ಮೂಡಿಗೆರೆ; (ನ್ಯೂಸ್ ಮಲ್ನಾಡ್ ವರದಿ) ಹೆಂಡತಿಯನ್ನು ಬಸ್ಸು ಹತ್ತಿಸಿ ಬೈಕಿನಲ್ಲಿ ಬರುತ್ತೇನೆಂದು ಹೇಳಿದ ಪತಿ ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಅವರ ಕುಟುಂಬಕ್ಕೆ ನ್ಯಾಯವನ್ನು ಪೊಲೀಸ್ ಇಲಾಖೆ ಒದಗಿಸಿಕೊಟ್ಟಿದ್ದಾರೆ.
ಇದನ್ನೂ ಓದಿ; ಜೋಗ ಜಲಪಾತಕ್ಕೆ ನೋ ಎಂಟ್ರಿ
ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ
ಅಪಘಾತವೆಸಗಿದ್ದ ವಾಹನವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಮೂಲದ ಬೊಲೆಯೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನವು ತರಕಾರಿ ಸಾಗಾಟ ಮಾಡುವುದಾಗಿದ್ದು, ಮಂಗಳೂರಿಗೆ ತರಕಾರಿ ತಲುಪಿಸಿ ವಾಪಾಸ್ಸು ಬರುತ್ತಿತ್ತು ಎನ್ನಲಾಗಿದೆ.
ವಾಹನ ಮಾಲೀಕರು ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಅಪಘಾತದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲೆಂದು ವಾಹನದಲ್ಲಿ ಕರೆತಂದಿದ್ದು, ಅವರು ಹೊಟ್ಟೆನೋವು ಎಂದು ಹೇಳುತ್ತಿದ್ದರು. ಕೊಟ್ಟಿಗೆಹಾರ ಸಮೀಪ ಬಂದಾಗ ಮೂತ್ರವಿಸರ್ಜನೆ ಮಾಡಬೇಕು ಎಂದಾಗ ಅವರನ್ನು ಕೆಳಗೆ ಇಳಿಸಿದೆವು. ಮೂತ್ರ ವಿಸರ್ಜನೆಗೆ ಕುಳಿತವರು ಎಷ್ಟು ಕರೆದರು ಮೇಲೆ ಏಳಲಿಲ್ಲ. ಹಾಗಾಗಿ ಎದ್ದು ಸರಿಯಾಗಬಹುದು ಎಂದು ಹಾಗೆಯೇ ಬಿಟ್ಟು ಹೋದೆವು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾರು ಹಾಗೂ ಸ್ಕೂಟಿಯ ನಡುವೆ ಡಿಕ್ಕಿ
- mlc ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತ
- ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದ ಟ್ಯಾಕ್ಸಿ ಡ್ರೈವರ್
ಹೊಟ್ಟೆಯ ಭಾಗಕ್ಕೆ ತೀವ್ರ ಹೊಡೆತ ಬಿದ್ದು ಅವರ ಲಿವರ್ ಗೆ ಪೆಟ್ಟಾಗಿತ್ತು ಎನ್ನಲಾಗಿದ್ದು, ನೋವನ್ನು ತಾಳಲಾರದೇ ರಸ್ತೆ ಬದಿಯಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಬಣಕಲ್ ಸಬ್ ಇನ್ಸ್ ಪೆಕ್ಟರ್ ಗಳಾದ ಜಂಬೂ ಮಹಾರಾಜನ್, ರನ್ನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಕರಣವನ್ನು ಬೇದಿಸಲಾಗಿದೆ.
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್; ಮೇ 1ರಿಂದ ಫೇಕ್ ಕಾಲ್, ಮೆಸೇಜ್ ಗೆ ನಿರ್ಬಂಧ
ಟೆಲಿಕಾಂ ನೀತಿಯಲ್ಲಿ ಮೇ 1 ರಿಂದ ಮಹತ್ತರ ಬದಲಾವಣೆ ಆಗುತ್ತಿದೆ ಇಷ್ಟು ದಿನ ಅನಗತ್ಯ ಕಾಲ್, ಮೆಸೇಜುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಮೊಬೈಲ್ ಬಳಕೆದಾರರಿಗೆ ಇದೀಗ ಟ್ರಾಯ್ ಶುಭ ಸುದ್ದಿಯನ್ನು ನೀಡಿದೆ.
ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ
ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದೆ. ಮೊಬೈಲ್ ಬಳಕೆದಾರರು ಪ್ರತಿನಿತ್ಯ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಸಂದೇಶಗಳಿಂದ ಹೈರಾಣಾಗುತ್ತಿದ್ದವರಿಗೆ ಟ್ರಾಯ್ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು
ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್ ಗುರುವಾರ ಸೂಚನೆ ನೀಡಿದೆ. ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್‌ಗಳಿಂದ ಉಂಟಾಗುವ ಕಿರಿಕಿಯಿಂದ ಮುಕ್ತಿ ಸಿಗಲಿದೆ.
ಇನ್ನು ಅಪರಿಚಿತ ನಂಬರ್, ಸ್ಪಾಯಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ. ಟೆಲಿಕಾಂ ಆಪರೇಟರ್ ಬಳಿ ಲಭ್ಯವಿರುವ ಕೆವೈಸಿ ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್‌ನಲ್ಲಿ ಅಪರಿಚಿತ ನಂಬರ್‌ಗಳ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ.
ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ‘ಟ್ರೂಕಾಲರ್’ನಂತಹ ಆಯಪ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ. ಇಂತಹ ಆಯಪ್‌ಗಳು ಮಾಹಿತಿಯನ್ನು ಕ್ರೌಡ್‌ಸೋರ್ಸಿಂಗ್ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಅಧಿಕೃತವಾಗಿವೆ ಎನ್ನಲು ಸಾಧ್ಯವಾಗಿಲ್ಲ. ಆದರೆ ಕೆವೈಸಿ ಡೇಟಾಗಳು ಸಂಪೂರ್ಣವಾಗಿ ಅಧಿಕೃತ ಹಾಗೂ ನಂಬಲು ಅರ್ಹವಾಗಿರುತ್ತವೆ.
ಒಂದು ವೇಳೆ ಕೆವೈಸಿ ಸರಿಯಾಗಿ ಮಾಡಿಸದಿದ್ದರೆ ಫೋನ್‌ನಲ್ಲಿ ಹೆಸರು ಕಂಡುಬರುವುದಿಲ್ಲ. ಹೀಗಾಗಿ ಟ್ರಾಯ್‌ನ ಈ ಹೊಸ ಉಪಕ್ರಮದಿಂದಾಗಿ ಟೆಲಿಕಾಂ ಸೇವೆ ಪೂರೈಕೆದಾರರು ಕೆವೈಸಿ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ.