Amrit Kalash: SBI ಅಮೃತ್‌ ಕಲಶ್‌ FD ಸ್ಕೀಮ್‌

(Amrit Kalash) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಅಮೃತ್ ಕಲಶ್‌ FD ಯೋಜನೆಯನ್ನು (SBI Amrit Kalash FD Scheme) ಮತ್ತೊಮ್ಮೆ ಗಡುವು ವಿಸ್ತರಿಸುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಯೋಜನೆಯ ಗಡುವು ಮೊದಲು 23 ಜೂನ್ 2023 (23 June 2023) ರಂದು ಕೊನೆಗೊಳ್ಳಬೇಕಿತ್ತು, ನಂತರ ಅದನ್ನು 31 ಡಿಸೆಂಬರ್ 2023 (31 December 2023) ಕ್ಕೆ ವಿಸ್ತರಿಸಲಾಯಿತು. ನಂತರ ಅದನ್ನು 31 ಮಾರ್ಚ್ 2024 (31 March 2024) ರವರೆಗೆ ವಿಸ್ತರಿಸಲಾಯಿತು. ಈಗ ಬ್ಯಾಂಕ್ ಮತ್ತೊಮ್ಮೆ ಈ ವಿಶೇಷ FD ಯೋಜನೆಯ ಗಡುವನ್ನು 30 ಸೆಪ್ಟೆಂಬರ್ 2024 ರವರೆಗೆ (extended to September 30 2024) ವಿಸ್ತರಿಸಿದೆ.

ಇದನ್ನೂ ಓದಿ; ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; 660 ಹುದ್ದೆಗಳಿಗೆ ಅರ್ಜಿ ಆಹ್ವಾನ; sslc ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

ಈ ಯೋಜನೆಯ ಪ್ರಯೊಜನವೇನು?;
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಅಮೃತ್ ಕಲಶ್‌ ಯೋಜನೆಯನ್ನು 12 ಏಪ್ರಿಲ್ 2023 ರಂದು ಪ್ರಾರಂಭಿಸಿದೆ.
* SBI ಅಮೃತ್ ಕಲಶ್‌ ಯೋಜನೆಯು 400 ದಿನಗಳ FD ಯೋಜನೆಯಾಗಿದ್ದು, ಇದರಲ್ಲಿ ಸಾಮಾನ್ಯ ನಾಗರಿಕರು ಹೂಡಿಕೆಯ ಮೇಲೆ ಶೇಕಡಾ 7.10 ರ ಬಡ್ಡಿದರದ ಲಾಭವನ್ನು ಪಡೆಯಬಹುದು.
* ಹಿರಿಯ ನಾಗರಿಕರು ಈ ಯೋಜನೆಯಡಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಹೆಚ್ಚುವರಿ 0.50% ಬಡ್ಡಿದರದ ಲಾಭವನ್ನು ಪಡೆಯಬಹುದು.
* 400 ದಿನಗಳ FD ಯೋಜನೆಯಲ್ಲಿ ಶೇಕಡಾ 7.60 ಬಡ್ಡಿಯ ಲಾಭವನ್ನು ಪಡೆಯುತ್ತಿದ್ದು, ಈ ಯೋಜನೆಯಡಿ ನೀವು 2 ಕೋಟಿ ರೂ.ವರೆಗಿನ ಮೊತ್ತವನ್ನು ಠೇವಣಿ ಮಾಡಬಹುದು.

ಇದನ್ನೂ ಓದಿ; ಬೇರೊಬ್ಬರ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರು ಪಿಎಂ ಕಿಸಾನ್‌ ಹಣ ಪಡೆಯಬಹುದೇ? ; ಈ ಯೋಜನೆಯ ಲಾಭ ಯಾರು ಪಡೆಯಬಹುದು!, ಇಲ್ಲಿದೆ ಮಾಹಿತಿ

ಹಾಗಾದರೆ ಈ ಖಾತೆ ತೆರೆಯುವುದು ಹೇಗೆ?
SBI ಅಮೃತ್ ಕಲಶ್‌ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು SBI ನ ಯಾವುದೇ ಶಾಖೆಗೆ ಭೇಟಿ ನೀಡಿ ಖಾತೆ ತೆರೆದು ಈ ಯೋಜನೆಯ ಲಾಭ ಪಡೆಯಬಹುದು.

ಇದನ್ನೂ ಓದಿ; ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಕಮ್ಯುನಿಕೇಶನ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಖಾತೆ ತೆರೆಯಲು ಬೇಕಾಗುವ ದಾಖಲೆಗಳು ಯಾವುದು?;
* ಆಧಾರ್ ಕಾರ್ಡ್ (Aadhaar card)
* ಮೊಬೈಲ್ ಸಂಖ್ಯೆ (mobile no)
* ಪಾನ್ ಕಾರ್ಡ್ (PAN card)
* ಪಾಸ್‌ಪೋರ್ಟ್ ಗಾತ್ರದ ಫೋಟೋ (Passport size photo)
* ಇ-ಮೇಲ್ ಐಡಿ (E-mail Id)

ಇದನ್ನೂ ಓದಿ; ಈಗಷ್ಟೇ 18 ಆದವರಿಗೆ ಚುನಾವಣಾ ಆಯೋಗದಿಂದ ಬರ್ತ್​ಡೇ ಗಿಫ್ಟ್​​​; ಏನದು? ಇಲ್ಲಿದೆ ನೋಡಿ ಡಿಟೈಲ್ಸ್

ಹಾಗೂ ಬ್ಯಾಂಕ್ ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ SBI ಅಮೃತ್ ಕಲಶ್ ಖಾತೆಯನ್ನು ತೆರೆಯಲಾಗುತ್ತದೆ.

Amrit Kalash: SBI ಅಮೃತ್‌ ಕಲಶ್‌ FD ಸ್ಕೀಮ್‌
Amrit Kalash: SBI ಅಮೃತ್‌ ಕಲಶ್‌ FD ಸ್ಕೀಮ್‌

ಇದನ್ನೂ ಓದಿ; ದ್ವೀತಿಯ ಪಿಯುಸಿ ಫಲಿತಾಂಶ;ಮರು ಮೌಲ್ಯಮಾಪನ, ಮರು ಎಣಿಕೆಗೆ ದಿನಾಂಕ ಫಿಕ್ಸ್; ಅರ್ಜಿ ಸಲ್ಲಿಸುವುದು ಹೇಗೆ