Guava Fruit: ಸೀಬೆ ಹಣ್ಣು ಅತ್ಯಂತ ಜನಪ್ರಿಯ ಹಣ್ಣುಗಳ ಪೈಕಿ ಒಂದಾಗಿದ್ದು, ಇದು ಸುಲಭವಾಗಿ ದೊರೆಯುವಂತಹ ಹಣ್ಣೂ ಕೂಡ ಹೌದು. ಈ ಲೇಖನದ ಮುಖ್ಯ ಉದ್ದೇಶವು ಸೀಬೆ ಹಣ್ಣಿನಿಂದ ಸಿಗಬಹುದಾದ ಆರೋಗ್ಯ ಲಾಭಗಳ ಕುರಿತು. ನಿಮಗಿದು ತಿಳಿದಿದೆಯೋ, ಇಲ್ಲವೋ ಅಂತೂ ಸೀಬೆ ಹಣ್ಣು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.
ಇದನ್ನೂ ಓದಿ; ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ!; ಭಾರತದ ರಫ್ತು ನಿಷೇಧಕ್ಕೂ ಇದಕ್ಕೂ ಏನು ಸಂಬಂಧ!
ಯಾಕೆಂದರೆ, ಮಾನವನ ಶರೀರಕ್ಕೆ ಬೇಕಾಗುವ ಅವಶ್ಯಕ ಪೋಷಕಾಂಶಗಳ ಸಂಯೋಜನೆಯನ್ನೇ ಈ ಸೀಬೆ ಹಣ್ಣು ಹೊಂದಿದೆ. ಹಾಗಿದ್ದರೆ, ಈ ಸೀಬೆ ಹಣ್ಣಿನಲ್ಲಿ ಅಂಥದ್ದೇನಿರಬಹುದು ಎಂದು ಯೋಚಿಸುತ್ತಿರುವಿರಾ? ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅನೇಕ ಆರೋಗ್ಯದಾಯಕ ಖನಿಜಗಳು ಹಾಗೂ ವಿಟಮಿನ್‌ಗಳು ಉದಾಹರಣೆಗೆ ಸೀಬೆ ಹಣ್ಣಿನಲ್ಲಿರುವ ವಿಟಮಿನ್ “ಸಿ” ಯು ಅತ್ಯಂತ ಸಾಮಾನ್ಯವಾದ ಕಾಯಿಲೆಗಳಿಂದ ನಿಮ್ಮ ದೇಹವನ್ನು ದೂರವಿಟ್ಟು ಅವುಗಳಿಂದ ಒದಗಬಹುದಾದ ಯಾತನೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಉದಾಹರಣೆಗೆ,
ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ:
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯಂತ ಪುಷ್ಟಿದಾಯಕವಾದ ಆಹಾರ ವಸ್ತುಗಳ ಪೈಕಿ ಸೀಬೆ ಹಣ್ಣೂ ಸಹ ಒಂದು. ಸೀಬೆ ಹಣ್ಣಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಯು ಶರೀರದ ರೋಗನಿರೋಧಕ ವ್ಯವಸ್ಥೆಗೆ ಬಲವನ್ನೊದಗಿಸುತ್ತದೆ ಹಾಗೂ ತನ್ಮೂಲಕ ರೋಗಗಳ ವಿರುದ್ಧ ಸೆಣಸಾಡುವ ನಿಮ್ಮ ಶರೀರದ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:
ಆಂಟಿ ಆಕ್ಸಿಡೆಂಟ್‌ಗಳಂತಹ ಅನೇಕ ಘಟಕಗಳ ಮಿಶ್ರಣವು ಈ ಸೀಬೆ ಹಣ್ಣಿನಲ್ಲಿರುವುದರಿಂದ, ಸೀಬೆ ಹಣ್ಣು ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಅತ್ಯಂತ ಪರಿಣಾಮಕಾರಿ ಆಹಾರವಸ್ತುಗಳ ಪೈಕಿ ಒಂದಾಗಿದೆ. ಸೀಬೆ ಹಣ್ಣಿನಲ್ಲಿರುವ ಅಗಾಧ ಪ್ರಮಾಣದಲ್ಲಿರುವ ವಿಟಮಿನ್ ಸಿ ಯು, ಕ್ಯಾನ್ಸರ್ ರೋಗವನ್ನು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಮರ್ಥ್ಯವುಳ್ಳ ಆಮ್ಲಜನಕ ಮುಕ್ತ ರಾಡಿಕಲ್ ಗಳನ್ನು ತಟಸ್ಥಗೊಳಿಸುತ್ತದೆ.
ರಕ್ತದೊತ್ತಡವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ:
ರಕ್ತದೊತ್ತಡವನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಅತ್ಯಂತ ಶ್ಲಾಘನೀಯ ಗುಣವನ್ನು ಸೀಬೆ ಹಣ್ಣು ಹೊಂದಿದೆ. ಸೀಬೆ ಹಣ್ಣಿನಲ್ಲಿ ಹೇರಳವಾಗಿರುವ ಪೊಟ್ಯಾಸಿಯಂ ನ ಅಂಶವು ರಕ್ತದೊತ್ತಡವನ್ನು ನಿರ್ವಹಿಸಲು ಶರೀರಕ್ಕೆ ಸಹಕರಿಸುತ್ತದೆ ಹಾಗೂ ದೇಹದ ರಕ್ತದೊತ್ತಡವನ್ನು ಏರುಪೇರಾಗಿಸಬಲ್ಲ ಬಾಹ್ಯ ಪ್ರಭಾವಗಳಿಂದಲೂ ಕೂಡ ನಿಮ್ಮ ಶರೀರವನ್ನು ರಕ್ಷಿಸುತ್ತದೆ.

ಇದನ್ನೂ ಓದಿ; ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 29-07-2023
ಮುಪ್ಪು ಪ್ರತಿರೋಧಕ:
ವಯಸ್ಸಾಗುವ ಪ್ರಕ್ರಿಯೆಯನ್ನು ಮುಂದೂಡುವ ಯಾವುದಾದರೂ ಶಕ್ತಿಶಾಲಿಯಾದ ಆಹಾರ ಪದಾರ್ಥದ ಹುಡುಕಾಟದಲ್ಲಿ ನೀವೇನಾದರೂ ತೊಡಗಿದ್ದರೆ, ಸೀಬೆ ಹಣ್ಣಿನಲ್ಲಿ ಸಮೃದ್ಧವಾಗಿರುವ ಆಂಟಿ ಆಕ್ಸಿಡೆಂಟ್ ಗಳು ಮುಕ್ತ ರಾಡಿಕಲ್ ಗಳನ್ನು ತಟಸ್ಥಗೊಳಿಸುತ್ತವೆ ಹಾಗೂ ಮಾಲಿನ್ಯದ ಕಾರಣದಿಂದ ಉಂಟಾಗುವ ಅತಿಯಾದ Oxidative stress ನ ಸಂಭವನೀಯತೆಯನ್ನು ತಡೆಗಟ್ಟುತ್ತದೆ.
ತ್ವಚೆಯ ಆರೋಗ್ಯಕ್ಕೆ:
ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಎ ಯು ಸಮೃದ್ಧವಾಗಿದ್ದು, ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುವ ಒಂದು ಪ್ರಮುಖ ವಿಟಮಿನ್ ಆಗಿದೆ. ಸೀಬೆ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ತ್ವಚೆಯು ತಾರುಣ್ಯಪೂರ್ಣವಾಗಿ ಕಾಣುವಂತಾಗಲು ಸಹಕರಿಸುತ್ತವೆ.
ಜೀರ್ಣಶಕ್ತಿಯನ್ನು ಸುಧಾರಿಸುಲು:
ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣಾದ ಸೀಬೆಕಾಯಿಯನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.
ಇದನ್ನೂ ಓದಿ; ಚಿಕ್ಕಮಗಳೂರು: ಗ್ಯಾಸ್ ಗೀಸರ್ ಸೋರಿಕೆ; ಯುವಕ ಸಾವು
ರಕ್ತಧಾತುಗಳ ಸ೦ಖ್ಯೆಯನ್ನು ಹೆಚ್ಚಿಸುತ್ತದೆ:
ಈಗಾಗಲೇ ಉಲ್ಲೇಖಿಸಲಾಗಿರುವ ಖನಿಜಗಳು ಹಾಗೂ ವಿಟಮಿನ್ ಜೊತೆಗೆ ತಾಮ್ರ, ಆಮ್ಲ ಇವೇ ಮೊದಲಾದ ಖನಿಜಗಳ ಹೊರತಾಗಿಯೂ ಕೂಡ ಪೇರಲವು ವಿಟಮಿನ್ ಸಿ ಮತ್ತು ಕೆ ಗಳನ್ನೂ ಸಹ ಒಳಗೊಂಡಿದೆ. ಇವೆಲ್ಲವೂ ರಕ್ತಧಾತುಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ.
ಮೊಡವೆಗೆ ಪರಿಹಾರ:
ಹದಿಹರೆಯದವರಲ್ಲಿ ಕಂಡು ಬರುವ ಅತೀ ದೊಡ್ಡ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ ಬರುವುದು. ಇದನ್ನು ತಿನ್ನಿ ಹಾಗೂ ಒಂದು ಚಿಕ್ಕ ತುಂಡು ಹಣ್ಣಾದ ಸೀಬೆಕಾಯಿಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಮೊಡವೆ ಕಡಿಮೆಯಾಗುವುದು.
ಮೆದುಳಿನ ಆರೋಗ್ಯಕ್ಕೆ:
ಬಿ ಗುಂಪಿನ ವಿಟಮಿನ್‌ಗಳು ಮೆದುಳಿಗೆ ಅವಶ್ಯಕ ಸೀಬೆಕಾಯಿಯಲ್ಲಿ ಬಿ3 ಹಾಗೂ ಬಿ6 ವಿಟಮಿನ್ ಇದ್ದು ಮೆದುಳಿನ ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬೆಳೆವಿಮೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ; ಕೊನೆ ದಿನ ಯಾವಾಗ? ಯಾವ ಬೆಳೆಗಳಿಗೆ ವಿಮೆ ಹಣ ಬರುತ್ತದೆ?
- ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ ವಜಾ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-29.07.2023
ತ್ವಚೆಗೆ ಒಳ್ಳೆಯದು:
ಸೀಬೆಕಾಯಿಯಲ್ಲಿ ವಿಟಮಿನ್ ಇ ಇದೆ. ತ್ವಚೆ ರಕ್ಷಣೆಯಲ್ಲಿ ವಿಟಮಿನ್ ಇ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ:
ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ. ಸೀಬೆ ಹಣ್ಣನ್ನು ನಿಮ್ಮ ಡಯಟ್ ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಿದೆ. ತೆಳ್ಳಗಾಗಲು ಡಯಟ್ ಸೀಬೆಕಾಯಿಯಲ್ಲಿ ನಾರಿನಂಶ ಹಾಗೂ ಖನಿಜಾಂಶಗಳು ಅಧಿಕವಿದ್ದು ಇದನ್ನು ತಿಂದರೆ ದೇಹಕ್ಕೆ ಅಗತ್ಯದ ಪೋಷಕಾಂಶ ದೊರೆಯುತ್ತದೆ, ಹೊಟ್ಟೆಯೂ ತುಂಬುವುದು. ತೆಳ್ಳಗಾಗಲು ಡಯಟ್ ಮಾಡುವವರು ಇದನ್ನು ಸೇರಿಸುವುದು ಒಳ್ಳೆಯದು.
ಚರ್ಮದ ಪೋಷಣೆ:
ಸೀಬೆ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ. ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿರಿಸುತ್ತದೆ. ದಿನಕ್ಕೊಂದು ಸೀಬೆ ತಿಂದರೆ ಸಾಕು, ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ, ಮತ್ತು ಸಿ ಎಲ್ಲವನ್ನೂ ನೀಡುತ್ತದೆ.
Guava Fruit: ಸೀಬೆ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದರೂ ಕೆಲವೊಂದು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಮಾರಕವಾಗಬಹುದು. ಸೀಬೆ ಹಣ್ಣನ್ನು ಯಾರು ತಿನ್ನಬಾರದು ಮತ್ತು ಕಾರಣ ಏನೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಸೀಬೆ ಹಣ್ಣನ್ನು ಯಾರು ತಿನ್ನಬಾರದು?
ನೀವು ಹೊಟ್ಟೆ ಉಬ್ಬರಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಸೀಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಸಮೃದ್ಧವಾಗಿದೆ, ಇದರಿಂದಾಗಿ ನಮ್ಮ ದೇಹಕ್ಕೆ ಹೆಚ್ಚು ವಿಟಮಿನ್ ಸಿ ಅಥವಾ ಫ್ರಕ್ಟೋಸ್ ಅನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ ಇದರಿಂದ ಹೊಟ್ಟೆಯುಬ್ಬರ ಉಂಟಾಗುತ್ತದೆ.
ನೀವು ಕರುಳಿನ ಸಮಸ್ಯೆಯನ್ನು ಹೊಂದಿದ್ದರೆ:
ಜೀರ್ಣಕ್ರಿಯೆ ಮತ್ತು ಮಲಬದ್ಧತೆಯನ್ನು ಸರಾಗಗೊಳಿಸುವಲ್ಲಿ ಸೀಬೆ ಹಣ್ಣು ಉತ್ತಮವಾಗಿದ್ದರೂ, ಸೀಬೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ನೀವು ವಿಪರೀತ ಕರುಳಿನ ಸಹಲಕ್ಷಣದಿಂದ ಬಳಲುತ್ತಿದ್ದರೆ. ಮಿತವಾಗಿ ತಿನ್ನವುದು ಉತ್ತಮ.
ಇದನ್ನೂ ಓದಿ; ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಳವಾದ ವ್ಯಾಘ್ರಗಳ ಸಂತತಿ
ಮಧುಮೇಹಿಗಳು:
ಮಧುಮೇಹಿಗಳಿಗೆ ಸೀಬೆ ಹಣ್ಣು ಅತ್ಯುತ್ತಮ ಹಣ್ಣು ಎಂದು ಹೇಳಲಾಗುತ್ತದೆ, ಆದರೆ ನೀವು ಸೀಬೆಹಣ್ಣು ಅನ್ನು ಸೇವಿಸುವಾಗ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೀವು ಪರೀಕ್ಷಿಸಬೇಕು. ಒಂದು ಸೀಬೆಹಣ್ಣು 6 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ಹೆಚ್ಚು ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಜನರು:
ಊಟದ ನಡುವೆ ಸೀಬೆ ಹಣ್ಣನ್ನು ಸೇವಿಸುವುದು ಉತ್ತಮ ಉಪಾಯ, ಆದರೆ ಟಿಓಐ ನಲ್ಲಿನ ವರದಿಯ ಪ್ರಕಾರ, ರಾತ್ರಿ ವೇಳೆ ಈ ಹಣ್ಣನ್ನು ಸೇವಿಸಬಾರದು ಏಕೆಂದರೆ ಇದು ಶೀತ ಮತ್ತು ಕೆಮ್ಮಿಗೆ ಕಾರಣವಾಗಬಹುದು.
ಹಲ್ಲುನೋವು:
ನೀವು ಈಗಾಗಲೇ ಹಲ್ಲುನೋವಿನಿಂದ ಬಳಲುತ್ತಿದ್ದರೆ, ಈ ಹಣ್ಣನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಮಾಗಿದ ಸೀಬೆ ಹಣ್ಣು ಹೆಚ್ಚು ಅಪಾಯಕಾರಿಯಾಗಿದೆ.






Leave a Reply