Sunday, September 24, 2023
Homeಮಲೆನಾಡುಭದ್ರಾ ನದಿಯ ಆಳ ಕೇಳುತ್ತಿದ್ದ ವೃದ್ದೆ ನಾಪತ್ತೆ

ಭದ್ರಾ ನದಿಯ ಆಳ ಕೇಳುತ್ತಿದ್ದ ವೃದ್ದೆ ನಾಪತ್ತೆ

ಶಿವಮೊಗ್ಗ; (ನ್ಯೂಸ್ ಮಲ್ನಾಡ್ ವರದಿ) ವಿಶಾಲ್ ಮಾರ್ಟ್ ನಿಂದ ಭದ್ರಾವತಿ ಬಸ್ ನಿಲ್ದಾಣದ ಬಳಿ ಬಂದಿದ್ದ 60 ವರ್ಷದ ವೃದ್ದೆ ನಾಪತ್ತೆಯಾಗಿದ್ದು ಈ ಕುರಿತು ಭದ್ರಾವತಿ ನ್ಯೂ ಟೌನ್ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ;  ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಇದನ್ನೂ ಓದಿ; ಕುಂದಾಪುರಕ್ಕೆ ಹೋಗುತ್ತಿದ್ದ ಬಸ್‌ ಪಲ್ಟಿ; 15 ಮಂದಿಗೆ ಗಾಯ

ಭದ್ರಾವತಿಯ ದೇವಹಳ್ಳಿ ಪೋಸ್ಟ್ ನಲ್ಲಿ ನಿವಾಸಿ ಸುಭದ್ರಮ್ಮ ಕಾಣೆಯಾಗಿದ್ದಾರೆ. ಏ.28 ರಂದು ವಿಶಾಲ್ ಮಾರ್ಟ್ ನಿಂದ ಭದ್ರಾವತಿ ಬಸ್ ನಿಲ್ದಾಣದ ಬಳಿ ಬಂದಿದ್ದ ವೃದ್ಧೆ ಬಸ್ ನಿಲ್ದಾಣ ಹಿಂದಿರುವ ನದಿ ಆಳವನ್ನೂ ಸಹ ಕೇಳುತ್ತಿದ್ದರು ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ವಿಶಾಲ್ ಮಾರ್ಟ್ ನಿಂದ ಬಸ್ ನಿಲ್ದಾಣದ ಬಳಿ ಆಟೋದಿಂದ ಬಂದ ವೃದ್ದೆ ಬಸ್ ನಿಲ್ದಾಣದ ಬಳಿ ಓಡಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಏ.28 ರಂದು ಸಂಜೆ ಐದು ಗಂಟೆಯವರೆಗೆ ಪತ್ತೆಯಾಗಿದೆ. ತದ ನಂತರ ಯಾವುದೂ ಪತ್ತೆಯಾಗಲಿಲ್ಲ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಕುರಿತು ಸುಭದ್ರಮ್ಮ ನವರ ಮಗಳು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶೃಂಗೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭರವಸೆ

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೆ 9 ದಿನಗಳು ಬಾಕಿ ಇರುವಾಗ ರಾಜ್ಯದ ಆಡಳಿತಾರೂಢ ಸರ್ಕಾರ ಹಲವಾರು ಭರವಸೆಗಳನ್ನು ಜನರಿಗೆ ನೀಡಿದೆ.

ಇದನ್ನೂ ಓದಿ; ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸಿದ ಪೊಲೀಸರು

ಕರ್ನಾಟಕ ವಿಧಾನಸಭೆ ಚುನಾವಣೆ 2023 ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೋಮವಾರ ‘ಬಿಜೆಪಿ ಪ್ರಜಾ ಪ್ರಣಾಳಿಕೆ 2023 ‘ ಬಿಡುಗಡೆ ಮಾಡಿದರು. ಪಕ್ಷ ಡಾ. ಕೆ. ಸುಧಾಕರ್ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಣಾಳಿಕೆ ಸಮಿತಿ ರಚನೆ ಮಾಡಿತ್ತು. ಪ್ರಣಾಳಿಕೆಯಲ್ಲಿ ವಿವಿಧ ವಲಯಗಳಿಗೆ ಹಲವಾರು ಘೋಷಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ; ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ

ಆರೋಗ್ಯ ಕ್ಷೇತ್ರಕ್ಕೆ ಬಿಜೆಪಿಯ ಪ್ರಜಾ ಪ್ರಣಾಳಿಕೆ:
ಆರೋಗ್ಯ ಕ್ಷೇತ್ರಕ್ಕೆ ಯಾವ ಭರವಸೆ ಸಿಗಲಿದೆ? ಎಂಬ ನಿರೀಕ್ಷೆ ಇತ್ತು. ಪ್ರಣಾಳಿಕೆ ಬಿಡುಗಡೆಯಾಗಿದ್ದು ಹಲವು ಭರವಸೆಗಳನ್ನು ಕೊಡಲಾಗಿದೆ ಅದರಲ್ಲಿ ಶೃಂಗೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಭಾರೀ ಹೋರಾಟ ನಡೆದಿತ್ತು. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಣಾಳಿಕೆಯಲ್ಲಿ ಅತ್ಯಾಧುನಿಕ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆದ್ಯತೆಯ ಮೇರೆಗೆ ಸ್ಥಾಪನೆ ಮಾಡುತ್ತೇವೆ ಎಂದು ಬಿಜೆಪಿ ಹೇಳಿದೆ.

ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ:
ಪ್ರಾದೇಶಿಕ ವಾಯುಯಾನ ಸಂಪರ್ಕ ಕಲ್ಪಿಸಲು ಉಡಾನ್ ಯೋಜನೆಯಡಿ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ

ಚತುಷ್ಪಥ ರಸ್ತೆ ನಿರ್ಮಾಣ:
ಮಿಷನ್ ಕನೆಕ್ಟ್ ಕರ್ನಾಟಕದ ಅಡಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಶಿವಮೊಗ್ಗ-ಶೃಂಗೇರಿ ಉತ್ತಮ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.

ಆರ್ಯವೇದ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಸ್ಥಾಪನೆ:
ಬಿಜೆಪಿ ತನ್ನ 5ನೇ ಭರವಸೆಯಲ್ಲಿ ಶಿವಮೊಗ್ಗದಲ್ಲಿ ಆರ್ಯವೇದ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದೆ.

Most Popular

Recent Comments