(UPI Feature:) ಕ್ರೆಡಿಟ್ ಕಾರ್ಡ್ಗಳಲ್ಲಿ ಸಿಗುವ ರೀತಿಯಲ್ಲಿ ಯುಪಿಐ ಪಾವತಿಯನ್ನೂ ಇಎಂಐಗಳಾಗಿ ವಿಭಜಿಸುವ ಒಂದು ಅವಕಾಶ ನೀಡಲು ಎನ್ಪಿಸಿಐ ಯೋಜಿಸುತ್ತಿದೆ.
ಇದನ್ನೂ ಓದಿ: ಹೊಲಿಗೆ ಯಂತ್ರ, ದ್ವಿಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ
ಹೌದು, ಯುಪಿಐ ಪಾವತಿಯನ್ನೂ ಇಎಂಐಗಳಾಗಿ ವಿಭಜಿಸುವ ಫೀಚರ್ ಇನ್ನೂ ಪ್ರಸ್ತಾಪದ ಹಂತದಲ್ಲಿದ್ದು, ಇದು ಜಾರಿಯಾದರೆ, ಪೇಟಿಎಂ, ಫೋನ್ ಪೇ, ಕ್ರೆಡ್ ಇತ್ಯಾದಿ ಫಿನ್ಟೆಕ್ ಪ್ಲಾಟ್ಫಾರ್ಮ್ಗಳು ಯುಪಿಐ ಪೇಮೆಂಟ್ನಲ್ಲಿ ಇಎಂಐ ಆಪ್ಷನ್ಸ್ ಒದಗಿಸಬಹುದು. ಗ್ರಾಹಕರು ಯುಪಿಐ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುವ ಸಂದರ್ಭದಲ್ಲೇ ಇಎಂಐ ಅವಕಾಶ ನೀಡಲಾಗುತ್ತದೆ. ಪಿಒಎಸ್ ಮೆಷಿನ್ನಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವಾಗ ಪೇಮೆಂಟ್ ಸ್ಪ್ಲಿಟ್ ಮಾಡುವ ರೀತಿಯಲ್ಲಿ ಯುಪಿಐನಲ್ಲೂ ಅಳವಡಿಸಲಾಗಬಹುದು.
ಇದನ್ನೂ ಓದಿ: ಆರೋಗ್ಯ ಸಂಜೀವಿನಿ ಯೋಜನೆ ಜಾರಿ; ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ
ಆದಾಯ ಮೂಲ ಸೃಷ್ಟಿ:
ಇಎಂಐ ಆಪ್ಷನ್ನಲ್ಲಿ ಶೇ. 1.5ರಷ್ಟು ಇಂಟರ್ಮಿಟೆಂಟ್ ಫೀ ಹಾಕಲು ಎನ್ಪಿಸಿಐ ಯೋಜಿಸಿದೆ. ಇದು ಫಿನ್ಟೆಕ್ ಅ್ಯಪ್ಗಳು ಹಾಗೂ ಬ್ಯಾಂಕುಗಳಿಗೆ ಆದಾಯ ಗಳಿಸಲು ಒಳ್ಳೆಯ ಮಾರ್ಗವೆನಿಸಲಿದೆ. ಯುಪಿಐನಲ್ಲಿ ಹೆಚ್ಚಿನ ವಹಿವಾಟುಗಳಿಂದ ಯಾರಿಗೂ ಸದ್ಯಕ್ಕೆ ಲಾಭ ಸಿಗುತ್ತಿಲ್ಲ. ಸ್ಪ್ಲಿಟ್ ಪೇಮೆಂಟ್ನಲ್ಲಿ ವಿಧಿಸುವ ಇಂಟರ್ಮಿಟೆಂಟ್ ಫೀ ಒಂದು ಆದಾಯ ಮೂಲ ಸೃಷ್ಟಿಸಬಹುದು.
ಈಗಾಗಲೇ ವಿವಿಧ ಬ್ಯಾಂಕುಗಳು ಪೇಟಿಎಂ, ನವಿಯಂತಹ ಫಿನ್ಟೆಕ್ ಕಂಪನಿಗಳ ಜೊತೆ ಟೈಯಪ್ ಮಾಡಿಕೊಂಡು ಬಳಕೆದಾರರಿಗೆ ಕ್ರೆಡಿಟ್ ಲೈನ್ ಆಫರ್ ಮಾಡುತ್ತಿವೆ. ಇಎಂಐ ವಿಚಾರದಲ್ಲೂ ಇದೇ ಬೆಳವಣಿಗೆ ಆಗಬಹುದು.

ಇದನ್ನೂ ಓದಿ: ಈ ದಾಖಲೆಗಳಿದ್ರೆ ನಿಮ್ಮ ಮಕ್ಕಳಿಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸಬಹುದು!
ಇತ್ತೀಚಿನ ಜನಪ್ರಿಯ ಸುದ್ದಿಗಳು (UPI Feature:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





