Aadhaar Card: How To Update Aadhaar Card

Aadhaar Card: ಆಧಾರ್ ಕಾರ್ಡ್ ಪಡೆದು 10 ವರ್ಷ ದಾಟಿದವರು ಕಡ್ಡಾಯವಾಗಿ ಆಧಾರ್ ಅಪ್ ಡೇಟ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಈ ಹಿಂದೆನೆ ಸ್ಪಷ್ಟಪಡಿಸಿತ್ತು. ಆದರೆ ಹಲವು ಜನರ ಆದಾರ್ ಕಾರ್ಡ್ ನವೀಕರಿಸದೇ ಇರುವುದರಿಂದ ಅಂತಹ ಆಧಾರ್ ಕಾರ್ಡ್ ಗಳು ನಿಷ್ಕ್ರಿಯವಾಗುತ್ತಿದೆ.

ಇದನ್ನೂ ಓದಿ; ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ!; ಭಾರತದ ರಫ್ತು ನಿಷೇಧಕ್ಕೂ ಇದಕ್ಕೂ ಏನು ಸಂಬಂಧ!

ಎಲ್ಲಿ ನವೀಕರಿಸಬೇಕು?:
ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಯ.ಐ.ಡಿ.ಎ.ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ್ಯ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ ಮಾಡಿಸಬಹುದು.

ಇದನ್ನೂ ಓದಿ; ಚಿಕ್ಕಮಗಳೂರು: ಗ್ಯಾಸ್ ಗೀಸರ್ ಸೋರಿಕೆ; ಯುವಕ ಸಾವು

ಅದೇ ರೀತಿ 5 ವರ್ಷ ಮೇಲ್ಮಟ್ಟು, 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ನವೀಕರಣಗೊಳಿಸಬೇಕು. ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಜಿಲ್ಲೆಯ ನಾಗರಿಕರು ಆಧಾರ್ ನೊಂದಣಿ ಮಾಡಿಕೊಳ್ಳಬೇಕು. ಅಲ್ಲದೆ ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.

Aadhaar Card:
Aadhaar Card:

ಇದನ್ನೂ ಓದಿ; ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 29-07-2023

ಆದಾರ್ ನವೀಕರಿಸಿದ್ದಕೆ ಸೇವಾ ಶುಲ್ಕ ಎಷ್ಟು?:
* ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್ ನವೀಕರಣವು ಉಚಿತವಾಗಿರುತ್ತದೆ.
* ಉಳಿದಂತೆ ಹೆಸರು, ಲಿಂಗ, ವಯಸ್ಸು ವಿಳಾಸ ಹಾಗೂ ಮೊಬೈಲ್ ನಂಬರ್ ಗಳ ವಿವರ (ಡೆಮೋಗ್ರಾಫಿಕ್ ನವೀಕರಣಕ್ಕೆ) 50 ರೂ
* ಕಣ್ಣು, ಮುಖ, ಕೈ ಬೆರಳುಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 100 ರೂ.ಗಳ ಸೇವಾ ಶುಲ್ಕ ಇದೆ.

ಆನ್‌ಲೈನ್ ನವೀಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದನ್ನು https://myaadhaar.uidai.gov.in ನಲ್ಲಿ ನವೀಕರಿಸಬಹುದು.

ಇದನ್ನೂ ಓದಿ; ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಳವಾದ ವ್ಯಾಘ್ರಗಳ ಸಂತತಿ

ನಿಮ್ಮ ಆಧಾರ್ ಕಾರ್ಡ್ (Aadhaar Card:)ಹೆಸರು, ವಿಳಾಸ, ಹುಟ್ಟಿದ ದಿನಾಂಕವನ್ನು ಬದಲಾಯಿಸುವುದು ಹೇಗೆ?:
* ಮೊದಲು ಗೂಗಲ್ ಕ್ರೋಮ್ ಅನ್ನು ಓಪನ್ ಮಾಡಿ (Google Chrome)
* ಆಧಾರ್ ಕಾರ್ಡ್ ಅಥವಾ ಆದಾರ್ ಡೌನ್ ಲೋಡ್ ಅಂತ ಸರ್ಚ್ ಮಾಡಿ(Aadhar Card Or Aadhar Download)
* ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಗೆಟ್ ಆಧಾರ್ ಅನ್ನು ಕ್ಲಿಕ್ ಮಾಡಿ(Get Aadhar-Unique Ide notification Authority Of India)
* ಅಫೀಷಿಯಲ್ ವೆಬ್ಸೈಟ್ ಓಪನ್ ಆಗುತ್ತದೆ(Official Website)
* ಮೈ ಆಧಾರ್ ಮೇಲೆ ಕ್ಲಿಕ್ ಮಾಡಿ(My Aadhar)
* ಅಪ್ಡೇಟ್ ಡೆಮೋಗ್ರಾಫಿಕ್ ಡೇಟಾ ಚೆಕ್ ಸ್ಟೇಟಸ್ ಅನ್ನು ಕ್ಲಿಕ್ ಮಾಡಿ(Update Demographics Data & Check Status)
* ಲಾಗಿನ್ ಕೇಳುತ್ತದೆ (Login) ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ರಿಜಿಸ್ಟ್ರಾರ್ ನಂಬರ್(Register Phone Number) ಇದೆ ಅದನ್ನು ಹಾಕಿ ಓಟಿಪಿ ಹಾಕಿ (OTP) ಲಾಗಿನ್(Login) ಮಾಡಿ
* ಹೊಸ ಪೇಜ್ ಓಪನ್ (News Page) ಆಗುತ್ತದೆ ಅದರಲ್ಲಿ ನಿಮ್ಮ ಆಧಾರ್ ನಂಬರ್ (Enter aadhar) ಹಾಗೂ ಕ್ಯಾಪ್ಚರ್ ಕೋಡ್ (Enter Above Captcha) ಹಾಕಿ ಸೆಂಡ್ ಓಟಿಪಿ(Send OTP) ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗುತ್ತದೆ
* ಹೊಸ ಪೇಜ್ ನಲ್ಲಿ ಡಾಕ್ಯುಮೆಂಟ್ ಅಪ್ಡೇಟ್ ಮೇಲೆ ಕ್ಲಿಕ್ ಮಾಡಿ(Document Update)
* ಕೆಳ ಭಾಗದಲ್ಲಿ ನೇಕ್ಟ್ ಮೇಲೆ ಕ್ಲಿಕ್ ಮಾಡಿ (Next)
* ನಂತರ ನಿಮ್ಮ ಆಧಾರ್ ಡೀಟೈಲ್ಸ್(Details) ಕಾಣಿಸುತ್ತದೆ ಅದರಲ್ಲಿ ನಿಮ್ಮ ಡೀಟೈಲ್ಸ್ ಸರಿ ಇದೆಯಾ ಎಂದು ಚೆಕ್ (check) ಮಾಡಿ ಕೆಳಗೆ ಸ್ಕ್ರೋಲ್ (Scroll) ಮಾಡಿ ಅದರಲ್ಲಿ ರೈಟ್ ಬಾಕ್ಸ್(Right Boxs) ಮೇಲೆ ಕ್ಲಿಕ್ ಮಾಡಿ ನೆಕ್ಟ್ ಬಾಕ್ಸ್ (Next)ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ಡಾಕ್ಯುಮೆಂಟ್ (Document Upload) ಅಪ್ಲೋಡ್ ಮಾಡಲು ಕೇಳುತ್ತದೆ ಅದರಲ್ಲಿ ಎರಡೂ ರೀತಿಯ ಡಾಕ್ಯುಮೆಂಟ್ ಅಪ್ಲೋಡ್ ಕೇಳುತ್ತದೆ ಮೊದಲ ಡಾಕ್ಯುಮೆಂಟ್ ಅಪ್ಲೋಡ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಪ್ರೂಫ್ ಕೇಳುತ್ತದೆ ಅದರಲ್ಲಿ ನಿಮ್ಮ ಹತ್ತಿರ ಯಾವ ಡಾಕ್ಯುಮೆಂಟ್ ಇರುತ್ತದೆ ಅದರ ಮೇಲೆ ಕ್ಲಿಕ್ ನಂತರ ಓಕೆ ಮೇಲೆ ಕ್ಲಿಕ್ ಮಾಡಿ
* ನಂತರ ವಿವ್ ಡೀಟೈಲ್ಸ್ ಆ್ಯಂಡ್ ಅಪ್ಲೋಡ್ ಡಾಕ್ಯುಮೆಂಟ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಯಾವ ಡಾಕ್ಯುಮೆಂಟ್ ಹಾಕುತ್ತೀರಿ ಅದನ್ನು ಡೌನ್ ಲೋಡ್ ಮಾಡಿ ಅಪ್ಲೋಡ್ ಮಾಡಿ.(View Details & Upload Document)
* ಎರಡನೇ ಡಾಕ್ಯುಮೆಂಟ್ ಅಪ್ಲೋಡ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಅಡ್ರೆಸ್ ಪ್ರೂಫ್ ಗೆ ಯಾವುದಾರೂ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ
* ವಿವ್ ಡೀಟೈಲ್ಸ್ ಆ್ಯಂಡ್ ಅಪ್ಲೋಡ್ ಡಾಕ್ಯುಮೆಂಟ್ ಅಂತ ಇರುತ್ತದೆ ಅಡ್ರೆಸ್ ಪ್ರೂಫ್ ಗೆ ಯಾವ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿರುತ್ತೀರಾ ಆ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ.
* ನಂತರ ರೈಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ನಂತರ ನೆಕ್ಟ್ ಮೇಲೆ ಕ್ಲಿಕ್ ಮಾಡಿ
* ಆಮೇಲೆ ಕಾನ್ಫಾರ್ಮೇಷನ್ (Confirmation) ಅನ್ನು ಕೇಳುತ್ತದೆ ಅದರ ಮೇಲೆ ಓಕೆ ಅಂತ ಕ್ಲಿಕ್ ಮಾಡಿ
* ಒಂದು ನೋಟಿಫಿಕೇಶನ್(Notification) ಬರುತ್ತದೆ ಅದರ ನಂತರ ಕೆಳ ಬಾಗದಲ್ಲಿ ಸಬ್ ಮಿಟ್ (Submit) ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಪೆಮೆಂಟ್ ನೋಟಿಫಿಕೇಷನ್ (Payment Option) ಬರುತ್ತದೆ . ನಂತರ Download Acknowledgement ಇರುತ್ತದೆ
ಅದರ ಮೇಲೆ ಕ್ಲಿಕ್ ಮಾಡಿ ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.


ಇತ್ತೀಚಿನ ಜನಪ್ರಿಯ ಸುದ್ದಿಗಳು