Voter List: ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೇ?

(Voter List) ಈಗಾಗಲೇ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7 ಹಂತಗಳಲ್ಲಿ ದೇಶದಾದ್ಯಂತ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ವೋಟಿಂಗ್ ಕೌಂಟಿಂಗ್ ನಡೆಯಲಿದೆ. ಇನ್ನು ಈ ಚುನಾವಣೆಗೆ ಮತಚಲಾಯಿಸಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬೇಕಾ? ಈ ಕೆಳಗಿನ ಹಂತವನ್ನು ಅನುಸರಿಸಿ ನೀವು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳುವುದು ಹೇಗೆ?:

ಎಸ್‌ಎಂಎಸ್‌ ಮೂಲಕ ವೋಟರ್‌ ಲಿಸ್ಟ್‌ ಚೆಕ್‌ ಮಾಡುವ ವಿಧಾನ:
* ಮೊದಲಿಗೆ ನೀವು ವೋಟರ್ ಐಡಿ’ಗಾಗಿ ಅಪ್ಲಿಕೇಶನ್‌ ಸಲ್ಲಿಸಿರಬೇಕು. ಅಪ್ಲಿಕೇಶನ್‌ ನಂಬರ್ ನಿಮ್ಮಲ್ಲಿ ಇರಬೇಕು.
* “EPIC” ಎಂದು ಬರೆದು ಒಂದು ಸ್ಪೇಸ್‌ ಕೊಟ್ಟು ನಿಮ್ಮ ವೋಟರ್‌ ಐಡಿ ಅಪ್ಲಿಕೇಶನ್‌ ನಂಬರ್ ಬರೆದು 1950 ನಂಬರ್‌ ಗೆ ಸಂದೇಶ ಕಳುಹಿಸಬೇಕು.
* ಉದಾಹರಣೆಗೆ – “EPIC” (Voter ID Application Number).
* ನಂತರ ನಿಮ್ಮ ಮೊಬೈಲ್‌ ಗೆ ಈ ಕುರಿತ ಮಾಹಿತಿಯ SMS ಬರುತ್ತದೆ.

ಇದನ್ನೂ ಓದಿ; ಸೌಥ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆಯಲ್ಲಿ ಉದ್ಯೋಗ; 1113 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆನ್‌ ಲೈನ್‌ ಮೂಲಕ ವೋಟರ್‌ ಲಿಸ್ಟ್‌ ಚೆಕ್‌ ಮಾಡುವ ವಿಧಾನ ಹೇಗೆ?:
* ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ ಸೈಟ್‌ https://www.eci.gov.in/ ಗೆ ಭೇಟಿ ನೀಡಿ.
* ತೆರೆದ ವೆಬ್‌ ಪೇಜ್‌ ನಲ್ಲಿ ‘Election Management >> Electoral Roll ‘ ಆಯ್ಕೆ ಮಾಡಿ ಕ್ಲಿಕ್ ಮಾಡಿ.
* ಮತ್ತೊಂದು ವೆಬ್‌ ಪೇಜ್‌ ತೆರೆಯುತ್ತದೆ. ಈ ವೆಬ್‌ ಪುಟದಲ್ಲಿ ‘Voter Search’ ಆಯ್ಕೆ ಮಾಡಿ ಕ್ಲಿಕ್ ಮಾಡಿ.
* ನಂತರ ತೆರೆಯುವ ವೆಬ್‌ ಪೇಜ್‌ ನಲ್ಲಿ 3 ಆಯ್ಕೆಗಳಿರುತ್ತವೆ.
* ‘ Seartch By EPIC, Search By Details, Search by Mobile’ ಎಂದು.
* ನಿಮ್ಮಲ್ಲಿ ಯಾವ ಮಾಹಿತಿಗಳು ಲಭ್ಯ ಇವೆಯೋ, ಅದಕ್ಕನುಗುಣವಾಗಿ ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ವೋಟರ್‌ ಐಡಿ/ ವೋಟರ್‌ ಲಿಸ್ಟ್‌ ನಲ್ಲಿ ನಿಮ್ಮ ಹೆಸರನ್ನು ಚೆಕ್‌ ಮಾಡಬಹುದು.

ಇದನ್ನೂ ಓದಿ; ಮತದಾರರೇ ಗಮನಿಸಿ; ವೋಟರ್ ಲಿಸ್ಟ್ ನಲ್ಲಿ ಹೆಸರು ಸೇರ್ಪಡೆಗೆ ಇನ್ನೂ ಇದೆ ಕಾಲಾವಕಾಶ

ಸಹಾಯವಾಣಿ ಬಳಸಿ ಚೆಕ್‌ ಮಾಡಬಹುದು:
ಭಾರತದ ಚುನಾವಣಾ ಆಯೋಗವು ಮತದಾರರು ತಮ್ಮ ಮಾಹಿತಿ ಪಡೆದುಕೊಳ್ಳಲು ಸುಲಭ ವಿಧಾನವನ್ನು ಕಲ್ಪಿಸಿದೆ. ಅದು ಸಹಾಯವಾಣಿ ಮೂಲಕ ಟೋಲ್‌ ಫ್ರೀ ಸಹಾಯವಾಣಿ ಸಂಖ್ಯೆ 1950. ದೇಶದಾದ್ಯಂತದ ಯಾವುದೇ ಪ್ರದೇಶದ ಜನರು ಈ ನಂಬರ್ ಗೆ ಕರೆ ಮಾಡಿದರೆ, ಅವರು ನಿಮ್ಮ ರಾಜ್ಯದ ಚುನಾವಣಾ ಸಿಬ್ಬಂದಿಗೆ ಸಂಪರ್ಕಿಸುತ್ತಾರೆ. ನಂತರ ನೀವು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಕುರಿತು ಮಾಹಿತಿ ಪಡೆಯಬಹುದು.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಬಡ್ಡಿಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!

ವೋಟರ್ ಹೆಲ್ಪ್‌ಲೈನ್‌ ಅಪ್ಲಿಕೇಶನ್‌:
‘Voter Helpline’ ಎಂಬ ಹೊಸ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿಯೂ ಸಹ ಮತದಾರರು ತಮ್ಮ ಹೆಸರು ಇರುವ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬಹುದು. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದಲ್ಲಿ ವೆಬ್‌ ವಿಳಾಸ https://www.eci.gov.in/voter-helpline-app ಕ್ಕೆ ಭೇಟಿ ನೀಡಿ. ಅಪ್ಲಿಕೇಶನ್‌ ಡೌನ್‌ ಲೋಡ್‌ ಮಾಡಿಕೊಳ್ಳಬೇಕು.

ಇದನ್ನೂ ಓದಿ; ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್; ಈ ರೀತಿ ಅರ್ಜಿ ಸಲ್ಲಿಸಿ

ವೋಟರ್ ಸರ್ವೀಸ್ ಪೋರ್ಟಲ್
ಮತದಾರರು ವೆಬ್‌ ಪೋರ್ಟಲ್ https://voters.eci.gov.in/ ಗೆ ಭೇಟಿ ನೀಡುವ ಮೂಲಕ, ವೋಟರ್‌ ಐಡಿ ಕುರಿತು ದೂರು ಸಲ್ಲಿಸಬಹುದು, ಸಲಹೆ ಹಂಚಿಕೊಳ್ಳಬಹುದು, ನಿಮ್ಮ ಅಪ್ಲಿಕೇಶನ್‌ ಟ್ರ್ಯಾಕ್‌ ಮಾಡಬಹುದು. ಹೊಸದಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಪೋಲಿಂಗ್ ಸ್ಟೇಷನ್‌, ಅಧಿಕಾರಿಗಳ ಮಾಹಿತಿ ಚೆಕ್‌ ಮಾಡಬಹುದು. ಹೀಗೆ ಹಲವು ಅವಕಾಶಗಳಿವೆ.

ಇದನ್ನೂ ಓದಿ; ಕರ್ನಾಟಕ ಹೈಕೋರ್ಟ್​​ನಲ್ಲಿ ಭರ್ಜರಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ

Voter List: ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೇ?
Voter List: ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೇ?