Sunday, September 24, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಎರಡು ಕಾರುಗಳ ನಡುವೆ ಮುಖಾಮುಕ್ಕಿ ಡಿಕ್ಕಿ; ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು: ಎರಡು ಕಾರುಗಳ ನಡುವೆ ಮುಖಾಮುಕ್ಕಿ ಡಿಕ್ಕಿ; ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಎರಡು ಕಾರುಗಳ ನಡುವೆ ಮುಖಾಮುಕ್ಕಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿಯಲ್ಲಿ ನಡೆದಿದೆ.

ಇದನ್ನೂ ಓದಿ; ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸಿದ ಪೊಲೀಸರು

ಮಾಗುಂಡಿಯ ಸೇತುವೆ ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು, ಎರಡು ಕಾರಿನಲ್ಲಿದ್ದ 8 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್; ಮೇ 1ರಿಂದ ಫೇಕ್ ಕಾಲ್, ಮೆಸೇಜ್ ಗೆ ನಿರ್ಬಂಧ

ಟೆಲಿಕಾಂ ನೀತಿಯಲ್ಲಿ ಮೇ 1 ರಿಂದ ಮಹತ್ತರ ಬದಲಾವಣೆ ಆಗುತ್ತಿದೆ ಇಷ್ಟು ದಿನ ಅನಗತ್ಯ ಕಾಲ್, ಮೆಸೇಜುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಮೊಬೈಲ್ ಬಳಕೆದಾರರಿಗೆ ಇದೀಗ ಟ್ರಾಯ್ ಶುಭ ಸುದ್ದಿಯನ್ನು ನೀಡಿದೆ.

ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ

ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದೆ. ಮೊಬೈಲ್ ಬಳಕೆದಾರರು ಪ್ರತಿನಿತ್ಯ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಸಂದೇಶಗಳಿಂದ ಹೈರಾಣಾಗುತ್ತಿದ್ದವರಿಗೆ ಟ್ರಾಯ್ ಸಿಹಿ ಸುದ್ದಿ ನೀಡಿದೆ.

ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು

ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್ ಗುರುವಾರ ಸೂಚನೆ ನೀಡಿದೆ. ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್‌ಗಳಿಂದ ಉಂಟಾಗುವ ಕಿರಿಕಿಯಿಂದ ಮುಕ್ತಿ ಸಿಗಲಿದೆ.

ಇನ್ನು ಅಪರಿಚಿತ ನಂಬರ್, ಸ್ಪಾಯಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ. ಟೆಲಿಕಾಂ ಆಪರೇಟರ್ ಬಳಿ ಲಭ್ಯವಿರುವ ಕೆವೈಸಿ ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್‌ನಲ್ಲಿ ಅಪರಿಚಿತ ನಂಬರ್‌ಗಳ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ.

ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ‘ಟ್ರೂಕಾಲರ್’ನಂತಹ ಆಯಪ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ. ಇಂತಹ ಆಯಪ್‌ಗಳು ಮಾಹಿತಿಯನ್ನು ಕ್ರೌಡ್‌ಸೋರ್ಸಿಂಗ್ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಅಧಿಕೃತವಾಗಿವೆ ಎನ್ನಲು ಸಾಧ್ಯವಾಗಿಲ್ಲ. ಆದರೆ ಕೆವೈಸಿ ಡೇಟಾಗಳು ಸಂಪೂರ್ಣವಾಗಿ ಅಧಿಕೃತ ಹಾಗೂ ನಂಬಲು ಅರ್ಹವಾಗಿರುತ್ತವೆ.

ಒಂದು ವೇಳೆ ಕೆವೈಸಿ ಸರಿಯಾಗಿ ಮಾಡಿಸದಿದ್ದರೆ ಫೋನ್‌ನಲ್ಲಿ ಹೆಸರು ಕಂಡುಬರುವುದಿಲ್ಲ. ಹೀಗಾಗಿ ಟ್ರಾಯ್‌ನ ಈ ಹೊಸ ಉಪಕ್ರಮದಿಂದಾಗಿ ಟೆಲಿಕಾಂ ಸೇವೆ ಪೂರೈಕೆದಾರರು ಕೆವೈಸಿ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ.

Most Popular

Recent Comments