Google: 25 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸರ್ಚ್ ಎಂಜಿನ್

Google: ಈಗಿನ ಇಂಟರ್ ನೆಟ್ ಯುಗದಲ್ಲಿ ಹೆಚ್ಚು ಬಳಕೆಯಲ್ಲಿರುವ ಗೂಗಲ್ ತನ್ನ 25ನೇ ಜನ್ಮದಿನವನ್ನು ಇಂದು ಆಚರಿಸಿಕೊಳ್ಳುತ್ತಿದೆ. ಇದಕ್ಕಾಗಿ ವಿಭಿನ್ನ ಡೂಡಲ್ ಸಿದ್ಧಪಡಿಸಿ ತನ್ನ ಸರ್ಚ್ ಎಂಜಿನ್‌ನಲ್ಲಿ ಪ್ರಕಟಿಸಿದೆ.

27 ವಸಂತಗಳಲ್ಲಿ ಗೂಗಲ್ ಬೆಳೆದುಬಂದ ಹಾದಿ:
ಅಲ್ಪಬೆಟ್ ಇಂಕ್ ಕಂಪನಿಯು ಈ ವಿಶೇಷ ಸಂದರ್ಭದಲ್ಲಿ ಕಳೆದು ಹೋದ 27 ವಸಂತಗಳಲ್ಲಿ ಗೂಗಲ್ (Google: ) ಬೆಳೆದುಬಂದ ಹಾದಿಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದೆ. 1998 ರಿಂದ 2023 ರವರೆಗೆ ಗೂಗಲ್ ನ ಲೊಗೊ ಮತ್ತು ಕಾಲಕಾಲಕ್ಕೆ ಪ್ರಕಟಿಸುವ ಡೂಡಲ್ ಗಳನ್ನು ತನ್ನ ಬ್ಲಾಗ್ ನಲ್ಲಿ ಗೂಗಲ್ ಹಂಚಿಕೊಂಡಿದೆ.

ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಅಧಿಕೃತವಾಗಿ ಆರಂಭ:
ಸರ್ಗಿ ಬ್ರೆನ್ ಮತ್ತು ಲ್ಯಾರಿ ಪೇಜ್ ಅವರು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ 1997ರ ಜನವರಿಯಲ್ಲಿ ಮೊದಲ ಬಾರಿಗೆ ಭೇಟಿಯಾದರು. ಸರ್ಗಿ ಆಗಲೇ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ನಂತರ ಇಬ್ಬರೂ ಒಂದು ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುವ ಕುರಿತು ಜೊತೆಗೂಡಿ ಕೆಲಸ ಮಾಡಲು ಆರಂಭಿಸಿದರು. ಅದರಲ್ಲಿ ಯಶಸ್ವಿಯಾದ ಈ ಜೋಡಿ ಅದರ ಮಾದರಿಯನ್ನು ಸಿದ್ಧಪಡಿಸಿದರು. ಇದನ್ನು ವಿಸ್ತರಿಸಲು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆದಾರರನ್ನು ಸರ್ಗಿ ಮತ್ತು ಲ್ಯಾರಿ ಹುಡುಕಿದರು. ಸನ್ ಮೈಕ್ರೋಸಿಸ್ಟಮ್ ಒಂದು ಲಕ್ಷ ಅಮೆರಿಕನ್ ಡಾಲರ್ ಅನ್ನು ಗೂಗಲ್ ನಲ್ಲಿ ಹೂಡಿತು. ಹೀಗಾಗಿ 1998ರ ಸೆ. 27ರಂದು ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಅಧಿಕೃತವಾಗಿ ಆರಂಭಗೊಂಡಿತು.

ಅಲ್ಲಿಂದ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿಯಷ್ಟೇ ಉಳಿಯದೇ, ಇಮೇಲ್, ಯುಟ್ಯೂಬ್‌ನಿಂದ ಹಿಡಿದು ಸದ್ಯ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ಬೆಳೆದು ನಿಂತಿದೆ. ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಜಗತ್ತಿನ ಅತಿ ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಲ್ಲಿದೆ. ಹಾರ್ಡ್ವೇರ್‌ನಲ್ಲೂ ಕೈಯಾಡಿಸಿರುವ ಗೂಗಲ್ ಪಿಕ್ಸೆಲ್ ಮೂಲಕ ಮೊಬೈಲ್ ಕ್ಷೇತ್ರದಲ್ಲೂ ಸದ್ದು ಮಾಡುತ್ತಿದೆ.

Google:
Google:

ಕಂಪನಿಯನ್ನು ಮುನ್ನಡೆಸುತ್ತಿರುವವರು ಭಾರತ ಮೂಲದ ವ್ಯಕ್ತಿ:
ಸದ್ಯ 1.8 ಶತಕೋಟಿ ಜಿಮೇಲ್ ಬಳಕೆದಾರರು ಜಗತ್ತಿನಲ್ಲಿದ್ದಾರೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 22ರಷ್ಟಾಗಿದೆ. ಭಾರತದಲ್ಲಿರುವ ಅಂತರ್ಜಾಲ ಬಳಕೆದಾರರಲ್ಲಿ ಶೇ 80ರಷ್ಟು ಜನ ಗೂಗಲ್ ಬಳಸುತ್ತಿದ್ದಾರೆ. ಸದ್ಯ ಕಂಪನಿಯನ್ನು ಮುನ್ನಡೆಸುತ್ತಿರುವವರು ಭಾರತ ಮೂಲದ ಸುಂದರ್ ಪಿಚೈ.

ಜಗತ್ತಿನ 150ಕ್ಕೂ ಹೆಚ್ಚು ಭಾಷೆಗಳಲ್ಲಿ ನಿತ್ಯ ಹಲವು ವಿಷಯಗಳ ಕುರಿತ ಹುಡುಕಾಟ ಗೂಗಲ್ ಮೂಲಕವೇ ನಡೆಯುತ್ತಿದೆ. ಆರಂಭದಲ್ಲಿ ಆಟಿಕೆಗಳನ್ನು ಬಳಸಿ ಸಿದ್ಧಪಡಿಸಲಾದ ಕ್ಯಾಬಿನೇಟ್‌ನಲ್ಲಿ ಗೂಗಲ್‌ನ ಸರ್ವರ್ ಇಡಲಾಗಿತ್ತು. ಆದರೆ ಇಂದು ಜಗತ್ತಿನ 20 ಕಡೆಗಳಲ್ಲಿ ಗೂಗಲ್ ತನ್ನ ಮಾಹಿತಿ ಕೇಂದ್ರ ಹೊಂದಿದೆ. ಅಲ್ಲಿ ಬೃಹತ್ ಸರ್ವರ್ ಗಳನ್ನು ಕಂಪನಿ ಹೊಂದಿದೆ. ಹೀಗಾಗಿ ಗೂಗಲ್ ಜಾಗತಿಕ ಮಟ್ಟದಲ್ಲಿ 1.78 ಲಕ್ಷ ನೌಕರರನ್ನು ಹೊಂದಿದೆ.

ಪ್ರಮುಖ ಸುದ್ದಿಗಳನ್ನು ಓದಿ

  1. ಡಾ. ಬ್ರೋ ವೀಡಿಯೋ ಬ್ಯಾನ್ ಮಾಡಿದ ಯೂಟ್ಯೂಬ್
  2. ರೈತರಿಗೆ ಗುಡ್ ನ್ಯೂಸ್; ಇನ್ನೂ ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಶು ವೈದ್ಯರ ಸೇವೆ
  3. ಚೈತ್ರಾ ಕುಂದಾಪುರ ಗ್ಯಾಂಗ್​ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?, ದೊಡ್ಡವರ ಹೆಸರು ಹೊರಬರುತ್ತಾ?
  4. ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು!; ಈ ಬಾರಿ ವಂಚನೆ ಆರೋಪ ಮಾಡಿದ್ದು ಯಾರು?
  5. ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ; ಹಾಲಶ್ರೀ ಲಾಕ್ ಗಾಗಿ ಅರ್ಚಕರ ವೇಷ; ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ
  6. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
  7. ಗಣೇಶ ಚತುರ್ಥಿ ಪೂಜೆ ಮಾಡಲು ಶ್ರೇಷ್ಠ ಸಮಯ ಯಾವುದು ಗೊತ್ತಾ?; ಶುಭ ಮುಹೂರ್ತದ ವಿವರ, ಆಚರಣೆ ಇಲ್ಲಿದೆ
  8. ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು
  9. hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
  10. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
  11. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-16.09.2023
  12. ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?
  13. 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು
  14. 14 ನ್ಯೂಸ್​ ಆ್ಯಂಕರ್​ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?
  15. ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?
  16. ಪೊಲೀಸರ ಮಿಂಚಿನ ಕಾರ್ಯಾಚರಣೆ; ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ
  17. ಚೈತ್ರಾ ಕುಂದಾಪುರ ಬಂಧನವಾಗುತ್ತಿದಂತೆ 3 ನೇ ಆರೋಪಿ ನಾಪತ್ತೆ
  18. ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚಿಸಿದ ಚೈತ್ರಾ ಗ್ಯಾಂಗ್ ನ ಮೋಸದ ರೋಚಕ ಸ್ಟೋರಿ ಸಿನಿಮಾ ಸ್ಟೋರಿಯನ್ನೂ ಮೀರಿಸುತ್ತದೆ.
  19. ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
  20. ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
  21. ಜಿ20 ಶೃಂಗಸಭೆ, ಏನಿದು g20?; ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ?
  22. ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ; ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು
  23. ಗಣೇಶನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?; ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಈ ರೀತಿ ಮಾಡಿ ನೋಡಿ
  24. ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್; ಈ ಐಫೋನ್‌ಗೆ ಈಗ ಸಖತ್ ಡಿಸ್ಕೌಂಟ್‌..!;  ಆಫರ್‌ ತಿಳಿದ್ರೆ ವಾವ್ ಅಂತೀರಾ!?

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇