Bharat Rice: ಭಾರತ್ ಬ್ರ‍್ಯಾಂಡ್ ಅಕ್ಕಿ ಆರಂಭ

Bharat Rice: ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಮಾರಾಟ ಬೆಲೆಯಲ್ಲಿ ಶೇ.15 ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನಿರಾಳತೆ ನೀಡಲು ಕೇಂದ್ರ ಸರ್ಕಾರ ಮಂಗಳವಾರ ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ ದರದಲ್ಲಿ ಭಾರತ್ ಅಕ್ಕಿಯನ್ನು (Bharat Rice:)  ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ; sc, st ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

5 ಕೆಜಿ ಮತ್ತು 10 ಕೆಜಿ ಪ್ಯಾಕ್ ಗಳಲ್ಲಿ ಲಭ್ಯವಿರುವ ಸಬ್ಸಿಡಿ ಅಕ್ಕಿಯನ್ನು ಬಿಡುಗಡೆ ಮಾಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಸಾಮಾನ್ಯ ಜನರಿಗೆ ದೈನಂದಿನ ಆಹಾರ ಪದಾರ್ಥಗಳು ಕೈಗೆಟುಕುವ ದರದಲ್ಲಿ ಲಭ್ಯ ವಾಗುವಂತೆ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಸಗಟು ಮಧ್ಯಸ್ಥಿಕೆ (ಬೆಲೆಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು) ಅನೇಕ ಜನರಿಗೆ ಪ್ರಯೋಜನವಾಗದಿದ್ದಾಗ, ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್) ಅಡಿಯಲ್ಲಿ ಈ ಯೋಜನೆ ಪರಿಚಯಿಸಲಾಯಿತು ಎಂದು ಅವರು ತಿಳಿಸಿದರು.

ಇದನ್ನೂ ಓದಿ; ಅನರ್ಹರ ಜಮೀನು ವಶಕ್ಕೆ ಕಂದಾಯ ಇಲಾಖೆ ಸಜ್ಜು; ಒಂದು ತಿಂಗಳೊಳಗೆ ಅರ್ಜಿ ತಿರಸ್ಕೃತ

ಪ್ರತಿ ಕೆಜಿ ಭಾರತ್ ರೈಸ್ ನಲ್ಲಿ ಶೇ.5 ರಷ್ಟು ಒಡೆದ ಅಕ್ಕಿ ಇರುತ್ತದೆ. ಸರ್ಕಾರದ ಪ್ರಯತ್ನಗಳು ಟೊಮ್ಯಾಟೊ ಮತ್ತು ಈರುಳ್ಳಿ ಬೆಲೆಗಳನ್ನು ಇಳಿಸಲು ಸಹಾಯ ಮಾಡಿದೆ. ಭಾರತ್ ಅಟ್ಟಾ ಮಾರಾಟವನ್ನು ಪ್ರಾರಂಭಿಸಿದಾಗಿನಿಂದ ಕಳೆದ ಆರು ತಿಂಗಳಲ್ಲಿ ಗೋಧಿಗೆ ಬೇಡಿಕೆ ಕಡಿಮೆಯಾಗಿದೆ. ಅದೇ ಪರಿಣಾಮವನ್ನು ಅಕ್ಕಿಯಲ್ಲಿ ನೋಡಲಿದ್ದೇವೆ. ಕೈಗೆಟುಕುವ ದರದಲ್ಲಿ ದೈನಂದಿನ ಅಗತ್ಯಗಳನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿದೆ ಎಂದು ವಿವರಿಸಿದರು.

Bharat Rice: ಭಾರತ್ ಬ್ರ‍್ಯಾಂಡ್ ಅಕ್ಕಿ ಆರಂಭ
Bharat Rice: ಭಾರತ್ ಬ್ರ‍್ಯಾಂಡ್ ಅಕ್ಕಿ ಆರಂಭ

ಇದನ್ನೂ ಓದಿ; ಎಲ್ಲಾ ಅಪರಾಧ ಕೃತ್ಯಗಳಿಗೂ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದು ಸರಿಯಲ್ಲ; ಕಾಯ್ದೆಯ ದುರ್ಬಳಕೆ ತಡೆಗೆ ಹೈಕೋರ್ಟ್ ಸೂಚನೆ

ಚಿಲ್ಲರೆ ವ್ಯಾಪಾರಿಗಳಿಂದ ಭಾರತ್ ಬ್ರ‍್ಯಾಂಡ್ (Bharat Rice:) ಅಕ್ಕಿ ಮಾರಾಟ:
ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿ ಇರುವ ಮಹಾಮಂಡಳದ ಕಚೇರಿಯಲ್ಲಿಯೂ ಒಂದು ಕೌಂಟರ್ ತೆರೆಯಲಾಗಿದ್ದು, ಗ್ರಾಹಕರು ಇಲ್ಲಿಗೆ ನೇರವಾಗಿ ಬಂದು ಅಕ್ಕಿ ಖರೀದಿಸಬಹುದಾಗಿದೆ. ಜಿಲ್ಲೆಗಳಲ್ಲಿ ಸ್ಥಳೀಯ ಚಿಲ್ಲರೆ ಮಾರಾಟಗಾರರ ಮೂಲಕವೂ ಭಾರತ್ ಬ್ರ‍್ಯಾಂಡ್ ಅಕ್ಕಿ ಮಾರಾಟಕ್ಕೆ ನಿರ್ಧರಿಸಲಾಗಿದೆ. ಸದ್ಯ ಭಾರತೀಯ ಆಹಾರ ನಿಗಮದ ಮೂಲಕ ಅಕ್ಕಿಯನ್ನು ಎತ್ತುವಳಿ ಮಾಡಿದ ಬಳಿಕ ಸಂಸ್ಕರಿಸಲಾಗುತ್ತದೆ. ಬಳಿಕ ಪ್ಯಾಕೆಟ್ ಗಳನ್ನು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.

1.25 ಲಕ್ಷ ಟನ್ ಅಕ್ಕಿ ಹಂಚಿಕೆ:
ಇನ್ನು ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ನಾಫೆಡ್‌ಗೆ 1.25 ಲಕ್ಷ ಟನ್ ಅಕ್ಕಿಯನ್ನು ಹಂಚಿಕೆ ಮಾಡಿದೆ. ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಲಿದೆ ಎಂದರು.

ಇದನ್ನೂ ಓದಿ; ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗ; ನೇರ ಸಂದರ್ಶನ ಮೂಲಕ ಆಯ್ಕೆ

ಇಕಾಮರ್ಸ್ ವೇದಿಕೆಯಲ್ಲೂ ಲಭ್ಯ:
ಚಿಲ್ಲರೆ ವ್ಯಾಪಾರ ವಲಯದ ಇಕಾರ್ಮಸ್ ವೇದಿಕೆಗಳಲ್ಲೂ ಭಾರತ್ ಬ್ರ‍್ಯಾಂಡ್ ಅಕ್ಕಿ ದೊರೆಯಲಿದೆ. ಮೊದಲ ಹಂತದಲ್ಲಿ ರಿಲಯನ್ಸ್ ರಿಟೇಲ್, ಬ್ಲಿಂಕಿಟ್ ಹಾಗೂ ಬಿಗ್ ಬಾಸ್ಕೆಟ್ ಜೊತೆಗೆ ನಾಫೆಡ್ ಒಪ್ಪಂದ ಮಾಡಿಕೊಂಡಿದೆ. ಇನ್ನೆರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಇರುವ ರಿಲಯನ್ಸ್ ರಿಟೇಲ್ ಮಳಿಗೆಗಳಲ್ಲಿ ದೊರೆಯಲಿದೆ. ಅಲ್ಲದೇ, ಫ್ಲಿಪ್ ಕಾರ್ಟ್ ಮತ್ತು ಸ್ಟಾರ್ ಬಜಾರ್ ನಲ್ಲಿಯೂ ಅಕ್ಕಿ ಮಾರಾಟಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಒಪ್ಪಂದ ಕುರಿತು ಚರ್ಚೆ ನಡೆಯುತ್ತಿದೆ ಎಂದು ಜ್ಯೋತಿ ಪಾಟೀಲ್ ತಿಳಿಸಿದರು.

ಪ್ರಮುಖ ಸುದ್ದಿಗಳನ್ನು ಓದಿ

  1. 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಇಲ್ಲಿದೆ ಪಟ್ಟಿ
  2. ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ ಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ
  3. ವಿದ್ಯುತ್ ಬಿಲ್ ಹೊರೆ ಇಳಿಸಲು ಕೇಂದ್ರದ ಹೊಸ ಯೋಜನೆ ಜಾರಿ; 1 ಕೋಟಿ ಮನೆಗಳ ಮೇಲೆ ಬರಲಿದೆ ಸೋಲಾರ್‌ ಫಲಕಗಳು;ಯಾರಿಗೆ ಸಿಗಲಿದೆ ಪ್ರಯೋಜನ, ಯಾವ ದಾಖಲೆಗಳು ಬೇಕು?
  4. ದಕ್ಷ ಪೊಲೀಸ್ ಅಧಿಕಾರಿ ಸುಧೀರ್ ಹೆಗ್ಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ
  5. ಲೋಕಸಭೆ ಚುನಾವಣೆ: ಕ್ಷೇತ್ರ ಬದಲಿಸುವ ಪ್ರಶ್ನೆಯೇ ಇಲ್ಲ- ಶೋಭಾ ಕರಂದ್ಲಾಜೆ
  6. ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ; 10th ಪಾಸಾದವರಿಗೆ ಅರ್ಜಿ ಆಹ್ವಾನ
  7. hsrp ನಂಬರ್ ಪ್ಲೇಟ್; ನೋಂದಣಿ ಹೇಗೆ? ವೆಬ್‌ ಸೈಟ್ ಯಾವುದು?; ರಿಜಿಸ್ಟ್ರೇಷನ್ ಪ್ರಕ್ರಿಯೆ ವೇಳೆ ಹುಷಾರು! ಯಾಮಾರಬೇಡಿ!
  8. ಆಡಳಿತ ತರಬೇತಿ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಆಹ್ವಾನ; ಎಸ್‌.ಎಸ್‌.ಎಲ್‌.ಸಿ, ಪಿಯುಸಿ ಪಾಸಾದವರಿಗೆ ಜಾಬ್
  9. ಬಿಯರ್ ಪ್ರಿಯರಿಗೆ ಬಿಗ್ ಶಾಕ್; ಮತ್ತೆ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಸಿದ್ಧತೆ
  10. ರೈತರ ಕೃಷಿ ಸಾಲದ ಬಡ್ಡಿ ಮನ್ನಾ; ಯಾವ ರೈತರ, ಯಾವ ಸಾಲದ ಬಡ್ಡಿ ಮನ್ನಾ?; ಯಾವ ದಿನಾಂಕದಿಂದ ಈ ಆದೇಶ ಒಳಪಡುತ್ತದೆ?
  11. ರೈತರೇ ಗಮನಿಸಿ; pm kisan ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ
  12. ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಹೇಗೆ?
  13. ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ
  14.  ರೈತರು ಅತಿ ಕಡಿಮೆ ಬೆಲೆಗೆ ಮಣ್ಣು ಪರೀಕ್ಷೆ ಹೇಗೆ ಮಾಡಿಸಬಹುದು?; ಮಣ್ಣನ್ನು ಹೇಗೆ ತೆಗೆಯಬೇಕು? ಎಷ್ಟು ಶುಲ್ಕ? ಸಂಪೂರ್ಣ ವಿವರವನ್ನು ಓದಿ
  15. ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
  16. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ
  17.  ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ pm kisan ಮೊತ್ತ ಏರಿಕೆ
  18. ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
  19. ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ
  20. ರಾಜ್ಯದ ರೈತರಿಗೆ ಗುಡ್‌ ನ್ಯೂಸ್‌: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
  21.  ಪಡಿತರ ಚೀಟಿದಾರರೇ ಗಮನಿಸಿ; ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ, ಏನದು?
  22. ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
  23. ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇