ಹಾಸನ: (ನ್ಯೂಸ್ ಮಲ್ನಾಡ್ ವರದಿ) ಮದುವೆಗೆ ಜನರನ್ನು ಕರೆದೊಯ್ದು ವಾಪಾಸ್ ಬರುತ್ತಿದ್ದ ಮಿನಿ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಕಾರೇಕೆರೆ ಗೇಟ್ ಬಳಿ ನಡೆದಿದೆ.
ಇದನ್ನೂ ಓದಿ; ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ
ಇದನ್ನೂ ಓದಿ; ಯುವಕನ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ
ಹಾಸನ ತಾಲೂಕಿನ ಕಾರೇಕೆರೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 75ರಲ್ಲಿ KA-13 B-7339 ನಂಬರ್‌ನ ಮಿನಿ ಬಸ್ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿವೆ.
ಮತ್ತೊಂದೆಡೆ ಇಬ್ಬರ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಬಳಿಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಗೋ ಪೂಜೆ ಮಾಡಿ ವಿನೂತನ ರೀತಿಯಲ್ಲಿ ಶ್ರೀರಾಮಸೇನೆಯಿಂದ ಪ್ರತಿಭಟನೆ
- ಅಕ್ರಮವಾಗಿ ನಕಲಿ ಖಾತೆ ಸೇರ್ಪಡೆ; ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಅಮಾನತು
- ಪ್ರಭಾವಿ ಹುದ್ದೆ ಬಳಸಿಕೊಂಡು ಜೀವರಾಜ್ ನಡೆಸಿದ ನಂಜಿನ ರಾಜಕಾರಣದಿಂದಾಗಿ ಕ್ಷೇತ್ರದಲ್ಲಿ ಈ ಹಿಂದೆ ಅಭಿವೃದ್ಧಿ ಮಾಡಲಾಗಿರಲಿಲ್ಲ
ಹಾಸನದ ಗುಂಡೇಗೌಡನ ಕೊಪ್ಪಲು ನಿವಾಸಿಗಳು ಚನ್ನರಾಯಪಟ್ಟಣಕ್ಕೆ ಮದುವೆಗೆ ಹೋಗಿ ಹಾಸನಕ್ಕೆ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇನ್ನು ಘಟನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ; ಕುಸಿದು ಬಿದ್ದು ವ್ಯಕ್ತಿ ಸಾವು; ಬ್ಯಾಟರಿ ಲೈಟ್‌ನಲ್ಲಿ ಮರಣೋತ್ತರ ಪರೀಕ್ಷೆ
ಚಿಕ್ಕಮಗಳೂರು: ಮದ ಇಳಿಯೋದಕ್ಕೆ-ಇಳ್ಸೋದಕ್ಕೆ ಬಹಳ ಕಾಲ ಬೇಕಾಗಲ್ಲ: ಸಿ.ಟಿ. ರವಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಕ್ರವರ್ತಿ ಸೂಲಿಬೆಲೆ ಅಪ್ರತಿಮ ದೇಶಭಕ್ತ, ಅವರ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದರು.
ಇದನ್ನೂ ಓದಿ; ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ
ಇದನ್ನೂ ಓದಿ; ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ
ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ. ಬಹುಶಃ ಕಾಂಗ್ರೆಸ್ ಅವರ ಕಣ್ಣಿಗೆ ಸೂಲಿಬೆಲೆ ಲಾಡೆನ್ ತರ ಕಾಣ್ತಿದ್ದಾರಾ, ಲಾಡೆನ್ ಬಂದ್ರೆ ಒಳಗೆ ಬಿಟ್ಟುಕೊಳ್ತಾರೆ. ಚಕ್ರವರ್ತಿ ಸೂಲಿಬೆಲೆ ಬಂದ್ರೆ ಏನು, ಕಾಂಗ್ರೆಸ್ಸಿಗರಿಗೆ ಅಧಿಕಾರದ ಮದ ಅತಿಯಾಗಿದೆ ಎಂದು ಕಾಣಿಸುತ್ತದೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ; ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ
ಅಧಿಕಾರದ ಅತಿಯಾದ ಮದ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಈ ಹಿಂದೆ ಕಾಂಗ್ರೆಸ್ ಸಂವಿಧಾನವನ್ನೇ ಬುಡಮೇಲು ಮಾಡಿ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿತ್ತು. ಜನ ಈ ಹಿಂದೆ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಿದ್ದನ್ನ ಅವರು ನೆನಪಿಟ್ಟುಕೊಳ್ಳಬೇಕು ಎಂದು ಸಿ.ಟಿ ರವಿ ಹೇಳಿದರು
ಮದ ಇಳಿಯೋದಕ್ಕೆ-ಇಳ್ಸೋದಕ್ಕೆ ಬಹಳ ಕಾಲಬೇಕಾಗಲ್ಲ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಲಾರಿಗೆ ಡಿಕ್ಕಿ ಹೊಡೆದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು