(BSE V/S NSE:) ಬಿಎಸ್‌ಇ VS ಎನ್‌ಎಸ್‌ಇ: ಭಾರತದ ಆಧುನಿಕ ಮಾರುಕಟ್ಟೆಯನ್ನು ರೂಪಿಸಿದ ಸೈಲೆಂಟ್ ವಾರ್
(BSE V/S NSE:) ಒಂದೇ ಮಾರುಕಟ್ಟೆ, ಎರಡು ದಾರಿಗೆ ಬಂದ ಕಥೆ…
ಭಾರತೀಯ ಷೇರುಮಾರುಕಟ್ಟೆಯ ಇಂದಿನ ಶಕ್ತಿ ಮತ್ತು ವೇಗದ ಹಿಂದಿರುವ ಎರಡು ದೈತ್ಯ ಸಂಸ್ಥೆಗಳ ಸೈಲೆಂಟ್ ವಾರ್ ಬಹುಶಃ ಬಹುತೇಕ ಜನರಿಗೆ ತಿಳಿದಿಲ್ಲ — ಬಿಎಸ್‌ಇ ನಮ್ಮ ದೇಶದ ಅತ್ಯಂತ ಹಳೆಯ ಮಾರುಕಟ್ಟೆ ಸಂಸ್ಥೆ, ಹಾಗೂ ಏನ್ಎಸ್ ಸಿ ಮತ್ತೊಂದು ಅತ್ಯಂತ ಆಧುನಿಕ ಮಾರುಕಟ್ಟೆ. ಈ ಎರಡು ಸಂಸ್ಥೆಗಳ ಗುರಿ ಒಂದೇ — ಟ್ರೇಡರ್‌ಗಳಿಗೆ ವೇಗ, ಭದ್ರತೆ ಮತ್ತು ಪಾರದರ್ಶಕತೆಯನ್ನು ಒದಗಿಸುವುದು. ಆದರೆ ಈ ಸಂಸ್ಥೆಗಳ ಆರಂಭದ ಹಿಂದೆ ಇದ್ದ ರಾಜಕೀಯ, ತಾಂತ್ರಿಕ ಮತ್ತು ಹಣಕಾಸಿನ ಒತ್ತಡಗಳು ಇಂದು ಕೂಡ ನಮ್ಮಲ್ಲಿ ಕುತೂಹಲ ಕೆರಳಿಸುತ್ತವೆ.
ಬಿಎಸ್‌ಇ: 140 ವರ್ಷಗಳ ಪೈಪೋಟಿ ಹೇಗೆ ಸವಾಲಾಗಿ ಪರಿಣಮಿಸಿತು?
ಏಷ್ಯಾದ ಅತ್ಯಂತ ಹಳೆಯ ಸ್ಟಾಕ್ ಎಕ್ಸ್‌ಚೇಂಜ್ ಆಗಿರುವ ಬಿಎಸ್‌ಇ, 1875ರಲ್ಲಿ ಬಾಂಬೆ ನಗರದ ಒಂದು ಮರದ ಕೆಳಗೆ ಆರಂಭವಾದುದು,ಆದರೆ ಇದೇ ಬಿಎಸ್‌ಇ, ಹಲವಾರು ದಶಕಗಳ ಕಾಲ ‘ಕ್ಲೋಸ್‌ಡ್ ಕ್ಲಬ್’ ಆಗಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಆರಂಭದ ದಿನಗಳಲ್ಲಿ ಕೆಲವೇ ಆಯ್ದ ಬ್ರೋಕರ್‌ಗಳು ಹೂಡಿಕೆ ಮತ್ತು ವ್ಯವಹಾರ ನಡೆಸುತ್ತಿದ್ದರು, ನವೀನ ಹೂಡಿಕೆದಾರರಿಗೆ ಅವಕಾಶ ಕಡಿಮೆ ಇತ್ತು. ಈ ‘ಒಲ್ಡ್ ಸ್ಕೂಲ್’ ವಿಧಾನವೇ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕ್ರಾಂತಿಗೆ ಕಾರಣವಾಯಿತು.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ
ಎನ್‌ಎಸ್‌ಇ: ಮೌನವಾಗಿ ಬಂತು ತಂತ್ರಜ್ಞಾನದ ಬಿರುಗಾಳಿ…
(BSE V/S NSE:) 1992–93ರ ಭ್ರಷ್ಟಾಚಾರ ಮತ್ತು ಹರ್ಷದ್ ಮೆಹ್ತಾ ಸ್ಕ್ಯಾಂಡಲ್ ನಂತರ, ಮಾರುಕಟ್ಟೆಗೆ ಹೊಸ ನಿಯಮ, ಹೊಸ ಶಿಸ್ತು ಮತ್ತು ಹೊಸ ತಂತ್ರಜ್ಞಾನದ ಅನಿವಾರ್ಯತೆ ಉಂಟಾಯಿತು. ಈ ಸಮಯದಲ್ಲಿ ಜನ್ಮತಳೆದ ಸಂಸ್ಥೆ ಎನ್‌ಎಸ್‌ಇ — ಸಂಪೂರ್ಣ ಕಂಪ್ಯೂಟರೈಸ್‌ಡ್, ಪಾರದರ್ಶಕ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಮಾರುಕಟ್ಟೆಯ ಒಂದು ವಿಭಾಗವಾಗಿ ಬೆಳೆಯಿತು. ಎಲ್ಲರೂ ನೋಡುತ್ತಿದ್ದಂತೆಯೇ, ಸಂಸ್ಥೆ ಜನ್ಮತಳೆದ ಒಂದು ವರ್ಷದೊಳಗೆ ಬಿಎಸ್‌ಇ ಗೆ ನೇರ ಕಾಂಪಿಟೇಟರ್ ಆಯಿತು. ಬ್ರೋಕರ್‌ಗಳ ‘ಕೈಸಿಗ್ನಲ್’ ಮೂಲಕ ಟ್ರೇಡ್ ಮಾಡುವ ಯುಗವನ್ನು ಅಂತ್ಯಗೊಳಿಸಿ, ಕೀವೋರ್ಡ್ ಮತ್ತು ಸರ್ವರ್‌ಗಳ ದಶಕವನ್ನು ಶುರುಮಾಡಿತು.
ಎರಡು ದೈತ್ಯ ಸಂಸ್ಥೆಗಳ ಪೈಪೋಟಿಯಿಂದ ಯಾರಿಗೆ ಲಾಭ?
ಕಾಲಾಂತರದಲ್ಲಿ ಬಿಎಸ್‌ಇ ಸಹ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೊಸ ಮತ್ತು ವೇಗದ ಟ್ರೇಡಿಂಗ್ ಪ್ಲಾಟ್‌ಫಾರ್ಮ್, ಕಂಪನಿಗಳ ಪಟ್ಟಿಯ ಸುಧಾರಣೆ ಮತ್ತು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಎನ್‌ಎಸ್‌ಇ ಮತ್ತೆ ಹೊಸ ಉತ್ಪನ್ನಗಳು, ಡೆರಿವೇಟಿವ್ಸ್ ಮತ್ತು ತಂತ್ರಜ್ಞಾನದಿಂದ ಮಾರುಕಟ್ಟೆಯನ್ನು ಇನ್ನಷ್ಟು ಬಲಪಡಿಸಿತು. ಈ ಸೈಲೆಂಟ್ ವಾರ್ ನ ನಿಜವಾದ ಲಾಭ ಹೂಡಿಕೆದಾರರಿಗೆ ತಲುಪಿತು – ಹೆಚ್ಚಿನ ವೇಗ, ಕಡಿಮೆ ವೆಚ್ಚ ಮತ್ತು ಉತ್ತಮ ಪಾರದರ್ಶಕತೆ.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!
ಇಂದಿನ ಮಾರುಕಟ್ಟೆ: ಯಾರು ಬಲಿಷ್ಠ? ಉತ್ತರ ನಿಮ್ಮ ಕೈಯಲ್ಲಿದೆ…
ಇಂದು ಎನ್‌ಎಸ್‌ಇ ವ್ಯಾಪಾರ ಪ್ರಮಾಣದಲ್ಲಿ ಮುನ್ನಡೆದಲ್ಲಿದ್ದರೂ, ಬಿಎಸ್‌ಇ ತನ್ನ ಭಾರಿ ಪರಂಪರೆ ಮತ್ತು ಹೊಸ ತಂತ್ರಜ್ಞಾನಗಳ ಮೂಲಕ ಮತ್ತೆ ಹೊಸ ರೂಪವನ್ನು ತಳೆದಿದೆ. ಹೂಡಿಕೆದಾರರಿಗೆ ಇಂದು ಎರಡು ಮಾರ್ಗ ಮತ್ತು ಎರಡು ಅವಕಾಶಗಳಿವೆ. ಆದರೆ ಇವೆರಡೂ ಸೇರಿ, ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನಾಗಿಸುತ್ತಿವೆ — ಇದು ಬಹುತೇಕ ಜನರಿಗೆ ತಿಳಿಯದ ಅಚ್ಚರಿಯ ಸಂಗತಿ.
Article by Sachin
(Founder at Market Marga, Subsidiary of Mind Bridge Academy)
(BSE V/S NSE:) ಷೇರು ಮಾರುಕಟ್ಟೆಯ ಕುರಿತ ಹೆಚ್ಚಿನ ಮಾಹಿತಿ, ಕಲಿಕೆ ಮತ್ತು ನುರಿತ ಹೂಡಿಕೆದಾರಿಂದ ಈ ಬಗೆಗಿನ ಇನ್ನಷ್ಟು ವಿಷಯಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಉಚಿತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿರಿ.
https://chat.whatsapp.com/EPQ3IZ3QTsDJRHZWRsq7xa?mode=wwt

ಇತ್ತೀಚಿನ ಜನಪ್ರಿಯ ಸುದ್ದಿಗಳು (BSE V/S NSE:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





