BELE KATTU SAARU: ಬೇಳೆ ಕಟ್ಟಿನ ಸಾರು ಹೀಗೆ ಮಾಡಿ ನೋಡಿ

BELE KATTU SAARU: ಅಡುಗೆ ಮಾಡುವುದು ಒಂದು ಕಲೆ. ಈ ಕಾರಣಕ್ಕಾಗಿಯೇ ಅಡುಗೆಯನ್ನು ಪಾಕ ಕಲೆ ಎಂದು ಕೂಡ ಕರೆಯುತ್ತಾರೆ. ಸಣ್ಣಪುಟ್ಟ ವಸ್ತುಗಳೆಲ್ಲಾ ಸೇರಿ ಆಹಾರದ ಸಂಪೂರ್ಣ ರುಚಿಯನ್ನು ಬದಲಾಯಿಸುತ್ತವೆ. ಆದರೆ ಕೆಲವೊಬ್ಬರ ಪಾಲಿಗೆ ಅಡುಗೆ ಮಾಡುವುದು ದೊಡ್ಡ ಕಿರಿಕಿರಿಯ ಕೆಲಸ.

ಇದನ್ನೂ ಓದಿ; ಕೊಪ್ಪ: ಹಾಸ್ಟೆಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಇಂದು ನಾವು ನಿಮಗೆ ಸಿಂಪಾಲ್ ಆಗಿ ಪಟಪಟ್ ಅಂಥ “ಬೇಳೆಕಟ್ಟು ಸಾರು” ಮಾಡುವುದು ಹೇಗೆ ಅಂಥ ಹೇಳಿಕೊಡ್ತೀವಿ.

ಬೇಳೆ ಬೇಯಿಸಿದ ನೀರನ್ನು ಹಾಗೆಯೇ ಹೊರಗೆ ಚೆಲ್ಲುವ ಬದಲು ಅದರಿಂದ ರುಚಿಕರವಾದ ಬೇಳೆ ಕಟ್ಟು ಸಾರು ಮಾಡಿ ನೋಡಿ.

ಇದನ್ನೂ ಓದಿ; ಶೃಂಗೇರಿ: ಪಿಡಿಒ, ಕಾರ್ಯದರ್ಶಿ ಇಬ್ಬರೂ ಇಲ್ಲದೆ ಅನಾಥವಾದ ಗ್ರಾಮ ಪಂಚಾಯಿತಿ

BELE KATTU SAARU: ಹೇಗೆ ಮಾಡುವುದು?:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ. ನಂತರ ಅದಕ್ಕೆ ಒಂದು ಎರಡು ಒಣಮೆಣಸಿನಕಾಯಿ, 4 ಟೀ ಸ್ಪೂನ್ ಕಾಳು ಮೆಣಸು, 1 ಟೀ ಸ್ಪೂನ್ ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ 4 ಬೆಳ್ಳುಳ್ಳಿ, 1 ಈರುಳ್ಳಿ ಕತ್ತರಿಸಿದ್ದು ಹಾಕಿ ಹಾಗೇ 1 ಟೊಮೆಟೊ, 5 ಎಸಳು ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಫ್ರೈ ಮಾಡಿಕೊಳ್ಳಿ.

BELE KATTU SAARU:
BELE KATTU SAARU:

ಇತ್ತೀಚಿನ ಜನಪ್ರಿಯ ಸುದ್ದಿಗಳು 


ಇದಕ್ಕೆ 1 ಚಮಚ ಸಾಂಬಾರು ಪುಡಿ ಕೂಡ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಸಾರು ಮಾಡುವ ಪಾತ್ರೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ 4 ಟೀ ಸ್ಪೂನ್ ಸಾಸಿವೆ, ಸ್ವಲ್ಪ ಕರಿಬೇವು 1 ಒಣ ಮೆಣಸಿನಕಾಯಿಯನ್ನು ಹಾಕಿ. 2 ಟೇಬಲ್ ಸ್ಪೂನ್ ನಷ್ಟು ಹುಣಸೆಹಣ್ಣಿನ ರಸ ಸೇರಿಸಿ 2 ನಿಮಿಷಗಳ ಕಾಲ ಕುದಿಸಿ ನಂತರ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೇಳೆ ಬೇಯಿಸಿಟ್ಟುಕೊಂಡ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿಕೊಂಡರೆ ಬೇಳೆ ಕಟ್ಟಿನ ಸಾರು ಸಿದ್ಧ.

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇