ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕ್ರಿಕೆಟ್ ಆಡುವಾಗ ಕ್ಷುಲಕ ವಿಚಾರಕ್ಕೆ ಜಗಳವಾಗಿದ್ದು ಇಬ್ಬರು ಯುವಕರು ಲಾರಿ ಚಾಲಕನ ತಲೆಗೆ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸುಧಾಕರ್.ಎನ್ ಹಲ್ಲೆಗೊಳಗಾದ ಲಾರಿ ಚಾಲಕ.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಲಾರಿ ಚಾಲಕ ದೇವಕಾತಿಕೊಪ್ಪದ ಸುಧಾಕರ್.ಎನ್ ಅವರು ಭಾನುವಾರ ಕೆಐಒಬಿ ಲೇಔಟ್‌ನಲ್ಲಿ ಊರಿನ ಹುಡುಗರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದರು. ಈ ವೇಳೆ ಕ್ಷುಲಕ ವಿಚಾರಕ್ಕೆ ಜಗಳವಾಗಿದ್ದು, ಇಬ್ಬರು ಯವಕರು ಸುಧಾಕರ್ ಮೇಲೆ ದಾಳಿ ಮಾಡಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಉದ್ಯಮಿ ಕೃತ್ಯದ ವಿರುದ್ಧ ಮಹಿಳೆಯಿಂದ ದೂರು
- ಸಿ. ಟಿ ರವಿ ಸೋಲನ್ನು ಸಂಭ್ರಮಿಸುವ ರೀತಿ ವ್ಯಂಗ್ಯವಾಡಿದ ಎಂ ಪಿ ಕುಮಾರಸ್ವಾಮಿ
- ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ
ಒಬ್ಬಾತ ಬ್ಯಾಟ್‌ನಿಂದ ಸುಧಾಕರ್ ತಲೆಗೆ ಹೊಡೆದಿದ್ದಾನೆ. ಮತ್ತೊಬ್ಬ ಯುವಕ ಕೈಯಿಂದ ಮುಖಕ್ಕೆ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ. ತಲೆಗೆ ತೀವ್ರ ನೋವಗಿದ್ದರಿಂದ ಇತರರು ಸುಧಾಕರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.