Udyogini Scheme: ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ರಹಿತ ಸಾಲ

(Udyogini Scheme) ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಮಹಿಳೆ ಆರ್ಥಿಕವಾಗಿ ಸದೃಢರಾಗಲು, ಒಬ್ಬ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಕೇಂದ್ರ ಸರ್ಕಾರವ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿ.

ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಿಜೆಪಿ ಠಕ್ಕರ್!; ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್

ಯಾರಿಗೆ ಎಷ್ಟು ಸಾಲ ಸೌಲಭ್ಯ ಈ ಯೋಜನೆಯಲ್ಲಿ ಸಿಗಲಿದೆ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ರೂಪದಲ್ಲಿ ಕನಿಷ್ಠ 1 ಲಕ್ಷ ರೂಪಾಯಿಯಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಇದಕ್ಕೆ ಶೇ.50ರಂತೆ ಗರಿಷ್ಠ 1.50 ಲಕ್ಷ ರೂ. ವರೆಗೆ ಸಹಾಯಧನ ಇರಲಿದೆ. ಇನ್ನು ಕುಟುಂಬದ ವಾರ್ಷಿಕ ಆದಾಯದ ಗರಿಷ್ಠ ಮಿತಿ 2 ಲಕ್ಷ ರೂಪಾಯಿ ಆಗಿರಬೇಕು ಎಂಬ ಷರತ್ತುಗಳಿವೆ.

ಇದನ್ನೂ ಓದಿ: ಉಚಿತ ಪಡಿತರ ಸೇರಿ ಹಲವು ಭರವಸೆ ನೀಡಿದ ಬಿಜೆಪಿ

ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚವು ಗರಿಷ್ಠ 3 ಲಕ್ಷ ರೂಪಾಯಿ ಇದ್ದರೆ, ಶೇ. 30ರವರೆಗೆ ಅಂದರೆ ಗರಿಷ್ಠ 90,000 ರೂಪಾಯಿವರೆಗೆ ಸಹಾಯಧನದ ಮೊತ್ತ ಸಿಗಲಿದೆ. ಆದರೆ, ಕುಟುಂಬದ ವಾರ್ಷಿಕ ಆದಾಯದ ಗರಿಷ್ಠ ಮಿತಿ 1.50 ಲಕ್ಷ ರೂಪಾಯಿ ಇರಬೇಕು.

ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್

ಉದ್ಯೋಗಿನಿ ಯೋಜನೆಯನ್ನು ಎಲ್ಲಿ ಪಡೆಯಬಹುದು?:
ಉದ್ಯೋಗಿನಿ ಯೋಜನೆಯು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಸಹ ಸಂಘಟಿಸುತ್ತದೆ.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸಹಾಯಧನ!

ಉದ್ಯೋಗಿನಿ ಯೋಜನೆಯ ಉದ್ದೇಶವೇನು?;
ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಗುರಿಯೆಂದರೆ ಮಹಿಳೆಯರು ತಮ್ಮದೇ ಆದ ಕಂಪನಿಗಳು ಮತ್ತು ಕಿರು ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿಯಾಗಲು ಸಹಾಯ ಮಾಡುವುದು. ಜೊತೆಗೆ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸುವುದಾಗಿದೆ. ಆರ್ಥಿಕ ಸಹಾಯದ ಜೊತೆಗೆ ಕೌಶಲ್ಯ ಅಭಿವೃದ್ಧಿ ಕೋರ್ಸ್ ಗಳನ್ನು ಈ ಮೂಲಕ ನೀಡಲಾಗುತ್ತದೆ.

ಇದನ್ನೂ ಓದಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗ; ನೇರ ಸಂದರ್ಶನ ಮೂಲಕ ಆಯ್ಕೆ

ಉದ್ಯೋಗಿನಿ ಯೋಜನೆಯ ಗುರಿ, ವೈಶಿಷ್ಟ್ಯಗಳೇನು?:

  • ಬ್ಯಾಂಕ್‌ ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವುದು ಸಾಲಗಾರರನ್ನು ಪ್ರೋತ್ಸಾಹಿಸುವುದು.
  • ಅರ್ಹ ಮಹಿಳಾ ಫಲಾನುಭವಿಗಳಿಗೆ ತಾರತಮ್ಯವಿಲ್ಲದೆ ಬಡ್ಡಿ ರಹಿತ ಸಾಲ ನೀಡುವುದು.
  • SC/ST ಅಥವಾ ಇತರ ವಿಶೇಷ ವರ್ಗಗಳ ಅಡಿಯಲ್ಲಿ ಬರುವ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಹೆಚ್ಚಿನ ಮಟ್ಟದಲ್ಲಿ ಕೈಗೆಟುಕುವಂತೆ ಮಾಡುವುದು.
  • ಲೇವಾದೇವಿಗಾರರಿಂದ ಇತರ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಯ ಸಾಲ ಪಡೆಯುವುದನ್ನು ತಡೆಯುವುದು.
  • ಇಡಿಪಿ (EDP_ ​​ತರಬೇತಿಯ ಮೂಲಕ ಮಹಿಳಾ ಫಲಾನುಭವಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು.

ಇದನ್ನೂ ಓದಿ; sbi ಅಮೃತ್‌ ಕಲಶ್‌ ಎಫ್‌ಡಿ ಸ್ಕೀಮ್‌; ಹೂಡಿಕೆ ಗಡುವು ವಿಸ್ತರಿಸಿದ ಎಸ್‌ಬಿಐ; ಈ ಯೋಜನೆಯಲ್ಲಿ ಏನೆಲ್ಲಾ ಲಾಭ? ಇಲ್ಲಿದೆ ಡಿಟೈಲ್ಸ್

ಉದ್ಯೋಗಿನಿ ಯೋಜನೆಗೆ ಅರ್ಹತೆ ಏನಿರಬೇಕು?;

  • ಅಭ್ಯರ್ಥಿಯು ಮಹಿಳೆಯಾಗಿರಬೇಕು.
  • ಅರ್ಹ ಮಹಿಳೆಯ ವಯೋಮಿತಿ 18 ರಿಂದ 55 ರವರೆಗೆ ಇರಬೇಕು.
  • ಆದಾಯದ ಮಿತಿ 1.5 ಲಕ್ಷ ರೂ ಇರಬೇಕು.
  • ಮಹಿಳಾ ವ್ಯಾಪಾರ ಮಾಲೀಕರು ಮಾತ್ರ ವ್ಯಾಪಾರ ಸಾಲಗಳಿಗೆ ಅರ್ಹರು.
  • ಹಣಕಾಸು ಸಂಸ್ಥೆಗಳಿಂದ ಹಿಂದಿನ ಯಾವುದೇ ಸಾಲಗಳನ್ನು ಡಿಫಾಲ್ಟ್ ಮಾಡಿಕೊಳ್ಳದೇ ಇರುವುದು.

ಇದನ್ನೂ ಓದಿ: ಕೆಂಪಿರುವೆ ಚಟ್ನಿ ಎಷ್ಟು ಒಳ್ಳೇದು ನಿಮಗೊತ್ತಾ?; ಸರ್ವರೋಗಕ್ಕೆ ಮದ್ದು ಚಗಳಿ ಚಟ್ನಿ…

ಅಗತ್ಯ ದಾಖಲೆಗಳು ಏನು?

  •  ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
  • ಅರ್ಜಿದಾರರ ಆಧಾರ್ ಕಾರ್ಡ್
  • ಜನನ ಪ್ರಮಾಣಪತ್ರ
  • ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ
  • ವಿಳಾಸ ಮತ್ತು ಆದಾಯದ ಪುರಾವೆ
  • ಬಡತನ ರೇಖೆಗಿಂತ ಕೆಳಗಿರುವ ಅರ್ಜಿದಾರರ (BPL) ಕಾರ್ಡ್ ಮತ್ತು ಪಡಿತರ ಚೀಟಿ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಬ್ಯಾಂಕ್ ಪಾಸ್ ಬುಕ್‌ನ ಪ್ರತಿ (ಖಾತೆ, ಬ್ಯಾಂಕ್ ಮತ್ತು ಶಾಖೆಯ ಹೆಸರುಗಳು, ಹೊಂದಿರುವವರ ಹೆಸರು, IFSC, ಮತ್ತು MICR)
  • ಬ್ಯಾಂಕ್/NBFC ಗೆ ಅಗತ್ಯವಿರುವ ಯಾವುದೇ ಇತರ ದಾಖಲೆ

ಇದನ್ನೂ ಓದಿ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?;
ಈ ಯೋಜನೆ ಅಥವಾ ಯೋಜನೆಗೆ ಅರ್ಜಿದಾರರು ಅಗತ್ಯವಿರುವ ಎಲ್ಲ ದಾಖಲಾತಿಗಳೊಂದಿಗೆ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಬಹುದು. ಇಲ್ಲವೇ ಉದ್ಯೋಗಿನಿ ಕಾರ್ಯಕ್ರಮದ ಅಡಿಯಲ್ಲಿ ಸಾಲ ನೀಡುವ ಬ್ಯಾಂಕ್ ಗಳ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಆನ್ ಲೈನ್ ನಲ್ಲಿ ಸಾಲದ ಅರ್ಜಿಯನ್ನು ತುಂಬಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಸೆಂಟ್ರಲ್ ಪವರ್ ರಿಸರ್ಚ್ ಸಂಸ್ಥೆಯಲ್ಲಿ ಉದ್ಯೋಗ; ರಿಸರ್ಚ್​​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್

ಯಾವೆಲ್ಲಾ ಉದ್ದಿಮೆಗಳಿಗೆ ಸಾಲ ಪಡೆಯಬಹುದು?:

  • ಅಗರ ಬತ್ತಿ ತಯಾರಿಕೆ ಡಯೋಗ್ನೋಸ್ಟಿಕ್ ಲ್ಯಾಬರ್
  • ಲೀಫ್ ಕಪ್ ಗಳ ತಯಾರಿಕೆ
  • ರಿಬ್ಬನ್ ತಯಾರಿಕೆ. ಬೇಕರಿ
  • ಮೀನು ಮಾರಾಟ
  • ದಿನಸಿ ಅಂಗಡಿ
  • ಉಪ್ಪಿನಕಾಯಿ
  • ಕಾಫಿ -ಟೀ ಅಂಗಡಿ
  • ಟೈಲರಿಂಗ್
  • ಬಳೆ ಅಂಗಡಿ
  • ಎಸ್‌ಟಿಡಿ ಬೂತ್
  • ಬ್ಯೂಟಿ ಪಾರ್ಲರ್
  • ಕ್ಲಿನಿಕ್
  • ಜಿಮ್
  • ಹಿಟ್ಟಿನ ಗಿರಣಿ
  • ಪೋಟೋ ಸ್ಟೂಡಿಯೋ
  • ಕಾಂಡಿಮೆಂಟ್ಸ್
  • ಚಪ್ಪಲಿ ಮಾರಾಟ ಮಳಿಗೆ
  • ಮ್ಯಾಚ್ ಬಾಕ್ಸ್ ತಯಾರಿಕೆ
  • ಸೋಪ್ ಆಯಿಲ್
  • ಸೋಪ್ ಪೌಡರ್
  • ಡಿಟರ್ಜೆಂಟ್ ತಯಾರಿಕೆ
  • ನ್ಯಾಯಬೆಲೆ ಅಂಗಡಿ ಸೇರಿದಂತೆ 88 ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಿಸಲು ಉದ್ಯೋಗಿನಿ ಯೋಜನೆ ಅಡಿ ಸಾಲ ಸಿಗಲಿದೆ.
Udyogini Scheme: ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ರಹಿತ ಸಾಲ
Udyogini Scheme: ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ರಹಿತ ಸಾಲ

ಇದನ್ನೂ ಓದಿ; hsrp ನಂಬರ್ ಪ್ಲೇಟ್ ಅಳವಡಿಕೆ; ವಾಹನ ಸವಾರರಿಗೆ ಮಹತ್ವದ ಮಾಹಿತಿ ಇಲ್ಲಿದೆ!