(Pmkisan) ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತಿನಲ್ಲಿ ತಲಾ 2000 ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ 17 ಕಂತಿನ ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ರೈತರು 18 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 18 ನೇ ಕಂತಿನ ಅರ್ಹರ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಎಂದು ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ
ಇನ್ನು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವ ರೈತರು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ ಮುಖಾಂತರ ನೊಂದಾಯಿಸಬಹುದು. ಅಥವಾ ನಿಮ್ಮ ಗ್ರಾಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
ಪಿಎಂ ಕಿಸಾನ್ ಯೋಜನೆಯ ವೆಬ್ ಸೈಟ್ ವಿಳಾಸ:
* ಕೇಂದ್ರ ಸರ್ಕಾರದ pmkisan.gov.in ಜಾಲತಾಣಕ್ಕೆ ಭೇಟಿ ನೀಡಿ
* ಅಲ್ಲಿ NEW FARMER REGISTRATION ಎಂಬ ಐಕಾನ್ ಕ್ಲಿಕ್ ಮಾಡಿ,
* ಆಗ ತೆರೆಯಲ್ಪಡುವ NEW FARMER REGISTRATION FORM ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ಹೆಸರನ್ನು ನೋಂದಾಯಿಸಬಹುದು.
ಇದನ್ನೂ ಓದಿ: HDFC Parivarthan ನಿಂದ 75,000 ಸ್ಕಾಲರ್ಶಿಪ್; ಒಂದೇ ಕ್ಲಿಕ್ ನಲ್ಲಿ Apply ಮಾಡಿ, ಹಣ ಪಡೆಯಿರಿ
ಅದು ಸಾಧ್ಯವಾಗಲಿದ್ದರೆ, ಪ್ರತಿ ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ (ಸಿ.ಎಸ್.ಸಿ.) ತಮ್ಮ ಹೆಸರನ್ನು ನೋಂದಾಯಿಸಬಹುದು.
ರೈತರಾಗಿದ್ದರೂ ಇವರು ಈ ಯೋಜನೆಗೆ ಅರ್ಹರಲ್ಲ:
* ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು.
* ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಗಳು ಅಥವಾ ಉದ್ಯೋಗಿಗಳು
* ಕೇಂದ್ರ ಅಥವಾ ರಾಜ್ಯ ಸಚಿವಾಲಯಗಳು, ಕಚೇರಿಗಳು ಹಾಗೂ ಇಲಾಖೆಗಳಲ್ಲಿ ಹಾಗೂ ಅವುಗಳ ಅಧೀನದಲ್ಲಿರುವ ಸಂಸ್ಥೆಗಳ ಸಿಬ್ಬಂದಿ
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾರ್ವಜನಿಕ ಸಂಸ್ಥೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಚೇರಿ, ಸ್ವಾಯತ್ತ ಸಂಸ್ಥೆ ಅಥವಾ ಅವುಗಳ ಅಧೀನದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿನ ಸಿಬ್ಬಂದಿ (ಬಹು ಕಾರ್ಯೋದ್ದೇಶದ ಸಿಬ್ಬಂದಿ, 4ನೇ ದರ್ಜೆಯ ನೌಕರರು, ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ).
ಇದನ್ನೂ ಓದಿ: ರೈತರಿಗಾಗಿ ಕೃಷಿ ಸೆಂಟ್ರಲ್ App ಬಿಡುಗಡೆ!; ಸಮಗ್ರ ಮಾಹಿತಿಯನ್ನು ಈ ಆ್ಯಪ್ ಮುಖಾಂತರ ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಿ..!
ನೀವು ಫಲಾನುಭವಿಗಳೇ ಎಂಬುದನ್ನು ಪರೀಕ್ಷಿಸಲು ಹೀಗೆ ಮಾಡಿ:
* ಪಿಎಂ ಕಿಸಾನ್ ಅಧಿಕೃತ ಜಾಲತಾಣಕ್ಕೆ pmkisan.gov.in ಭೇಟಿ ನೀಡಿ.
* Farmers corner ಅಡಿಯಲ್ಲಿ Beneficiary List ಕ್ಲಿಕ್ ಮಾಡಿ.
* ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್, ಹಳ್ಳಿಯನ್ನು ಆಯ್ಕೆ ಮಾಡಿ.
* ಆನಂತರ, Get Report ಟ್ಯಾಬ್ ಒತ್ತಿ.
ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ 18 ಕಂತಿನ ಹಣ ಜಮಾ ಆಗುತ್ತದೆ.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಕೇಂದ್ರದಿಂದ ಬಂಪರ್ ಗಿಫ್ಟ್! ಇಲ್ಲಿದೆ ನೋಡಿ
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಶೀಘ್ರವೇ ರಾಜ್ಯದಲ್ಲಿ ಟೀ ಪುಡಿ ಬ್ಯಾನ್
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ಮತ್ತೊಂದು ಹೊಸ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ
- ಪಿಎಂ ಕಿಸಾನ್ ಯೋಜನೆ; 6,000 ಬದಲು 8,000ಕ್ಕೆ ಹೆಚ್ಚಿಸುವ ಸಾಧ್ಯತೆ; ಯೋಜನೆಗೆ ನೋಂದಣಿ ಹೇಗೆ?, ಇಲ್ಲಿದೆ ಮಾಹಿತಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಗ್ರಾಮ ಪಂಚಾಯತ್ ನಲ್ಲಿ ಜಾಬ್ ಆಫರ್; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ; 15,000 ಸಂಬಳ
- ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ
- ಕರ್ನಾಟಕ ಬ್ಯಾಂಕ್ ನಲ್ಲಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ






