Malnad Special Pathrode: ಮಲೆನಾಡಲ್ಲಿ ಪತ್ರೋಡೆ ಘಮ

Malnad Special Pathrode: ಕರಾವಳಿ, ಮಲ್ನಾಡ್ ಭಾಗಗಳಿಗೆ ಈ ಸಮಯದಲ್ಲಿ ಭೇಟಿ ನೀಡಿದರೆ ಪತ್ರಿಯೊಬ್ಬರ ಮನೆಯಲ್ಲಿ ಖಾದ್ಯಗಳ ಸುವಾಸನೆ ಬರುತ್ತಿರುತ್ತದೆ. ಅದರಲ್ಲೂ ಈ ಸಮಯದಲ್ಲಿ ಮರ ಕೆಸುವಿನ ಪತ್ರೊಡೆ ಸವಿಯಬೇಕು..ವಾವ್! ಎಂಬ ಉದ್ಧಾರ ಬರದೆ ಇರದು.

ಇದನ್ನೂ ಓದಿ; ಕೊಪ್ಪ: ಹಾಸ್ಟೆಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಪತ್ರೋಡೆ ಕಾಡು ಕೆಸುವಿನ ಎಲೆಯಿಂದ ಮಾಡುವ ಖಾದ್ಯ. ಕಾಡಿನಲ್ಲಿರುವ ಮರದ ಪೊಟರೆಯಲ್ಲಿ ಈ ಕೆಸುವು ಹುಟ್ಟುತ್ತದೆ. ಅದನ್ನು ಕೊಯ್ದು, ಸುಚಿಗೊಳಿಸಿ, ಪತ್ರೋಡೆ ತಯಾರಿಸಲಾಗುತ್ತದೆ. ಮೊದಲೇ ಹೇಳಿದಂತೆ ಮರ ಕೆಸುವಿನ ಎಲೆಯನ್ನು ಕೊಲೊಕಾಸಿಯಾ ಎಂದು ಕರೆಯಲಾಗುತ್ತದೆ. ಇದರಿಂದ ತಯಾರಿಸಿದ ಪತ್ರೋಡೆ ಆರೋಗ್ಯಕ್ಕೂ ಉತ್ತಮ ಹಾಗಾಗಿ ಕೇಂದ್ರ ಆಯುಷ್ ಸಚಿವಾಲಯವು ಆಯುಷ್ ಸಿಸ್ಟಮ್ ಆಪ್ ಮೆಡಿಸಿನ್ ನ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳಲ್ಲಿ ಪತ್ರೋಡೆಯು ಒಂದು ಎಂದು ಗುರಿತಿಸಿದೆ.

ಇದನ್ನೂ ಓದಿ; ಶೃಂಗೇರಿ: ಪಿಡಿಒ, ಕಾರ್ಯದರ್ಶಿ ಇಬ್ಬರೂ ಇಲ್ಲದೆ ಅನಾಥವಾದ ಗ್ರಾಮ ಪಂಚಾಯಿತಿ

ಮರದಲ್ಲಿ ಬೆಳೆಯುವ ಸಸ್ಯ:
ಕೆಸು ಸಾಮಾನ್ಯವಾಗಿ ಮನೆಯ ಹಿತ್ತಿಲಲ್ಲಿ, ಗದ್ದೆ, ತೋಟಗಳ ಪಕ್ಕದಲ್ಲಿ ಹೇರಳವಾಗಿ ಬೆಳೆಯುತ್ತದೆ. ಆದರೆ ಪತ್ರೊಡೆಗೆ ಬಳಸುವ ಮರ ಕೆಸು ಹಾಗಲ್ಲ. ಇದು ಮರದಲ್ಲಿ ಬೆಳೆಯುವ ಕಾರಣ ಈ ಹೆಸರು ಬಂದಿದೆ. ದೊಡ್ಡ ದೊಡ್ಡ ಮರಗಳ ಕೊಂಬೆಗಳ ಸಂದುಗಳಲ್ಲಿ, ಅವುಗಳ ಪೊಟರೆಗಳಲ್ಲಿ ಪರಾವಲಂಬಿ ಸಸ್ಯವಾಗಿ ಇದು ಬೆಳೆಯುತ್ತದೆ. ಬೇಸಿಗೆಯಲ್ಲಿ ಗಾಳಿಯ ಮೂಲಕ ಇದರ ಬೀಜ ಪ್ರಸಾರಗೊಂಡು ಮರದ ಪೊಟರೆಗಳಲ್ಲಿ ಸಂಗ್ರಹವಾಗಿದ್ದು, ಮಳೆ ಬೀಳುತ್ತಲೇ ಚಿಗುರಿಗೊಳ್ಳುತ್ತವೆ. ಕೆಲವೊಮ್ಮೆ ಮರದ ಬುಡದಲ್ಲೂ ಬೆಳೆಯುತ್ತದೆ.

Malnad Special Pathrode:
Malnad Special Pathrode:

ಇತ್ತೀಚಿನ ಜನಪ್ರಿಯ ಸುದ್ದಿಗಳು 


ಎರಡು ಬಗೆಯ ಪತ್ರೊಡೆ:

ಪ್ರಾಚೀನ ಕಾಲದಿಂದಲೂ ತುಳುವರು ಮಾಡುತ್ತಾ ಬಂದಿರುವ ಪತ್ರೊಡೆ (Malnad Special Pathrode:) ಒಂದು ರೀತಿಯದ್ದಾದರೆ, ಕೊಂಕಣಿಗರು ಅದನ್ನೆ ಕೊಂಚ ಡಿಫ್ರೆಂಟ್ ಶೈಲಿಯಲ್ಲಿ ಪರಿಚಯಿಸಿದ ಪತ್ರೊಡೆ ಇನ್ನೊಂದು. ಎರಡೂ ದ.ಕ.ದಲ್ಲಿ ಹಾಸು ಹೊಕ್ಕಾಗಿದೆ. ತುಳು ಶೈಲಿಯ ಪತ್ರೊಡೆಯಲ್ಲಿ ಕೆಸು ಎಲೆ ಸಣ್ಣ ಸಣ್ಣ ಚೂರುಗಳನ್ನಾಗಿ ಹಚ್ಚಿ ಅದನ್ನು ಅಕ್ಕಿಯ ಹಿಟ್ಟಿನೊಂದಿಗೆ ಕಲಸಿ ರುಚಿಗೆ ಬೇಕಾದ (ಜೀರಿಗೆ, ಮೆಣಸು ಮತ್ತಿತರ ಸಾಂಬಾರ ಪದಾರ್ಥ) ವಸ್ತು ಹಾಕುತ್ತಾರೆ. ಬಳಿಕ ಅದನ್ನು ಬಾಳೆ ಎಲೆ ಅಥವಾ ಉಪ್ಪಲಿಗೆ ಎಲೆಯಲ್ಲಿ ಕಟ್ಟಿ ಶಾಖದಲ್ಲಿ ಬೇಯಿಸಲಾಗುತ್ತದೆ. ನಂತರ ಅದನ್ನು ಮಧ್ಯಮ ಗಾತ್ರಕ್ಕೆ ಕತ್ತರಿಸಿ ಪ್ರತ್ಯೇಕ ಮಸಾಲೆಯೊಂದಿಗೆ ಬೆರೆಸಿ ಒಂದೆರಡು ಕುದಿಯವರೆಗೆ ಬೇಯಿಸಲಾಗುತ್ತದೆ. ಆಗ ಪತ್ರೊಡೆ ಸಿದ್ಧ. ಇನ್ನೊಂದು ಶೈಲಿಯ ಪತ್ರೊಡೆಯನ್ನು ಪ್ರತ್ಯೆಕ ಮಸಾಲೆಯಲ್ಲಿ ಬೇಯಿಸುವ ಕ್ರಮವಿಲ್ಲ. ಇಲ್ಲಿ ಕೆಸು ಎಲೆಗೆ ಮಸಾಲೆ ಹಚ್ಚಿ ಅದನ್ನೆ ಹಲವು ಪದರಗಳಲ್ಲಿ ಸುತ್ತಿ ಬೇಯಿಸಿದ ಬಳಿಕ ಕತ್ತರಿಸಿ ತಿನ್ನಲಾಗುತ್ತದೆ.

ಇದನ್ನೂ ಓದಿ; ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ

ಈ ಪತ್ರೋಡೆಯಲ್ಲಿ ಔಷಧೀಯ ಗುಣವೂ ಅಡಗಿದೆ.
ಹೊಟ್ಟೆಯಲ್ಲಿ ಕೂದಲಿನಂತಹ ವಸ್ತುಗಳಿದ್ದರೂ ದೇಹದಿಂದ ಹೊರಕ್ಕೆ ಹಾಕುವ ಶಕ್ತಿ ಮರಕೆಸವಿಗೆ ಇದೆ. ಮಳೆಗಾಲದಲ್ಲಿ ತಂಪು ವಾತಾವರಣದಲ್ಲಿ ಮೈ ಬೆಚ್ಚಗೆ ಮಾಡುವ ಶಕ್ತಿ ಈ ಪತ್ರೋಡೆಗೆ ಇದೆ.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ತೆರಳಿದ್ದ ವೃದ್ಧೆ ನಾಪತ್ತೆ
  2. ಶೃಂಗೇರಿ: ಪಿಡಿಒ, ಕಾರ್ಯದರ್ಶಿ ಇಬ್ಬರೂ ಇಲ್ಲದೆ ಅನಾಥವಾದ ಗ್ರಾಮ ಪಂಚಾಯಿತಿ
  3. ಮಲೆನಾಡಿನ ಜನತೆಗೆ ಗುಡ್ ನ್ಯೂಸ್; ವಿಮಾನ ಹಾರಾಟದ ದಿನಾಂಕ ಪ್ರಕಟಿಸಿದ ಇಂಡಿಗೋ ಸಂಸ್ಥೆ
  4. ಕೊಪ್ಪ: ಹಾಸ್ಟೆಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
  5. ಶೃಂಗೇರಿ: ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಗೆ ಅಧಿಕಾರಿ ನೇಮಕಗೊಳಿಸಿ ಆದೇಶ
  6. ಎಲ್ಲೆಡೆ ಹರಡುತ್ತಿದೆ ಮದ್ರಾಸ್ ಐ;ಏನಿದು ಮದ್ರಾಸ್ ಐ?. ಹೇಗೆ ಹರಡುತ್ತದೆ.
  7. 60 ಕೋಟಿ ವರ್ಷ ಹಿಂದಿನ ಸಮುದ್ರದ ನೀರು ಪತ್ತೆ
  8. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-26.07.2023
  9. ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ
  10. ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 27-06-2023

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇