(liquor price) ಕರ್ನಾಟಕದಲ್ಲಿ ಮದ್ಯದ ದರ ಇಳಿಕೆಯಾಗಲಿದ್ದು, ಇದರಿಂದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಇದೇ ಜುಲೈ 1 ರಿಂದ ರಾಜ್ಯದಲ್ಲಿ ಮದ್ಯದ ಬ್ರಾಂಡ್ ಗಳ ಬೆಲೆಗಳಲ್ಲಿ ಗಣನೀಯ ಇಳಿಕೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಇದನ್ನೂ ಓದಿ: SSLC, PUC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಈ ರೀತಿ ಅರ್ಜಿ ಸಲ್ಲಿಸಿ 40 ಸಾವಿರ ಸ್ಕಾಲರ್ಶಿಪ್ ಪಡೆಯಿರಿ
ಮುಂದಿನ ತಿಂಗಳು ಜಾರಿಗೆ ಬರಲಿರುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯು ಹೈ-ಎಂಡ್ ಮದ್ಯದ ವಿಧಗಳ ಮೇಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದೆ. ಇದು ಮದ್ಯದ ದರ ಇಳಿಕೆಗೆ ಕಾರಣವಾಗಿದ್ದು, ಮದ್ಯ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
ಮಾರಾಟದ ಬೆಲೆಯ ಜೊತೆ ಸ್ಪರ್ಧೆಯನ್ನು ಒಡ್ಡಲು ಸರ್ಕಾರವು 16 ವಿವಿಧ ವರ್ಗಗಳ ಪ್ರೀಮಿಯಂ ಮದ್ಯದ ದರಗಳನ್ನು ಪರಿಷ್ಕರಿಸಿದೆ. ಈ ಕ್ರಮವು ಸೆಮೆ ಪ್ರೀಮಿಯಂ ಮತ್ತು ಇತರ ಬ್ರ‍್ಯಾಂಡ್ ಗಳ ಮದ್ಯವನ್ನು ಸ್ಥಳೀಯವಾಗಿ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದಾಗಿ ಅಗ್ಗದ ಮದ್ಯಕ್ಕಾಗಿ ಬೇರೆ ರಾಜ್ಯಗಳನ್ನು ಆಶ್ರಯಿಸುವ ಬದಲು ಕರ್ನಾಟಕದಲ್ಲೇ ಖರೀದಿಸಲು ಅವಕಾಶ ಆಗಲಿದೆ ಎಂಬುದು ಸರ್ಕಾರದ ನಿಲುವಾಗಿದೆ.
ಇದನ್ನೂ ಓದಿ: ಅಂದುಕೊಂಡ ಕೆಲಸ ಆಗುತ್ತಾ ಇಲ್ಲವಾ ಹೇಳುತ್ತೆ ಈ ಕಾರ್ಯ ಸಿದ್ಧಿ ಚಕ್ರ!; ಕಣ್ಣು ಮುಚ್ಚಿ ಹೀಗೆ ಪ್ರಯೋಗಿಸಿ
ಮದ್ಯವನ್ನು ಖರೀದಿಸಲು ಕಡಿಮೆ ದರ ಇರುವ ರಾಜ್ಯಗಳತ್ತ ಮದ್ಯಪ್ರಿಯರು ತೆರಳುತ್ತಿದ್ದರು. ಆದರೆ, ಕರ್ನಾಟಕದಲ್ಲಿಯೇ ಮದ್ಯದ ದರವನ್ನು ಇಳಿಕೆ ಮಾಡುವ ಮೂಲಕ ಮದ್ಯಪ್ರಿಯರು ರಾಜ್ಯದಲ್ಲೇ ಮದ್ಯ ಖರೀದಿಗೆ ಮುಂದಾಗಲಿ ಎಂಬ ಉದ್ದೇಶವನ್ನು ಈ ನಿರ್ಧಾರ ಹೊಂದಿದೆ. ಒಟ್ಟಾರೆ ಮದ್ಯಪ್ರಿಯರ ಪಾಲಿಗೆ ಈ ನಿರ್ಧಾರ ಸಂತಸ ತರಲಿದ್ದು, ಯಾವ ಮದ್ಯದ ದರ ಎಷ್ಟು ಇಳಿಕೆ ಆಗಲಿದೆ ಎಂಬುದು ಜುಲೈ 1ರ ನಂತರವಷ್ಟೇ ಖಚಿತವಾಗಲಿದೆ.
ಯಾವ ಬ್ರ್ಯಾಂಡ್ ಗೆ ಎಷ್ಟು:
ರಾಜ್ಯದಲ್ಲಿ ಈವರೆಗೆ 18 ಸ್ಟ್ಯಾಬ್ ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಟ್ರಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ;ಈ ವಿಷಯದ ಬಗ್ಗೆ ಕಿರುಚಿತ್ರ, ರೀಲ್ಸ್ ಮಾಡಿ ಆಕರ್ಷಕ ಬಹುಮಾನ ಗೆಲ್ಲಿ..!
ಪ್ರತಿ ಬಲ್ಕ್ ಲೀಟರ್ ಮದ್ಯದ ಘೋಷಿತ ಉತ್ಪಾದನಾ ದರ 449 ಮೊದಲ ಸ್ಟ್ರಾಬ್‌ನಲ್ಲಿದ್ದರೆ, 15,001ರಿಂದ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಫ್ಯಾಬ್ ನಲ್ಲಿಡಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್ ನ ಘೋಷಿತ ಉತ್ಪಾದನಾ ದರ 450 ಹೊಂದಿರುವ ಮದ್ಯ ಮೊದಲ ಸ್ಪ್ಯಾಬ್ ನಲ್ಲಿದ್ದರೆ, 20,001 ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಕ್ಯಾಬ್ ಗೆ ಸೇರಿಸಲಾಗಿದೆ.

ಮೊದಲ ಐದು ಸ್ಪ್ಯಾಬ್‌ಗಳಲ್ಲಿ ಈಗ ಇರುವ ಹೆಚ್ಚುವರಿ ಅಬಕಾರಿ ತೆರಿಗೆ ಮತ್ತು ಪರಿಷ್ಕೃತ ಹೆಚ್ಚುವರಿ ಅಬಕಾರಿ ತೆರಿಗೆ ದರದ ಮಧ್ಯೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ, ಆರರಿಂದ 16ನೇ ಸ್ಟ್ರಾಬ್‌ಗಳಲ್ಲಿ ಹೆಚ್ಚುವರಿ ಅಬಕಾರಿ ತೆರಿಗೆ ದರ ಗಣನೀಯವಾಗಿ ಇಳಿಕೆಯಾಗಲಿದೆ.
ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ 2,000 ದರ ಇರುವ ಬ್ಯಾಂಡ್ ಗಳ ಮದ್ಯದ ದರವು ಜುಲೈ 1ರಿಂದ 1,700ರಿಂದ 1,800ಕ್ಕೆ ಇಳಿಕೆಯಾಗಲಿದೆ.
ಇದನ್ನೂ ಓದಿ: ಯುವನಿಧಿ ಫಲಾನುಭವಿಗಳ ಗಮನಕ್ಕೆ; ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ
ಪ್ರತಿ ಬಾಟಲಿಗೆ 5,000 ದರ ಇರುವ ಬ್ಯಾಂಡ್ ಮದ್ಯಗಳ ದರ 3,600ರಿಂದ 3,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 7,100 ಇರುವ ಮದ್ಯದ ದರ 5,200ರ ಆಸುಪಾಸಿಗೆ ಕಡಿಮೆಯಾಗಲಿದೆ.
ಇದೇ ಮಾದರಿಯಲ್ಲಿ ಹೆಚ್ಚಿನ ದರದ ಮದ್ಯಗಳ ದರ ಇಳಿಕೆಯಾಗಲಿದೆ. ಘೋಷಿತ ಉತ್ಪಾದನಾ ದರಕ್ಕೆ ಅನುಗುಣವಾಗಿ ಪ್ರತಿ ಬ್ಯಾಂಡ್ ಮದ್ಯದ ಪರಿಷ್ಕೃತ ದರ ಪಟ್ಟಿಯನ್ನು ಜೂನ್ ಅಂತ್ಯದ ವೇಳೆಗೆ ಅಬಕಾರಿ ಇಲಾಖೆ ಪ್ರಕಟಿಸಲಿದೆ ಎಂದು ಮೂಲಗಳು ಹೇಳಿವೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ
- ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಆರು ವರ್ಷದ ಬಳಿಕ ಕಾಳುಮೆಣಸು ಬೆಲೆಯಲ್ಲಿ ಭಾರೀ ಏರಿಕೆ; 2018 ರ ದಾಖಲೆ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು






