e-Asset Form: ಸೇವಾ ಕೇಂದ್ರಗಳಲ್ಲೇ ಸಿಗಲಿದೆ ಇ-ಸ್ವತ್ತು ಫಾರ್ಮ್

(e-Asset Form:) Bengaluru: ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಆಸ್ತಿ ಹಕ್ಕು ದಾಖಲೆಗಳಾದ ನಮೂನೆ 11ಎ ಮತ್ತು 11ಬಿ (Form 11A & 11B) ಇ-ಸ್ವತ್ತು ದಾಖಲಾತಿಗಳನ್ನು ಪಡೆಯಲು ಇನ್ನು ಮುಂದೆ ಕಚೇರಿಗಳ ಸುತ್ತ ಅಲೆದಾಡಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತೊಂದರೆ ಅನುಭವಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.

ಇ-ಸ್ವತ್ತು ತಂತ್ರಾಂಶದ ಮೂಲಕ ದಾಖಲೆಗಳನ್ನು ಸುಲಭವಾಗಿ ಪಡೆಯಲು ರಾಜ್ಯದ ವಿವಿಧ ನಾಗರಿಕ ಸೇವಾ ಕೇಂದ್ರಗಳಲ್ಲಿ ಮುಖಾಮುಖಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಎಲ್ಲಿ ಅರ್ಜಿ ಸಲ್ಲಿಸಬಹುದು?:
ಸಾರ್ವಜನಿಕರು ತಮ್ಮ ಆಸ್ತಿ ಹಕ್ಕು ದಾಖಲೆಗಳನ್ನು ಪಡೆಯಲು ಕೆಳಕಂಡ ಅಧಿಕೃತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ:

ಗ್ರಾಮ ಪಂಚಾಯಿತಿಯ ‘ಬಾಪೂಜಿ ಸೇವಾ ಕೇಂದ್ರ’
Karnataka One ಕೇಂದ್ರಗಳು
Bangalore One ಕೇಂದ್ರಗಳು
Grama One ನಾಗರಿಕ ಸೇವಾ ಕೇಂದ್ರಗಳು
ಅರ್ಜಿ ಶುಲ್ಕ ಎಷ್ಟು?

ಸರ್ಕಾರ ನಿಗದಿಪಡಿಸಿರುವ ಅಧಿಕೃತ ಶುಲ್ಕ ವಿವರಗಳು ಹೀಗಿವೆ:

ಸೇವೆ:
ಕರ್ನಾಟಕ ಒನ್ / ಬೆಂಗಳೂರು ಒನ್ / ಗ್ರಾಮ ಒನ್ ಅರ್ಜಿ ಶುಲ್ಕ- ₹45
ಸ್ಕ್ಯಾನಿಂಗ್ ಮತ್ತು ಪ್ರಿಂಟಿಂಗ್ ವೆಚ್ಚ (ಪ್ರತಿ ಪುಟಕ್ಕೆ)- ₹5
ದಲ್ಲಾಳಿಗಳಿಂದ ದೂರವಿರಿ

“ನಿಮ್ಮ ಆಸ್ತಿ, ನಿಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಅಥವಾ ದಲ್ಲಾಳಿಗಳ ಮೊರೆ ಹೋಗದೇ, ನೇರವಾಗಿ ಅಧಿಕೃತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ಶುಲ್ಕ ಪಾವತಿಸಿ ಇ-ಸ್ವತ್ತು ದಾಖಲಾತಿಗಳನ್ನು ಪಡೆಯಬಹುದು ಎಂದು ಇಲಾಖೆ ಮನವಿ ಮಾಡಿದೆ.

ಸಹಾಯವಾಣಿ ಸಂಖ್ಯೆ:
ಇ-ಸ್ವತ್ತು ಅರ್ಜಿ ಸಲ್ಲಿಕೆ, ತಾಂತ್ರಿಕ ತೊಂದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಸಹಾಯವಾಣಿ ಸಂಖ್ಯೆ 9483476000 ಅನ್ನು ಸಂಪರ್ಕಿಸಬಹುದಾಗಿದೆ.

e-Asset Form: ಸೇವಾ ಕೇಂದ್ರಗಳಲ್ಲೇ ಸಿಗಲಿದೆ ಇ-ಸ್ವತ್ತು ಫಾರ್ಮ್
e-Asset Form: ಸೇವಾ ಕೇಂದ್ರಗಳಲ್ಲೇ ಸಿಗಲಿದೆ ಇ-ಸ್ವತ್ತು ಫಾರ್ಮ್

ಇತ್ತೀಚಿನ ಜನಪ್ರಿಯ ಸುದ್ದಿಗಳು (e-Asset Form:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?