APK Fraud: ಪಿಎಂ ಕಿಸಾನ್ ಹೆಸರಿನಲ್ಲಿ ಮೆಸೇಜ್ ಬರ‍್ತಾ ಇದೀಯಾ?

(APK Fraud) ನೀವೇನೋ ನಿಮ್ಮ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಹಣ ಸುರಕ್ಷಿತವಾಗಿದೆ ಎಂದು ಭಾವಿಸಿ, ನೆಮ್ಮದಿಯಿಂದ ನಿದ್ರಿಸುತ್ತಿರಬಹುದು. ಆದರೆ, ನಿಮ್ಮ ಬ್ಯಾಂಕಿನ ಖಾತೆಯಲ್ಲಿರುವ ನಿಮ್ಮ ಹಣವನ್ನು ನಿಮಗೆ ತಿಳಿಯದ ಹಾಗೆ ದೋಚುವ ಮೋಸಗಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದಾರೆ ಎಚ್ಚರಿಕೆ!. ಯಾವೆಲ್ಲಾ ರೀತಿಯಲ್ಲಿ ಹಣ ದೋಚಬಹುದು? ಅದನ್ನು ನೀವು ಹೇಗೆ ತಡೆಗಟ್ಟಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಮದ್ಯ ದರದಲ್ಲಿ ಭಾರೀ ಇಳಿಕೆ!;ಯಾವ ಬ್ರ್ಯಾಂಡ್ ಗೆ ಎಷ್ಟು ಕಡಿಮೆ..? ಸಂಪೂರ್ಣ ಮಾಹಿತಿ


1. APK ಫೈಲ್ ಗಳ ಮೂಲಕ:
ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ನಿಮ್ಮ ಬ್ಯಾಂಕ್ ಕಡೆಯಿಂದ ನಿಮಗೆ ಜಾಗೃತಿಯ ಕುರಿತಾದ ಮೆಸೇಜ್ ಬರುತ್ತಿರುತ್ತದವೆ. ಅದಕ್ಕೆ ಕಾರಣ ಎಲ್ಲೆಡೆಗಳಲ್ಲಿ ಹೆಚ್ಚುತ್ತಿರುವ ಬ್ಯಾಂಕಿಂಗ್ ಮೋಸ. ಉದಾಹರಣೆಗೆ SBI ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಕಾರ, ಕೆಲವು ಮೋಸಗಾರರು APK ಗಳನ್ನು ಅಥವಾ APKಯನ್ನು ಡೌನ್ಲೋಡ್ ಮಾಡುವ ಲಿಂಕ್ ಗಳನ್ನು ನಿಮಗೆ ವಾಟ್ಸಪ್ ನ ಮುಖಾಂತರ ಇಲ್ಲವೆ SMS ನ ಮುಖಾಂತರ ಕಳುಹಿಸುತ್ತಾರೆ. ಆ ಸಂದೇಶದಲ್ಲಿ SBIನ ರಿವಾರ್ಡ್ ಪಾಯಿಂಟ್ಸ್ ಪಡೆಯಲು ಈ ಆ್ಯಪ್ ಡೌನ್ಲೋಡ್ ಮಾಡಿ ಎಂಬುದಾಗಿ ಬರೆದು ಕೆಲವು ಲಿಂಕ್ ಇಲ್ಲವೇ APK ಕಳುಹಿಸಿರುತ್ತಾರೆ. ಆ ಎಪಿಕೆಗಳನ್ನು ನೀವು ಡೌನ್ಲೋಡ್ ಮಾಡಿಕೊಂಡರೆ ನಿಮ್ಮ ಹಣವನ್ನು ಅವರು ದೋಚಿಕೊಳ್ಳುವ ಸಾಧ್ಯತೆ ಇರುತ್ತದೆ.

ನೀವು ಹ್ಯಾಕರ್ಸ್ ಗಳು ಕಳುಹಿಸಿದ APK ಡೌನ್ಲೋಡ್ ಮಾಡಿಕೊಂಡರೆ ಅದು ನಿಮ್ಮ ಮೊಬೈಲ್ ಕುರಿತಾದ ಹಲವು ಸೆಟ್ಟಿಂಗ್ ಗಳ ಕುರಿತಾದ ಹಲವಾರು ಅನುಮತಿಗಳನ್ನು ಕೇಳುತ್ತದೆ. ಉದಾಹರಣೆಗೆ ನಿಮ್ಮ ಮೊಬೈಲ್ ಕ್ಯಾಮೆರಾ, ಲೊಕೇಶನ್, ಸಂಪರ್ಕ, ಹಾಗೂ ನಿಮಗೆ ಬರುವ ಸಂದೇಶಗಳನ್ನು ಓದುವ ಅನುಮತಿಯನ್ನು ಕೂಡ ಕೇಳುತ್ತದೆ. ನೀವು ತಿಳಿಯದೆ ಅದೆಲ್ಲವೂ ಅನುಮತಿ ನೀಡಿದರೆ ನಿಮ್ಮ ಮೊಬೈಲ್ ಅವರ ಕೈವಶವಾಗುತ್ತದೆ. ನಿಮಗೆ ತಿಳಿಯದ ಹಾಗೆ ನಿಮ್ಮ ಮೊಬೈಲ್ ಮೂಲಕ ಅವರು ಸಂದೇಶಗಳನ್ನು ರವಾನಿಸಿಕೊಳ್ಳಬಹುದು ಅಥವಾ ನಿಮಗೆ ಬರುವ ಸಂದೇಶಗಳನ್ನು ಓದಬಹುದು ಜಾಗೃತವಾಗಿರಿ!.

SBI ತಾನೇ ಸ್ವತಹ ಹೇಳುವ ಪ್ರಕಾರ, ಬ್ಯಾಂಕ್ ನಿಮಗೆ ಯಾವುದೇ ರೀತಿಯ ಲಿಂಕ್ ಅಥವಾ APKಗಳನ್ನು ಕಳಿಸುವುದಿಲ್ಲ, ಆದರೂ ನಿಮ್ಮಲ್ಲಿ ಯಾವುದಾದರು ಅನುಮಾನಗಳಿದ್ದರೆ ಹತ್ತಿರದ ಬ್ಯಾಂಕಿಗೆ ಸ್ವತಹ ಭೇಟಿ ನೀಡಿ ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಿ.


ಇದನ್ನೂ ಓದಿ: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ; ಹೆಸರು ಸೇರ್ಪಡೆಯ ಪಟ್ಟಿ ಬಿಡುಗಡೆ ಮಾಡಿದ ಆಹಾರ ಇಲಾಖೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಹೀಗೆ ಚೆಕ್ ಮಾಡಿ


ಪಿಎಂ ಕಿಸಾನ್ (PM KISAN) ಹೆಸರಿನಲ್ಲಿ ಎಪಿಕೆ ಫೈಲ್ (PM KISAN APK FRAUD)
ಬ್ಯಾಂಕ್ ಸೇರಿನಲ್ಲಿ ಈ ಎಪಿಕೆ ಫೈಲ್ ಅನ್ನು ಕಳುಹಿಸಿ ಹಣ ಎಗರಿಸುವುದು ಒಂದು ಕಡೆ ಆದರೆ, ಇತ್ತ ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM KISAN SAMMAN NIDHI YOJANA) ಹೆಸರಿನಲ್ಲಿ ಕೂಡ ಈ ಎಪಿಕೆ ಫೈಲ್ ಅನ್ನು ಕಳುಹಿಸುತ್ತಿದ್ದಾರೆ.

APK Fraud: ಪಿಎಂ ಕಿಸಾನ್ ಹೆಸರಿನಲ್ಲಿ ಮೆಸೇಜ್ ಬರ‍್ತಾ ಇದೀಯಾ?
APK Fraud: ಪಿಎಂ ಕಿಸಾನ್ ಹೆಸರಿನಲ್ಲಿ ಮೆಸೇಜ್ ಬರ‍್ತಾ ಇದೀಯಾ?

ಹೌದು, ಇತ್ತೀಚಿನ ದಿನಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತಿನ ಹಣ ರೈತರ ಖಾತೆಗೆ ಜಮಾ ಮಾಡಲಾಗಿತ್ತು ಆದರೆ, ಇದರ ಖುಷಿಯಲ್ಲಿ ಇದ್ದ ರೈತರಿಗೆ ಈ ಎಪಿಕೆ ಫೈಲ್ ಮೆಸೇಜ್ ಯಿಂದ ಶಾಕ್ ಆಗಿದೆ. ಹಲವು ಜನರ ಮೊಬೈಲ್ ಗೆ ಈ ಪಿಎಂ ಕಿಸಾನ್ ಹೆಸರಿನಲ್ಲಿ ಮೆಸೇಜ್ ಬರುತ್ತಿದ್ದು, ಈ ಲಿಂಕ್ ಮಾಡಿ ಡೌನ್ಲೋಡ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಮಂಗಮಾಯವಾಗುತ್ತದೆ. ಇದರಿಂದಾಗಿ ಇಂತಹ ಮೇಸೆಜ್ ಗಳು ನಿಮ್ಮ ಮೊಬೈಲ್ ಗೆ ಬಂದಿದ್ದರೆ ಅಂತಹ ಮೇಸೆಜ್ ಮೇಲೆ ಗಮನ ಕೊಡದೆ ಇರುವುದು ಒಳಿತು.


ಇದನ್ನೂ ಓದಿ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್‌ ನ್ಯೂಸ್‌; ಗೌರವಧನ ಹೆಚ್ಚಳ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ


2. ಹಾನಿಕಾರಕ ಲಿಂಕ್:
ಇತ್ತೀಚಿಗೆ ICICI ಬ್ಯಾಂಕ್ ನ ಗ್ರಾಹಕರು ಬ್ಯಾಂಕ್ ನ ಕಡೆಯಿಂದ ಹಲವಾರು ಜಾಗೃತಿ ಸಂದೇಶಗಳನ್ನು ಸ್ವೀಕರಿಸಿರಬಹುದೆ. ಅದಕ್ಕೆ ಕಾರಣವೇನೆಂದರೆ ಹಲವಾರು ಜನರು ತಮ್ಮ ಇ-ಮೇಲ್ ವಾಟ್ಸಪ್ ಅಥವಾ ಇನ್ನೂ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಹಾನಿಕಾರಕ ಲಿಂಕ್ ಗಳನ್ನು ಪಡೆದಿದ್ದಾರೆ, ಅದು ಯಾವುದೇ ರೂಪದಲ್ಲಿ ಅವರಿಗೆ ಬಂದಿರಬಹುದು ಉದಾಹರಣೆಗೆ- ಆನ್ಲೈನ್ ವೆಬ್ಸೈಟ್ಗಳಲ್ಲಿ ಕಡಿಮೆ ಬೆಲೆಗೆ ಬ್ರಾಂಡೆಡ್ ವಸ್ತುಗಳು ಸಿಗುತ್ತಿವೆ ಅದನ್ನು ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ ಎಂಬುದಾಗಿ ಅಥವಾ ಇನ್ನು ಯಾವುದೋ ವಸ್ತುವಿನ ಅಥವಾ ಹಣದ ಆಸೆಯನ್ನು ತೋರಿಸುವ ಮೂಲಕ ಕೆಲವು ಹಾನಿಕಾರಕ ಲಿಂಕ್ ಗಳನ್ನು ಕಳುಹಿಸುತ್ತಾರೆ. ಅದನ್ನು ನಂಬಿ ನೀವು ಆ ಲಿಂಕ್ ಮುಟ್ಟಿದರೆ ಅದು ನಿಮ್ಮನ್ನು ಯಾವುದೋ ತಿಳಿಯದ ವೆಬ್ಸೈಟ್ ಗೆ ಕರೆದೊಯ್ಯಬಹುದು ಈ ಮೂಲಕ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು.


ಇದನ್ನೂ ಓದಿ: ಯಜಮಾನಿಯರ ಗಮನಕ್ಕೆ; ಇನ್ನೂ ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ತಪ್ಪದೇ ಈ ಕೆಲಸ ಮಾಡಿ


3. OTP:
ಇತ್ತೀಚಿನ ದಿನಗಳಲ್ಲಿ ಹಲವಾರು ಆಕ್ಸಿಸ್ ಬ್ಯಾಂಕ್ ನ ಗ್ರಾಹಕರು ತಮ್ಮ ಖಾತೆಯಿಂದ ಇದ್ದಕ್ಕಿದ್ದಂತೆ ಹಣ ಡ್ರಾ ಆಗಿದೆ. ಆದರೆ ಇದನ್ನು ನಾವು ಮಾಡಿಲ್ಲ ಎಂಬುದಾಗಿ ದೂರುಗಳನ್ನು ದಾಖಲಿಸಿದ್ದರು. ಇದರ ಕುರಿತಾಗಿ ಆಕ್ಸಿಸ್ ಬ್ಯಾಂಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. – ಹೂಡಿಕೆ ಅಥವಾ ಬ್ಯಾಂಕ್ ಕಾರ್ಯ ಆಧಾರಿತ ವಂಚನೆಯ ಕುರಿತಾಗಿ ಜಾಗೃತರಾಗಿರಿ ಬ್ಯಾಂಕ್ ನಿಮಗೆ ಯಾವುದೇ ರೀತಿಯ OTP ಗಳನ್ನು ಕಳುಹಿಸುವುದಿಲ್ಲ ಅಥವಾ ಇನ್ನು ಯಾವುದೇ ರೀತಿಯ ಸೂಕ್ಷ್ಮ ಮಾಹಿತಿಗಳನ್ನು ನಿಮಗೆ ಕರೆ ಮಾಡಿ ಇಲ್ಲವೇ SMS ಗಳ ಮೂಲಕ ಎಂದಿಗೂ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ 50,000 ಹುದ್ದೆ;  SSLC ಪಾಸ್ ಆದವರು ಅರ್ಜಿ ಸಲ್ಲಿಸಿ; 10,000 ದಿಂದ ಸಂಬಳ


4. ಸುಳ್ಳು SMS ಗಳು:(APK Fraud) 
ಇನ್ನು ಕೆಲವು ಜನರು ಬ್ಯಾಂಕ್‍ ನ ಹೆಸರನ್ನು ಹೇಳಿಕೊಂಡು ನಿಮಗೆ ಫೋನ್ ಕರೆ ಮಾಡಿ ಇಲ್ಲವೇ SMS ಮಾಡುವ ಮೂಲಕ ನಿಮ್ಮ ಮಾಹಿತಿಗಳನ್ನು ಕೇಳಬಹುದು ಅಥವಾ ಇನ್ಸೂರೆನ್ಸ್ ಇಲ್ಲದೆ ಯಾವುದೋ ವಸ್ತುಗಳನ್ನು ನಿಮಗೆ ಮಾರಲು ಪ್ರಯತ್ನಿಸಬಹುದು. ಇದರ ಕುರಿತಾಗಿಯೂ ಕೂಡ ಕೆಲವು ಬ್ಯಾಂಕ್ಗಳು ಸ್ಪಷ್ಟಪಡಿಸಿದೆ. ಬ್ಯಾಂಕ್ ನಿಮಗೆ ಯಾವುದೇ ರೀತಿಯ ವಸ್ತುಗಳನ್ನು ಮಾಡುವುದು ಅಥವಾ ಇನ್ಸೂರೆನ್ಸ್ ಮಾಡಿಸಿಕೊಳ್ಳಲು ಹೇಳುವುದಕ್ಕೆ ನಿಮಗೆ ಕರೆ ಮಾಡುವುದಿಲ್ಲ.

ಹೀಗೆ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ಯಾವುದೇ ಜಾಲಗಳಿಗೆ ಸಿಲುಕದಂತೆ ನಿಮ್ಮ ಹಣ ಹಾಗೂ ನಿಮ್ಮ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಇಂತಹ ಕೇಸ್ ಗಳು ಹೆಚ್ಚುತ್ತಿದೆ. ಹಾಗಾಗಿ ಜಾಗೃತರಾಗಿರಿ, ನಿಮ್ಮಲ್ಲಿ ಯಾವುದೇ ಅನುಮಾನಗಳು ಹುಟ್ಟಿಕೊಂಡರೂ ಕೂಡ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಅದನ್ನು ಖಾತ್ರಿಪಡಿಸಿಕೊಳ್ಳಿ ಬದಲಾಗಿ ಇಂತಹ ಅನಾಮದೇಯ ಕರೆಗಳಿಗೆ ನಿಮ್ಮ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ.


ಇದನ್ನೂ ಓದಿ: SSLC, PUC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ರೀತಿ ಅರ್ಜಿ ಸಲ್ಲಿಸಿ 40 ಸಾವಿರ ಸ್ಕಾಲರ್ಶಿಪ್ ಪಡೆಯಿರಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    7. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ
    8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ
    9. ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
    10. ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    11. ಆರು ವರ್ಷದ ಬಳಿಕ ಕಾಳುಮೆಣಸು ಬೆಲೆಯಲ್ಲಿ ಭಾರೀ ಏರಿಕೆ; 2018 ರ ದಾಖಲೆ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು