Shakti Scheme: ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಿ

Shakti Scheme: ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಂತೆ ಉಚಿತ ಬಸ್ ಪ್ರಯಾಣವುಳ್ಳ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಉಚಿತ ಪ್ರಯಾಣಕ್ಕೆ ಕಂಡೀಷನ್ ಅನ್ನು ಈಗಾಗಲೇ ಹಾಕಲಾಗಿದೆ. ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ಐಡಿಗಳ (ಮೂಲ ಅಥವಾ ಫೋಟೊಕಾಪಿ) ಹಾರ್ಡ್ ಪ್ರತಿಯನ್ನು ತೆಗೆದುಕೊಂಡು ಹೋಗಬೇಕಿತ್ತು ಆದರೆ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸ ಪ್ರಕಟಣೆಯನ್ನು ಹೊರಡಿಸಿದೆ.

ಇದನ್ನೂ ಓದಿ; ವಯನಾಡಿನಲ್ಲಿ ನಕ್ಸಲರು ಪೊಲೀಸರ ನಡುವೆ ಫೈರಿಂಗ್; ಮಲೆನಾಡಿನ ಈ ಜಿಲ್ಲೆಯಲ್ಲಿ ಹೈ ಅಲರ್ಟ್

ಏನಿದು ಪ್ರಕಟಣೆ:
ಮೊಬೈಲ್ ಫೋನ್ ನಲ್ಲಿ ಡಿಜಿಲಾಕರ್ ಆಯಪ್ ಮೂಲಕ ಸ್ಥಳೀಯ ನಿವಾಸದ ಪುರಾವೆಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 14.11.2023

ದೂರಿನನ್ವಯ ಹೊಸ ಬದಲಾವಣೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣಿಸುವ (Shakti Scheme: ) ಮಹಿಳೆಯರು ಅಧಿಕಾರಿಗಳಿಗೆ ದೂರು ನೀಡಿದ ಹಲವು ಪ್ರಕರಣಗಳು ವರದಿಯಾಗಿವೆ. ತಾವು ಐಡಿಯ ಹಾರ್ಡ್ ಕಾಪಿ ಒಯ್ಯಲು ವಿಫಲವಾದರೆ ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಗಳು ಒತ್ತಾಯಿಸುತ್ತಿದ್ದಾರೆ. ಮೂಲ ಐಡಿ ಅಥವಾ ಫೊಟೊಕಾಪಿಯನ್ನೇ ಕೇಳುತ್ತಿದ್ದಾರೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ; ಚಿನ್ನ ಮತ್ತು ಬೆಳ್ಳಿ ಎರಡೂ ಮತ್ತಷ್ಟು ಅಗ್ಗ; ಇವತ್ತಿನ ದರವೆಷ್ಟು, ಇಲ್ಲಿದೆ ವಿವರ

ಈ ವಿಚಾರವಾಗಿ ನವೆಂಬರ್ 3 ರಂದು ಕೆ.ಎಸ್.ಆರ್.ಟಿ.ಸಿ ಮುಖ್ಯ ಸಂಚಾರ ವ್ಯವಸ್ಥಾಪಕರ ಪತ್ರವನ್ನು ಉಲ್ಲೇಖಿಸಿರುವ ಕೆಕೆಆರ್‌ಟಿಸಿ, ಕಂಡಕ್ಟರ್ ಗಳು ಗುರುತಿನ ಪುರಾವೆಗಳನ್ನು ಹಾರ್ಡ್ ಕಾಪಿಗಳ ಮೂಲಕ (ಒರಿಜಿನಲ್ ಅಥವಾ ಫೋಟೊಕಾಪಿ) ಮತ್ತು ಡಿಜಿಲಾಕರ್ ಮೂಲಕವೂ ಸ್ವೀಕರಿಸಬಹುದು ಎಂಬ ಆದೇಶವಿದೆ. ಇದರ ಹೊರತಾಗಿಯೂ, ಕೆಲವು ಬಸ್ ಕಂಡಕ್ಟರ್ ಗಳ ಬಗ್ಗೆ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಡಿಜಿಲಾಕರ್ ಮೂಲಕ ತೋರಿಸಿರುವ ಪುರಾವೆಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಮತ್ತು ಮಹಿಳಾ ಪ್ರಯಾಣಿಕರಿಗೆ ಅನಗತ್ಯ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಕೆಲವು ಕಂಡಕ್ಟರ್ ಗಳ ವಿರುದ್ಧ ದೂರುಗಳು ಬಂದಿವೆ. ಕಂಡಕ್ಟರ್ ಗಳು ಡಿಜಿಲಾಕರ್ ಮೂಲಕ ಐಡಿ ಪುರಾವೆಗಳನ್ನು ಸ್ವೀಕರಿಸಬೇಕು ಮತ್ತು ಇನ್ನು ಮುಂದೆ ಮಹಿಳಾ ಪ್ರಯಾಣಿಕರು ದೂರು ನೀಡುವಂತಾಗಬಾರದು ಎಂದು ಖಾತರಿಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೆಎಸ್‌ಆರ್‌ಟಿಸಿ ಉಲ್ಲೇಖಿಸಿದೆ.

Shakti Scheme: ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ
Shakti Scheme: ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ

ಹೀಗಾಗಿ ಇನ್ನು ಮುಂದೆ ಮೊಬೈಲ್ ಫೋನ್ ನಲ್ಲಿ ಡಿಜಿಲಾಕರ್ ಆಯಪ್ ಮೂಲಕ ಸ್ಥಳೀಯ ನಿವಾಸದ ಪುರಾವೆಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಪ್ರಮುಖ ಸುದ್ದಿಗಳನ್ನು ಓದಿ

  1.  ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ;  ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ಪರಿಹಾರ ಗೊತ್ತಾ?
  2. ಈ ವರ್ಗದವರಿಗೆ ಗುಡ್ ನ್ಯೂಸ್‌; ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ; ಯಾವುದೆಲ್ಲಾ ಯೋಜನೆಗಳು ಇದೆ? ಅರ್ಜಿ ಸಲ್ಲಿಸುವುದು ಹೇಗೆ?
  3.  ಈ ಬಾರಿ ದೀಪಾವಳಿಗೆ ಗೈಡ್ ಲೈನ್ಸ್​​​ ನೀಡಿದ ಸರ್ಕಾರ; ಪಟಾಕಿ ಮಾರಾಟ, ಸಿಡಿಸಲು ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
  4. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ
  5. ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು
  6. ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಈ ದಿನ ಬರಲಿದೆ; ಅರ್ಜಿ ಸಲ್ಲಿಸುವುದು ಹೇಗೆ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ
  7. ಕೃಷಿಕರಿಗೆ ಸಿಹಿ ಸುದ್ದಿ..!; ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿ ಅನುಮೋದನೆ; ಈ ತಿಂಗಳ ವರೆಗೆ ಸಬ್ಸಿಡಿ ಲಭ್ಯ
  8. 2 ನೇ ವಾರಕ್ಕೆ ಕಾಲಿಟ್ಟ ಜಲಪಾತ ಸಿನಿಮಾ; ರಿವ್ಯೂಸ್ ಮತ್ತು ರೇಟಿಂಗ್ ನ ರೇಸ್ ನಲ್ಲೂ ಮುಂದಿರುವ ಪರಿಸರ ಕಾಳಜಿ ಸಿನಿಮಾ
  9. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ?; ಯಾವುದೆಲ್ಲಾ ದಾಖಲೆಗಳು ಬೇಕು? ಅರ್ಹತೆ ಏನು?
  10. ಕಾಂಗ್ರೆಸ್ ಸರ್ಕಾರ ಬಂದ ನಂತರ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ – ಕುಂಕುಮವನ್ನು ನಿಷೇಧಿಸಲಾಯಿತೆ?; ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಆಕ್ರೋಶ
  11. ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್‌ ಕಾರ್ಡ್‌ ರದ್ದು | ಕಾರಣವೇನು?
  12.  ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ
  13. ಯುಸಿಐಎಲ್‌ ನಿಂದ ಉದ್ಯೋಗಾವಕಾಶ; ಟ್ರೇಡ್‌ ಅಪ್ರೆಂಟಿಸ್‌ ಪೋಸ್ಟ್‌ ಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
  14. ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್; ಏನಿದು ಎಮರ್ಜೆನ್ಸಿ ಟೆಸ್ಟ್ ಮೆಸೇಜ್ ಅಲರ್ಟ್; ಕಾರಣಗಳೇನಿರಬಹುದು? ಇಲ್ಲಿದೆ ಇದರ ಹಿಂದಿನ ಗುಟ್ಟು
  15. ರೈತರಿಗೆ ಸಿಹಿ ಸುದ್ದಿ;ಪಿಎಂ ಕಿಸಾನ್ ಹೊಸ ಕಂತಿನ ಹಣ ಈ ತಿಂಗಳಲ್ಲೇ ಬಿಡುಗಡೆ?
  16. ರಾಜ್ಯದಲ್ಲಿ ಪಟಾಕಿ ಬ್ಯಾನ್;ದೀಪಾವಳಿಗೂ ಪಟಾಕಿ ಹೊಡೀಬಾರದಾ?;ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
  17. ನಿಮಗೆ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವಾ?; ನಿಮ್ಮ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
  18. ಅಡಿಕೆ ಸಿಪ್ಪೆಯಿಂದ ಅಂದದ ಕೋಟು; ಕೊಳೆತು ಮಣ್ಣಿಗೆ ಸೇರುವ ಅಡಿಕೆ ಸಿಪ್ಪೆಯನ್ನು ಒಳ್ಳೆಯ ಉಪಯೋಗಕ್ಕೆ ತರುವ ಕೆಲಸ; ಗ್ರಾಮೀಣ ಮಹಿಳೆಯರ ಉದ್ಯೋಗ ಸೃಷ್ಟಿಗೂ ಅನುಕೂಲ
  19. ಬಿಪಿಎಲ್‌ ಕಾರ್ಡ್‌ ತಿದ್ದುಪಡಿಗೆ ಮತ್ತೊಂದು ಅವಕಾಶ;ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇