Setubandha: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೇತುಬಂಧ ಕಡ್ಡಾಯ

(Setubandha: ) Bengaluru: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ 29ರಿಂದ ಅಧಿಕೃತವಾಗಿ ಆರಂಭವಾಗಲಿವೆ. ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳ ಕಲಿಕಾ ನ್ಯೂನತೆಗಳನ್ನು ಗುರುತಿಸಿ ಸರಿಪಡಿಸುವ ಉದ್ದೇಶದಿಂದ 1ರಿಂದ 10ನೇ ತರಗತಿಯವರೆಗೆ ‘ಸೇತುಬಂಧ’ ಉಪಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು Department of State Educational Research and Training (DSERT) ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳ ವಯೋಮಾನ ಮತ್ತು ತರಗತಿಗನುಗುಣವಾಗಿ ಅವರ ಕಲಿಕಾ ಮಟ್ಟವನ್ನು ಅಳೆಯುವುದು ಹಾಗೂ ಹಿಂದಿನ ವರ್ಷದ ಕಲಿಕೆ ಮತ್ತು ಹೊಸ ವರ್ಷದ ಪಾಠಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ತರಗತಿವಾರು ಚಟುವಟಿಕೆಗಳ ಅವಧಿ
ನಲಿ-ಕಲಿ 1ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾದ ಮೊದಲ 30 ದಿನಗಳ ಕಾಲ ‘ವಿದ್ಯಾಪ್ರವೇಶ’ ಕಾರ್ಯಕ್ರಮ ಜಾರಿಯಲ್ಲಿರಲಿದೆ.

2ರಿಂದ 10ನೇ ತರಗತಿವರೆಗೆ ಶಾಲೆ ಆರಂಭವಾದ ಮೊದಲ 15 ದಿನಗಳು ಕಡ್ಡಾಯವಾಗಿ ಸೇತುಬಂಧ ಚಟುವಟಿಕೆಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.

ಇದೇ ವೇಳೆ, ದ್ವಿಭಾಷಾ ಶಾಲೆಗಳ 1ರಿಂದ 5ನೇ ತರಗತಿಗಳಿಗೆ 30 ದಿನಗಳ ಕಾಲ ‘ಟ್ರಾನ್ಸಿಷನ್ ಪಿರಿಯಡ್’ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಡಯಾಗ್ನೋಸ್ಟಿಕ್ ಟೆಸ್ಟ್ ಕಡ್ಡಾಯ
ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸಲು ಶಿಕ್ಷಕರು ಪೂರ್ವ ಪರೀಕ್ಷೆ (Diagnostic Test) ಮತ್ತು ಸೇತುಬಂಧದ ಬಳಿಕ ಸಾಫಲ್ಯ ಪರೀಕ್ಷೆ ನಡೆಸಬೇಕಾಗಿದೆ.

ಪ್ರಶ್ನೆ ಪತ್ರಿಕೆಯಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಕುರಿತ 4 ಪ್ರಶ್ನೆಗಳು ಹಾಗೂ ತರಗತಿವಾರು ಕಲಿಕಾ ಫಲಿತಾಂಶಗಳಿಗೆ ಸಂಬಂಧಿಸಿದ 6 ಪ್ರಶ್ನೆಗಳು ಸೇರಿ ಒಟ್ಟು 10 ಪ್ರಶ್ನೆಗಳಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪೂರ್ಣ ಪ್ರಮಾಣದಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ‘A’ ಗ್ರೇಡ್ ಹಾಗೂ ಅಪೂರ್ಣ ಅಥವಾ ಉತ್ತರಿಸದ ವಿದ್ಯಾರ್ಥಿಗಳಿಗೆ ‘B’ ಗ್ರೇಡ್ ನೀಡಬೇಕು. ಈ ಮಾಹಿತಿಯನ್ನು ಶಾಲಾ ಶೈಕ್ಷಣಿಕ ಯೋಜನೆ (SAP) ಯಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ.

‘B’ ಗ್ರೇಡ್ ಪಡೆದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸಿ ಅವರಿಗೆ ಪರಿಹಾರ ಬೋಧನೆ (Remedial Teaching) ನೀಡುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

SATS ನಲ್ಲಿ ಮಾಹಿತಿ ಅಪ್ಡೇಟ್ ಕಡ್ಡಾಯ
ಪ್ರತಿ ವಿದ್ಯಾರ್ಥಿಯ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಯ ಅಂಕಗಳು ಹಾಗೂ ಪ್ರಗತಿಯನ್ನು ಶಿಕ್ಷಕರು SAP ನಮೂನೆಗಳಲ್ಲಿ ಮತ್ತು Student Achievement Tracking System (SATS) ತಂತ್ರಾಂಶದಲ್ಲಿ ಪ್ರತಿ ತಿಂಗಳು ದಾಖಲಿಸಬೇಕು.

ಅಪೇಕ್ಷಿತ ಕಲಿಕಾ ಫಲಿತಾಂಶಗಳನ್ನು ಸಾಧಿಸದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಮತ್ತು ಡಿಸೆಂಬರ್ ಅಂತ್ಯದಲ್ಲಿ ಮರುಮೌಲ್ಯಮಾಪನ ನಡೆಸಿ ಪ್ರಗತಿಯನ್ನು ದಾಖಲಿಸಬೇಕಾಗಿದೆ.

ಅಧಿಕಾರಿಗಳ ಮೇಲ್ವಿಚಾರಣೆ ಕಡ್ಡಾಯ
ಸೇತುಬಂಧ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕು ಮತ್ತು ಕ್ಲಸ್ಟರ್ ಮಟ್ಟದ ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ.

ಉಪನಿರ್ದೇಶಕರು (DDPI) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಶಾಲೆಗಳಿಗೆ ಭೇಟಿ ನೀಡಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಬೇಕಾಗಿದೆ. ಕ್ಲಸ್ಟರ್ ಹಂತದಲ್ಲಿ ಸಿಆರ್‌ಪಿ (CRP) ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಸೇತುಬಂಧ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯೋಜನೆಯ ಪ್ರಗತಿ ವರದಿಯನ್ನು ನಿಯಮಿತವಾಗಿ ಸಿದ್ಧಪಡಿಸಿ DSERT ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.

Setubandha: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೇತುಬಂಧ ಕಡ್ಡಾಯ
Setubandha: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೇತುಬಂಧ ಕಡ್ಡಾಯ

ಇತ್ತೀಚಿನ ಜನಪ್ರಿಯ ಸುದ್ದಿಗಳು (Setubandha: )

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?