She-Mart Scheme: ಮಹಿಳಾ ಉದ್ಯಮಿಗಳಿಗಾಗಿ ಹೊಸ ವೇದಿಕೆ ಆರಂಭ

0
34

She-Mart Scheme: ಕೇಂದ್ರ ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ ‘ಶಿ-ಮಾರ್ಟ್’ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಿದೆ. ಇದು ಮಹಿಳೆಯರ ಸ್ವಾವಲಂಬನೆ ಮತ್ತು ಆದಾಯ ಹೆಚ್ಚಳಕ್ಕೆ ನೆರವಾಗಲಿದೆ. ಸ್ವ-ಸಹಾಯ ಗುಂಪುಗಳ ಮೂಲಕ ಸಮುದಾಯ ಮಾಲೀಕತ್ವದ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಈ ಮಳಿಗೆಗಳು ಮಹಿಳಾ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ, ಬ್ರ್ಯಾಂಡಿಂಗ್ ಮತ್ತು ಸುಸ್ಥಿರ ಆದಾಯವನ್ನು ಒದಗಿಸಲಿವೆ. ತಂತ್ರಜ್ಞಾನದ ಸಹಾಯದಿಂದ ಮಧ್ಯವರ್ತಿಗಳಿಲ್ಲದೆ ನೇರ ಮಾರಾಟಕ್ಕೆ ಒತ್ತು ನೀಡಲಾಗುವುದು.

ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಯೋಜನೆಯೊಂದನ್ನು ಘೋಷಿಸಿದೆ. ಲಕ್ಷಾಧಿಪತಿ ದೀದಿ ಯೋಜನೆಯ ಯಶಸ್ಸಿನ ಬಳಿಕ ಮಹಿಳೆಯರನ್ನು ಉದ್ಯಮದಾರರನ್ನಾಗಿಸುವ ಉದ್ದೇಶದೊಂದಿಗೆ ಶಿ ಮಾರ್ಟ್‌ ಅಥವಾ ಸ್ವ-ಸಹಾಯ ವಾಣಿಜ್ಯೋದ್ಯಮಿ ಮಾರ್ಟ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುವ ಮೂಲಕ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಕ್ಲಸ್ಟರ್‌ ಮಟ್ಟದಲ್ಲಿ ಶಿ ಮಾರ್ಟ್‌ ಆರಂಭಿಸಲು ಸರ್ಕಾರ ನೆರವು ನೀಡಲಿದೆ. ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಪ್ರೋತ್ಸಾಹದ ಜೊತೆಗೆ ಅವರ ಆದಾಯ ಹೆಚ್ಚಿಸುವುದು ಯೋಜನೆಯ ಗುರಿಯಾಗಿದೆ.


ನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ


ಭಾರತದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರವು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳೆಂದರೆ ‘ಶಿ-ಮಾರ್ಟ್’ (She-Mart). ಮಹಿಳಾ ಸಬಲೀಕರಣದ ಉದ್ದೇಶ ಹೊಂದಿರುವ ಈ ಯೋಜನೆಗ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರ ಜೀವನದಲ್ಲಿ ಹೊಸ ಆಶಾದೀಪವಾಗಿ ಮೂಡಿಬಂದಿವೆ.

ಮಹಿಳೆಯರಿಗೆ ಯೋಜನೆಯಿಂದಾಗುವ ಲಾಭಗಳು:
* ಮಹಿಳೆಯರು ತಾವು ತಯಾರಿಸಿದ ಹಪ್ಪಳ, ಸ್ಯಾಂಡಲ್, ಕರಕುಶಲ ವಸ್ತುಗಳು ಅಥವಾ ಬಟ್ಟೆಗಳನ್ನು ನೇರವಾಗಿ ಮಾರಾಟ ಮಾಡಬಹುದು. ಇದರಿಂದ ಹೆಚ್ಚಿನ ಲಾಭ ಅವರ ಕೈ ಸೇರುತ್ತದೆ.

* ಶಿ-ಮಾರ್ಟ್ ಮೂಲಕ ಇ-ಕಾಮರ್ಸ್ (E-commerce) ಸೌಲಭ್ಯ ಸಿಗುವುದರಿಂದ, ಗ್ರಾಮೀಣ ಭಾಗದ ಮಹಿಳೆಯರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಲಭ್ಯವಾಗುತ್ತವೆ.

* ಉತ್ಪನ್ನಗಳನ್ನು ಆಕರ್ಷಕವಾಗಿ ಪ್ಯಾಕ್ ಮಾಡುವುದು ಮತ್ತು ಅವುಗಳಿಗೆ ಬ್ರಾಂಡ್ ಹೆಸರು ನೀಡುವ ಬಗ್ಗೆ ಸರ್ಕಾರ ಮಾರ್ಗದರ್ಶನ ನೀಡುತ್ತದೆ.


ನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ


ಶಿ- ಮಾರ್ಟ್ ಅರ್ಜಿಗಳಿಗಾಗಿ ನಿರ್ದಿಷ್ಟ ಆನ್ಲೈನ್ ಪೋರ್ಟಲ್ ಅನ್ನು ಇನ್ನೂ ಪ್ರಾರಂಭಿಸಲಾಗಿಲ್ಲ. ಯೋಜನೆ ಇನ್ನೂ ಆರಂಭಿಕ ಹಂತದಲ್ಲಿ ಇದ್ದು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳು ಪ್ರಕಟಗೊಳ್ಳಬೇಕಿದೆ. ಇವು ಸಮುದಾಯ ಆಧಾರಿತ ಮಳಿಗೆಗಳಾಗಿರುವ ಕಾರಣ ಯೋಜನೆಗೆ ಸೇರಲು ನೀವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ಥಳೀಯ ಸ್ವ-ಸಹಾಯ ಗುಂಪಿನ ಸದಸ್ಯರಾಗಿರಬೇಕು. ನಿಮ್ಮ ಸ್ವ -ಸಹಾಯ ಗುಂಪುಗಳು ಅಥವಾ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಉದ್ಯಮ ಮಾಲೀಕರಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಸಂಭಾವ್ಯ “ದೀದಿಗಳನ್ನು” ಗುರುತಿಸುತ್ತದೆ. ಆಯ್ದ ಸದಸ್ಯರು ತಮ್ಮ ವ್ಯವಹಾರ ಚಟುವಟಿಕೆಯನ್ನು ವಿವರಿಸುವ “ಲಖ್ಪತಿ ಯೋಜನೆ” ಯನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ ಮತ್ತು ಬೆಂಬಲಕ್ಕಾಗಿ ಒಕ್ಕೂಟಕ್ಕೆ ಪ್ರಸ್ತುತಪಡಿಸಬೇಕಾಗುತ್ತದೆ. ಅರ್ಜಿಗಳು ಮತ್ತು ನಿರ್ವಹಣೆಯು ಪ್ರಾಥಮಿಕವಾಗಿ ಕ್ಲಸ್ಟರ್-ಲೆವೆಲ್ ಫೆಡರೇಶನ್ಸ್ ಮೂಲಕ ನಡೆಯುತ್ತದೆ. ಇದು ಈ ಹೊಸ ಚಿಲ್ಲರೆ ಮಾರುಕಟ್ಟೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

She-Mart Scheme: ಮಹಿಳಾ ಉದ್ಯಮಿಗಳಿಗಾಗಿ ಹೊಸ ವೇದಿಕೆ ಆರಂಭ
She-Mart Scheme: ಮಹಿಳಾ ಉದ್ಯಮಿಗಳಿಗಾಗಿ ಹೊಸ ವೇದಿಕೆ ಆರಂಭ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (She-Mart Scheme:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ