PM KMY: ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ!

(PM KMY) ರಾಜ್ಯ ಹಾಗೂ ಕೇಂದ್ರದಿಂದ ರೈತರ ಅನುಕೂಲಕ್ಕಾಗಿ ಬರ, ಬೆಳೆಹಾನಿಯಂತಹ ಪರಿಸ್ಥಿತಿಯನ್ನು ಎದುರಿಸಲು ಹಲವಾರು ಯೋಜನೆಗಳು ಜಾರಿಗೊಳಿಸಿದೆ. ಇದೀಗ ಕೇಂದ್ರ ಸರ್ಕಾರ 60 ವರ್ಷ ಮೇಲ್ಪಟ್ಟ ರೈತರ ಅನುಕೂಲಕ್ಕಾಗಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ನೀವು ಪ್ರತಿ ತಿಂಗಳು 3000 ರೂ ಅನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವುದು ಯೋಜನೆ? ಇದಕ್ಕೆ ಯಾರು ಅರ್ಹರು ಅರ್ಜಿ ಸಲ್ಲಿಕೆ ಹೇಗೆ ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್!; ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

(PM KMY) ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ!:(Pradhan Mantri Kisan Maan Dhan Yojana)
ಕೇಂದ್ರ ಸರ್ಕಾರದ ರೈತರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಪ್ರಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ನೆರವಾಗುವ ಯೋಜನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ರೈತರಿಗೆ ಪಿಂಚಣಿ ನೀಡುವ ಯೋಜನೆ ಆಗಿದೆ. ರೈತರು ಪ್ರತಿ ತಿಂಗಳು ಅತಿ ಕಡಿಮೆ ಹೂಡಿಕೆ ಮಾಡಿ 60 ವರ್ಷಗಳ ಬಳಿಕ ಪ್ರತಿ ತಿಂಗಳು 3 ಸಾವಿರ ರೂಪಾಯಿಗಳ ಪಿಂಚಣಿಯನ್ನು ಸುಲಭವಾಗಿ ಸರ್ಕಾರದಿಂದಲೇ ಪಡೆದುಕೊಳ್ಳಬಹುದು.

ಇದನ್ನೂ ಓದಿ; ಸೌಥ್ ಈಸ್ಟ್‌ ಸೆಂಟ್ರಲ್‌ ರೈಲ್ವೆಯಲ್ಲಿ ಉದ್ಯೋಗ; 733 ಹುದ್ದೆಗೆ ಅರ್ಜಿ ಆಹ್ವಾನ

ಯಾರು ಅರ್ಹರು?:
* ರೈತರಿಗಾಗಿ ಜಾರಿಗೆ ಬಂದಿರುವ ಯೋಜನೆಯಾಗಿದೆ.
* 18 ರಿಂದ 40 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದು.
* ಕಡಿಮೆ ವಯಸ್ಸಿನಲ್ಲಿ ಕಡಿಮೆ ಪ್ರೀಮಿಯಂ ಪಾವತಿ ಮಾಡಿ 60 ವರ್ಷಕ್ಕೆ 3000 ಪಡೆದುಕೊಳ್ಳಬಹುದು.
* ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಗೆ ಖಾತೆ ತೆರೆಯಬಹುದು.

ಇದನ್ನೂ ಓದಿ; ಈ ಯೋಜನೆಯಡಿಯಲ್ಲಿ ಉಚಿತ ಮನೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ, ಇಲ್ಲಿದೆ ಡಿಟೈಲ್ಸ್

(PM KMY) ಹೂಡಿಕೆಯ ಮೊತ್ತ ಎಷ್ಟು?
* 18 ರಿಂದ 40 ವರ್ಷ ವಯಸ್ಸಿನ ಒಳಗಿನವರು ಈ ಯೋಜನೆಗೆ ಹೂಡಿಕೆ ಮಾಡಬಹುದು. ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಪ್ರೀಮಿಯಂ ಮತ್ತು ನಿರ್ಧಾರವಾಗುತ್ತದೆ.
* 18 ನೇ ವರ್ಷದಲ್ಲಿ ಹೂಡಿಕೆ ಆರಂಭಿಸುತ್ತೀರಿ ಎಂದಾದರೆ ಮಾಸಿಕ 55 ರೂಪಾಯಿ ಪಾವತಿ ಮಾಡಬೇಕು. 30 ವರ್ಷಕ್ಕೆ ಹೂಡಿಕೆ ಆರಂಭಿಸಿದರೆ ಮಾಸಿಕ 110 ರೂಪಾಯಿಗಳನ್ನು ಪಾವತಿ ಮಾಡಬೇಕು.
40 ವರ್ಷಕ್ಕೆ ಹೂಡಿಕೆ ಆರಂಭಿಸಿದರೆ 220 ಮಾಸಿಕ ಪಾವತಿ ಮಾಡಬೇಕು. ಇದಾದ ಬಳಿಕ 60 ವರ್ಷ ವಯಸ್ಸಾದಾಗ ಮೂರು ಸಾವಿರ ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯಬಹುದು.

ಇದನ್ನೂ ಓದಿ; ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ!; ಹೀಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?;
* ರೈತರು ತಮ್ಮ ಆಧಾರ್ ಕಾರ್ಡ್(Aadhaar card)
* ರೇಷನ್ ಕಾರ್ಡ್ (Ration card)
* ವೋಟರ್ ಐಡಿ (Voter ID)
* ವಯಸ್ಸಿನ ಪ್ರಮಾಣ ಪತ್ರ (Age certificate)

ಇದನ್ನೂ ಓದಿ; ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ; ಜಿಲ್ಲಾ ಮಿಷನ್ ನಿರ್ದೇಶಕರು, ಜೆಂಡರ್ ಸ್ಪೆಷಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಹಾಗಾದರೆ ಅರ್ಜಿ ಸಲ್ಲಿಕೆ ಹೇಗೆ?
ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು https://maandhan.in/ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

PM KMY: ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ!
PM KMY: ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ!

ಪ್ರಮುಖ ಸುದ್ದಿಗಳನ್ನು ಓದಿ

  1. ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
  2. ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
  3. ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
  4. ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
  5. ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
  6. ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
  7. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
  8. ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
  9. ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ