(Lpg Connections:) 2016ರ ಮೇ 1ರಂದು ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ.
ಇದನ್ನೂ ಓದಿ: ಹೊಲಿಗೆ ಯಂತ್ರ, ದ್ವಿಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ
ಫಲಾನುಭವಿಗಳು ಅಡುಗೆ ಅನಿಲ ಸಂಪರ್ಕ, ಮೊದಲ ಮರುಪೂರಣ ಅಥವಾ ಸ್ಟೌವ್ ಗಳಿಗಾಗಿ ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಈ ವೆಚ್ಚಗಳನ್ನು ಭಾರತ ಸರ್ಕಾರ ಮತ್ತು ತೈಲ (ಅಡುಗೆ ಅನಿಲ) ಮಾರುಕಟ್ಟೆ ಕಂಪನಿಗಳು (ಒಎಂಸಿ ಸಂಸ್ಥೆಗಳು) ಭರಿಸುತ್ತವೆ. ಫಲಾನುಭವಿಗಳು 14.2 ಕೆಜಿ ಸಿಂಗಲ್ ಬಾಟಲ್ ಸಂಪರ್ಕ, 5 ಕೆಜಿ ಸಿಂಗಲ್ ಬಾಟಲ್ ಸಂಪರ್ಕ ಅಥವಾ 5 ಕೆಜಿ ಡಬಲ್ ಬಾಟಲ್ ಸಂಪರ್ಕದಿಂದ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಬಾಟಲ್ ಸಂಪರ್ಕ ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಆರೋಗ್ಯ ಸಂಜೀವಿನಿ ಯೋಜನೆ ಜಾರಿ; ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ
(Lpg Connections:) ತಮ್ಮ ಕುಟುಂಬದಲ್ಲಿ ಪ್ರಸ್ತುತ ಅಡುಗೆ ಅನಿಲ ಸಂಪರ್ಕ ಅಸ್ತಿತ್ವದಲ್ಲಿರದ ಬಡ ಮನೆಗಳ / ಕುಟುಂಬಗಳ ಅರ್ಹ ವಯಸ್ಕ ಮಹಿಳೆಯರು pmuy.gov.in ಮೂಲಕ ಆನ್ ಲೈನ್ ನಲ್ಲಿ ಅಥವಾ ಸಾರ್ವಜನಿಕ ವಲಯದ ಅಡುಗೆ ಅನಿಲ ಸಂಸ್ಥೆಗಳ ಯಾವುದೇ ಅಡುಗೆ ಅನಿಲ ವಿತರಕರ ಮಳಿಗೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ, ಫಲಾನುಭವಿಗಳು ಅಧಿಕೃತ ಪಿ.ಎಂ.ಯು.ವೈ. ಯೋಜನೆ ಪೋರ್ಟಲ್ pmuy.gov.in ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ ಸಾರ್ವಜನಿಕ ವಲಯದ ಅಡುಗೆ ಅನಿಲ ಸಂಸ್ಥೆಗಳ ಹತ್ತಿರದ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಈ ದಾಖಲೆಗಳಿದ್ರೆ ನಿಮ್ಮ ಮಕ್ಕಳಿಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸಬಹುದು!
ಇತ್ತೀಚಿನ ಜನಪ್ರಿಯ ಸುದ್ದಿಗಳು (Lpg Connections:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





