chaithra kundapura:- ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ. ಹಾಲಾಶ್ರೀ ಕಾರ್ಯಾಚರಣೆಯೇ ರಣ ರೋಚಕವಾಗಿದೆ. 8 ದಿನದಿಂದ ತಲೆಮರೆಸಿಕೊಂಡಿದ್ದ ಹಾಲಶ್ರೀ ಬೇಟೆಗೆ ಸಿಸಿಬಿ ಹೇಗೆಲ್ಲಾ ಪ್ಲಾನ್ ಮಾಡಿತ್ತು ಗೊತ್ತಾ?
ಇದನ್ನೂ ಓದಿ; ಗಣೇಶ ಹಬ್ಬದ ಬಳಿಕವೂ ಚಿನ್ನದ ಬೆಲೆ ಏರಿಕೆ; ಬೆಳ್ಳಿ ತುಸು ಕಡಿಮೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ಬೆಲೆಪಟ್ಟಿ
8 ದಿನ ಹಾಲಶ್ರೀ ನಿಂತಲ್ಲಿ ನಿಂತಿರಲಿಲ್ಲ., ಟ್ರೈನ್ ನಲ್ಲೇ ಅಡ್ಡಾಡುತ್ತಿದ್ದರು, ಖಾವಿ ಕಳಚಿ ಟೀ ಶರ್ಟ್ ಪ್ಯಾಂಟ್ ಧರಿಸಿ ಮೈಸೂರಿನಿಂದ ಹಾಲಶ್ರೀ ಎಸ್ಕೇಪ್ ರೂಟ್ ಶುರುವಾಗಿತ್ತು, ಅವರು ಏಕಾಂಗಿಯಾಗಿ ಟ್ರಾವೆಲ್ ಮಾಡುತ್ತಿದ್ದರು. ಹೈದ್ರಾಬಾದ್, ಪುಣೆ, ಗಂಜಂ, ಕಟಕ್ ಕಡೆಗೆ ಪ್ರಯಾಣಿಸಿದ್ದರು. ಒಡಿಶಾದ ಭುವನೇಶ್ವರದಿಂದ ಬಿಹಾರದ ಬುದ್ಧ ಗಯಾಗೆ ತೆರಳಬೇಕಿತ್ತು. ಸಿಸಿಬಿ ಕಟಕ್ ಬಳಿ ರೈಲಲ್ಲಿ ಹೋಗ್ತಿದ್ದಾಗಲೇ ಲಾಕ್ ಮಾಡಿದ್ದಾರೆ. ಸಿಸಿಬಿ ಪೊಲೀಸರಿಗೆ ಒಡಿಶಾ ಪೊಲೀಸರು, ರೈಲ್ವೆ ಪೊಲೀಸರ ಸಾಥ್ ನೀಡಿದರು. ಸಿಸಿಬಿ ಟೀಂ ಬೆಳಗ್ಗೆ 10.15 ರ ಸುಮಾರಿಗೆ ಹಾಲಶ್ರೀ ಲಾಕ್ ಮಾಡಿದ್ದಾರೆ. ಕಟಕ್ ನಲ್ಲಿ ಬಂಧನ ಪ್ರಕ್ರಿಯೆ ಮುಗಿಸಿ ರಾತ್ರಿ ಕರೆತಂದಿದ್ದಾರೆ.
ಇದನ್ನೂ ಓದಿ; ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು!; ಈ ಬಾರಿ ವಂಚನೆ ಆರೋಪ ಮಾಡಿದ್ದು ಯಾರು?
ಸಾಕ್ಷ್ಯ ಸಿಗದಂತೆ ಚಾಲಾಕಿತನ ಮೆರೆದಿದ್ದ ಹಾಲಶ್ರೀ:
ಸ್ವಾಮೀಜಿ 8 ದಿನದಿಂದ ಟೆಕ್ನಿಕಲ್ ಎವಿಡೆನ್ಸ್ ಸಿಗದಂತೆ ಚಾಲಾಕಿತನ ಮೆರೆದಿದ್ದರು, ಹೈದ್ರಾಬಾದ್ ಕಡೆಯಿಂದ ಉತ್ತರ ಭಾರತದ ಕಡೆ ಹೋಗಿರೋ ಮಾಹಿತಿ ಸಿಕ್ಕಿತ್ತು. ಹಾಲಶ್ರೀಗೆ ಮಠ, ದೇವಸ್ಥಾನಗಳ ಬಗ್ಗೆ ಚೆನ್ನಾಗಿ ಮಾಹಿತಿ ಇದ್ದುದರಿಂದ ಆಶ್ರಯ ಪಡೆಯಲು ಮಠ, ದೇವಸ್ಥಾನಗಳಿಗೇ ಹೋಗಿರುವ ಅನುಮಾನ ಮೂಡಿಬಂದಿತ್ತು. ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿ ಪ್ರಮುಖ ದೇವಸ್ಥಾನ, ಮಠಗಳಿಗೆ ತೆರಳಿ ಪರಿಶೀಲನೆ ಮಾಡಿದ್ದರು ಅದರಂತೆ ಟೀಂ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ ಬಂದಿತ್ತು.

ಇದನ್ನೂ ಓದಿ; ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?, ದೊಡ್ಡವರ ಹೆಸರು ಹೊರಬರುತ್ತಾ?
ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ:
ಹಾಲಶ್ರೀ ಪುರಿ ದೇಗುಲದ ಬಳಿಯೇ ಇರೋದು ಕನ್ಫರ್ಮ್ ಆಗಿ ಸಿಸಿಬಿ ಟೀಂ, ಗಣೇಶ ಹಬ್ಬದ ವಿಶೇಷ ಪೂಜೆಗೆಂದು ಶೃಂಗೇರಿಯಿಂದ ಬಂದಿದ್ದೇವೆ ಎಂದಿದ್ದರು. ಈ ಮಾತನ್ನು ಕೇಳಿಸಿಕೊಂಡ ಹಾಲಶ್ರೀ ಅಲ್ಲಿಂದ ಕಾಲ್ಕಿತ್ತಿದ್ದರು. ಭುವನೇಶ್ವರದಿಂದ ಬಿಹಾರದ ಬುದ್ಧಗಯಾಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ರೈಲು ನಿಲ್ದಾಣಕ್ಕೆ ಪೊಲೀಸರು ಬರುವ ಅನುಮಾನ ಹಾಲಶ್ರೀಗೆ ಬಂದಿತ್ತು. ಅದಕ್ಕಾಗಿ ಹಾಲಶ್ರೀ ರೈಲು ಬಿಟ್ಟು 25 ಕಿ.ಮೀ.ದೂರದ ಕಟಕ್ ವರೆಗೆ ಬಸ್ ನಲ್ಲಿ ಹೋಗಿದ್ದರು, ಅಷ್ಟರಲ್ಲಾಗಲೇ ಹಾಲಶ್ರೀ ಟಿಕೆಟ್ ಡೀಟೇಲ್ಸ್ ಒಡಿಶಾ ಪೊಲೀಸರ ಕೈಸೇರಿತ್ತು. ಕಟಕ್ ರೈಲು ನಿಲ್ದಾಣದಲ್ಲಿ ಸಿಸಿಬಿ ಟೀಂ ಕೂಡ ಕಾದು ಕುಳಿತಿತ್ತು, ಎಕ್ಸ್ ಪ್ರೆಸ್ ಹತ್ತಿದ್ದ ಹಾಲಶ್ರೀಯನ್ನು ಮೂವಿಂಗ್ ಟ್ರೈನ್ ನಲ್ಲಿ ರೌಂಡಪ್ ಮಾಡಿದ್ದರು.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-19.09.2023
ಹಾಲಶ್ರೀ ಅರೆಸ್ಟ್ ಆಗಲಿ ಎಲ್ಲಾ ಬಯಲಾಗುತ್ತೆ ಎಂದಿದ್ದ ಚೈತ್ರಾ:
ಚೈತ್ರಾ (chaithra kundapura:-) ಹೇಳಿಕೆಯಂತೆ ಸ್ವಾಮೀಜಿ ಅರೆಸ್ಟ್ ಆಗಿದ್ದಾಯ್ತು. ಈಗ ಸ್ವಾಮೀಜಿ ವಿಚಾರಣೆಯಲ್ಲಿ ಡೀಲ್ ಸತ್ಯ ಬಯಲಾಗಲಿದೆ. 5 ಕೋಟಿ ಯಾರ್ಯಾರಿಗೆ ಹೋಯ್ತು.. ಯಾವ ವಿಚಾರಕ್ಕೆ ಡೀಲ್ ಆಯ್ತು, ಇಂದಿರಾ ಕ್ಯಾಂಟೀನ್ ಬಿಲ್ ರಹಸ್ಯವೋ.. ಇಲ್ಲಾ ಬೈಂದೂರು ಬಿಜೆಪಿ ಟಿಕೆಟ್ ರಹಸ್ಯವೋ.. ಯಾಕೆ ಹಣ ಪಡೆದಿದ್ರು.. ಸ್ವಾಮೀಜಿಯೇ ಹೇಳ್ಬೇಕು. ಈ ಎಲ್ಲಾ ವಿಚಾರದ ಬಗ್ಗೆ ಸಿಸಿಬಿ ಚೈತ್ರಾ -ಸ್ವಾಮೀಜಿ ಮುಖಾಮುಖಿ ಕೂರಿಸಿ ವಿಚಾರಣೆ ಮಾಡಲಿದೆ.
ಪ್ರಮುಖ ಸುದ್ದಿಗಳನ್ನು ಓದಿ
- ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗಣೇಶ ಚತುರ್ಥಿ ಪೂಜೆ ಮಾಡಲು ಶ್ರೇಷ್ಠ ಸಮಯ ಯಾವುದು ಗೊತ್ತಾ?; ಶುಭ ಮುಹೂರ್ತದ ವಿವರ, ಆಚರಣೆ ಇಲ್ಲಿದೆ
- ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು
- hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
- ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-16.09.2023
- ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?
- 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು
- 14 ನ್ಯೂಸ್ ಆ್ಯಂಕರ್ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?
- ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?
- ಪೊಲೀಸರ ಮಿಂಚಿನ ಕಾರ್ಯಾಚರಣೆ; ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ
- ಚೈತ್ರಾ ಕುಂದಾಪುರ ಬಂಧನವಾಗುತ್ತಿದಂತೆ 3 ನೇ ಆರೋಪಿ ನಾಪತ್ತೆ
- ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚಿಸಿದ ಚೈತ್ರಾ ಗ್ಯಾಂಗ್ ನ ಮೋಸದ ರೋಚಕ ಸ್ಟೋರಿ ಸಿನಿಮಾ ಸ್ಟೋರಿಯನ್ನೂ ಮೀರಿಸುತ್ತದೆ.
- ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
- ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
- ಜಿ20 ಶೃಂಗಸಭೆ, ಏನಿದು g20?; ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ?
- ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ; ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು
- ಗಣೇಶನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?; ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಈ ರೀತಿ ಮಾಡಿ ನೋಡಿ
- ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್; ಈ ಐಫೋನ್‌ಗೆ ಈಗ ಸಖತ್ ಡಿಸ್ಕೌಂಟ್..!; ಆಫರ್ ತಿಳಿದ್ರೆ ವಾವ್ ಅಂತೀರಾ!?
intresting story ಓದಲು ಇಲ್ಲಿ ಕ್ಲಿಕ್ ಮಾಡಿ