೆಯನ್ನು ಕೆನರಾ ಬ್ಯಾಂಕ್ ಜಾರಿಗೆ ತಂದಿದೆ. ಕೆನರಾ ಬ್ಯಾಂಕ್ ನ ಯುಪಿಐ ಪಾವತಿ ಆ್ಯಪ್ ಅನ್ನೂ ಹೊರತಂದಿದೆ.
ಇದನ್ನೂ ಓದಿ; ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ; 1113 ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾವ ಯೋಜನೆಯಲ್ಲಿ ಈ ಸೌಲಭ್ಯ ಲಭ್ಯ:
ಕೆನರಾ ಹೀಲ್ ಸಾಲ ಯೋಜನೆಯಡಿಯಲ್ಲಿ ಆಸ್ಪತ್ರೆಗಳಲ್ಲಿನ ವೆಚ್ಚ ಕೈಮೀರಿದರೆ ಕೆನರಾ ಬ್ಯಾಂಕ್ ನಿಂದ ಸಾಲ ಸೌಲಭ್ಯ ಸಿಗುತ್ತದೆ. ಆರೋಗ್ಯ ವಿಮೆ ಮಾಡಿಸಿದ್ದು, ಅದರಲ್ಲಿ ಕ್ಲೈಮ್ ಆದ ಹಣಕ್ಕಿಂತಲೂ ಆಸ್ಪತ್ರೆ ವೆಚ್ಚ ಹೆಚ್ಚಾಗಿ ಹೋಗಿದ್ದರೆ ಆಗ ಕೆನರಾ ಹೀಲ್ ಸ್ಕೀಮ್ ನಲ್ಲಿ ಬ್ಯಾಂಕ್ ನಿಂದ ಆ ಮೊತ್ತಕ್ಕೆ ಸಾಲ ಪಡೆಯಲು ಅವಕಾಶ ಇದೆ.
ಇದನ್ನೂ ಓದಿ; ಮತದಾರರೇ ಗಮನಿಸಿ; ವೋಟರ್ ಲಿಸ್ಟ್ ನಲ್ಲಿ ಹೆಸರು ಸೇರ್ಪಡೆಗೆ ಇನ್ನೂ ಇದೆ ಕಾಲಾವಕಾಶ
ಈ ಸಾಲಕ್ಕೆ ಶೇ. 11.55 ಮತ್ತು ಶೇ. 12.30ರಷ್ಟು ವಾರ್ಷಿಕ ಬಡ್ಡಿ ನಿಗದಿ ಮಾಡಲಾಗಿದೆ. ಫ್ಲೋಟಿಂಗ್ ರೇಟ್ ಇಂಟರೆಸ್ಟ್ ಆಯ್ಕೆ ಮಾಡಿಕೊಂಡರೆ ಶೇ. 11.55 ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಫಿಕ್ಸೆಡ್ ಇಂಟರೆಸ್ಟ್ ರೇಟ್ ಆಯ್ಕೆ ಮಾಡಿಕೊಂಡರೆ ಬಡ್ಡಿ ಶೇ. 12.30ರಷ್ಟು ಇರುತ್ತದೆ.
ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಬಡ್ಡಿಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!
ಕೆನರಾ ಏಂಜೆಲ್ ಅಕೌಂಟ್:
ಮಹಿಳೆಯರಿಗೆ ಕೆನರಾ ಬ್ಯಾಂಕ್ ನಲ್ಲಿ ಕೆನರಾ ಏಂಜೆಲ್ ಸೇವಿಂಗ್ಸ್ ಅಕೌಂಟ್ ತೆರೆಯುವ ಅವಕಾಶ ಕೊಡಲಾಗಿದೆ. ಇದರಲ್ಲಿ ಪೂರ್ವ ಅನುಮೋದಿತ ಪರ್ಸನಲ್ ಲೋನ್ ಸಿಗುತ್ತದೆ. ಕ್ಯಾನ್ಸರ್ ರೋಗದ ಚಿಕಿತ್ಸೆ ವೆಚ್ಚ ಭರಿಸಲು ಈ ಸಾಲ ಬಳಸಬಹುದು. ಟರ್ಮ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿಗಳ ಮೇಲೆ ಆನ್ಲೈನ್ ಸಾಲವನ್ನು ಕೆನರಾ ಏಂಜೆಲ್ ಉಳಿತಾಯ ಖಾತೆದಾರರು ಪಡೆಯಬಹುದು.
ಇದನ್ನೂ ಓದಿ; ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್; ಈ ರೀತಿ ಅರ್ಜಿ ಸಲ್ಲಿಸಿ
ಎಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು:
ಮಹಿಳೆಯರು ಉಚಿತವಾಗಿ ಈ ಉಳಿತಾಯ ಖಾತೆ ತೆರೆಯಬಹುದು. ಈಗಾಗಲೇ ಕೆನರಾ ಬ್ಯಾಂಕ್ ನಲ್ಲೇ ರೆಗ್ಯುಲರ್ ಅಕೌಂಟ್ ಹೊಂದಿರುವ ಮಹಿಳೆಯರು, ತಮ್ಮ ಖಾತೆಯನ್ನು ಏಂಜೆಲ್ ಖಾತೆಗೆ ಅಪ್ ಗ್ರೇಡ್ ಮಾಡಿಸಬಹುದು.
ಇದನ್ನೂ ಓದಿ; ಕರ್ನಾಟಕ ಹೈಕೋರ್ಟ್ನಲ್ಲಿ ಭರ್ಜರಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ








Leave a Reply