Madras eye: ಪ್ರತಿಯೊಬ್ಬರಿಗೂ ಕಣ್ಣು ಬೇಕೇ ಬೇಕು ಅಂತದ್ರಲ್ಲಿ ಕಣ್ಣಿಲ್ಲ ಅಂದ್ರೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಕಣ್ಣಿನ ಮಹತ್ವ ತಿಳಿದೆ ತಿಳಿದಿರುತ್ತೆ. ಅಂತದ್ರಲ್ಲಿ ಮಕ್ಕಳ ಕಣ್ಣಿಗೆ ಏನಾದರೂ ತೊಂದರೆ ಆದರೆ ಪೋಷಕರಿಗೆ ಆಗುವ ಭಯನೇ ಬೇರೆ. ಹೌದು ಮಕ್ಕಳಲ್ಲಿ ಈಗ ಕಾಣಿಸಿಕೊಳ್ಳುತ್ತಿರುವ ವೈರಸ್ ಅದುವೇ ಕಣ್ಣು ಬೇನೆ (ಮದ್ರಾಸ್ ಐ) ಈ ಕಣ್ಣು ಬೇನೆ ಕಾಯಿಲೆ ಈಗ ಮಕ್ಕಳನ್ನು ಹೆಚ್ಚು ಕಾಡುತ್ತಿದೆ. ಕಳೆದ ಎಂಟು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ದಾವಣಗೆರೆ ಥೇಟ್ ಮಲೆನಾಡಿನ ಹಾಗೆ ಆಗಿದೆ, ಇನ್ನು ಈ ಮಳೆಗೆ ಜ್ವರ, ಶೀತ, ಕೆಮ್ಮು, ಇಂತಹ ಕಾಯಿಲೆಗಳು ಸರ್ವೇ ಸಾಮಾನ್ಯ.
ಇದನ್ನೂ ಓದಿ; ಕಾಫಿನಾಡು ಪೊಲೀಸರಿಗೆ ತಲೆನೋವಾದ ಟೂರಿಸ್ಟ್
ಆದರೆ, ಈಗ ಮಕ್ಕಳಲ್ಲಿ ಕಾಡುತ್ತಿರುವ ಈ ಕಣ್ಣಿನ ಬೇನೆ (ಐ ವೈರಸ್) ನಿಂದ ಪೋಷಕರು ಭಯ ಭೀತರಾಗಿದ್ದಾರೆ. ಹಾಸ್ಟೆಲ್, ಶಾಲಾ- ಕಾಲೇಜುಗಳಲ್ಲಿ ಹೆಚ್ಚು ಈ ಮದ್ರಾಸ್ ಐ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ದಾವಣಗೆರೆಯಲ್ಲಿ ಮದ್ರಾಸ್ ಐ ಸೋಂಕು ಉಲ್ಬಣವಾಗಿದೆ. 3 ಸಾವಿರಕ್ಕೂ ಹೆಚ್ಚು ಜನರಿಗೆ ಈ ವರ್ಷ ಈ ಸೋಂಕು ತಗುಲಿದ್ದು, ಚಿಕಿತ್ಸೆಗೊಳಗಾಗಿದ್ದಾರೆ. ಹಾಗಾದರೆ ಮದ್ರಾಸ್ ಐ ಸೋಂಕಿನ ಗುಣಲಕ್ಷಣ, ಪರಿಹಾರ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಪ್ರವಾಸಿಗರಿಗೆ ನಿರ್ಬಂಧ
ರೋಗದ ಗುಣ ಲಕ್ಷಣಗಳು ಏನು?:
* ಕಣ್ಣಿನಲ್ಲಿ ಪಿಸುರು ಬರುವುದು.
* ಕಣ್ಣಲ್ಲಿ ನೀರು ಬರುವುದು.
* ಕಣ್ಣು ಕೆಂಪಗಾಗುತ್ತದೆ.
* ಬೆಳಕಿನ ಕಣ್ಣುಗಳಲ್ಲಿ ಉರಿತ
* ದೃಷ್ಟಿ ಕಡಿಮೆಯಾಗುವುದು
ಮದ್ರಾಸ್ ಐ ಬಂದವರು ಮಾಡಬೇಕಾದ ಕೆಲಸಗಳೇನು?;
* ಮೇಲಿಂದ ಮೇಲೆ ಕೈ ತೊಳೆಯಬೇಕು.
* ಕಣ್ಣು ಆಗಾಗ್ಗೆ ಮುಟ್ಟುಕೊಳ್ಳಬಾರದು.
* ಸ್ಯಾನಿಟೈಸರ್ ಬಳಕೆ ಮಾಡುವುದು ಒಳ್ಳೆಯದು
* ತಂಪು ನೀರಿನಿಂದ ಕಣ್ಣನ್ನು ಶುಚಿಗೊಳಿಸಬೇಕು
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪಿಎಂ ಕಿಸನ್ 14 ನೇ ಕಂತು; ಈ ರೀತಿ ಮಾಡಿದರೆ ತಿಂಗಳಿಗೆ 2000 ಹಣ ನಿಮ್ಮ ಖಾತೆಗೆ ಖಚಿತ
- ಅರಶಿನ ನೀರನ್ನು ಕುಡಿಯೋದ್ರಿಂದ ನಿಮಗೆ ಸಿಗಲಿದೆ ಈ 7 ಲಾಭಗಳು..
- ಮೂಡಿಗೆರೆ: ಮಳೆಯ ಆರ್ಭಟಕ್ಕೆ ಮನೆ ಸಂಪೂರ್ಣ ಜಖಂ
ಸೋಂಕಿತ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ:
* ಕಣ್ಣುಗಳನ್ನು ಮುಟ್ಟಿದಾಗ-ಮುಟ್ಟುವ ಮುನ್ನ ಕೈತೊಳೆದುಕೊಳ್ಳಬೇಕು
* ಕಣ್ಣಿಗೆ ಹೆಚ್ಚು ಗಾಳಿ ತಾಕಬಾರದು
* ಕಣ್ಣು ವಾಸಿಯಾಗುವವರೆಗೂ ಮೊಬೈಲ್ ಬಳಕೆ ನಿಷೇಧ
* ಕಣ್ಣು ಒರೆಸಲು ಕರವಸ್ತ್ರಗಳ ಬದಲಿಗೆ ಟಿಶ್ಯೂ ಪೇಪರ್ ಬಳಸಿದರೆ ಉತ್ತಮ.
Madras eye: ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.
ಮದ್ರಾಸ್ ಐ ಮುನ್ನೆಚ್ಚರಿಕೆ ಕ್ರಮಗಳು:
* ಮದ್ರಾಸ್ ಐ ಬಂದವರು ಬಳಸಿದ ಯಾವುದೇ ವಸ್ತು ಇತರರು ಬಳಸಬೇಡಿ
* ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಕಣ್ಣಿಗೆ ಔಷಧ ಹಾಕಬೇಡಿ
* ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಿ
* ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ
ಇದನ್ನೂ ಓದಿ; ಶೃಂಗೇರಿ : ಅಧಿಕಾರಿಯ ಅಮಾನತು ಆದೇಶ ರದ್ದಾಗಿದ್ದರೂ ನಿಯೋಜನೆ ಆದೇಶ ನೀಡದೆ ಕಿರುಕುಳ: ಪ್ರತಿಭಟನೆ ಎಚ್ಚರಿಕೆ
ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ. ಆದರೆ, ಯಾರೂ ಭಯಪಡಬೇಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಕಾಳುಮೆಣಸಿನ ರೇಟ್ ನಲ್ಲಿ ದಿಢೀರ್ ಜಿಗಿತ..!
- ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ
- ಮೂಡಿಗೆರೆ: ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ
- ಶೃಂಗೇರಿ: ತೋಟಗಾರಿಕಾ ಇಲಾಖೆ ಸಮೀಪ ಮೀನಿನ ಬಲೆಯಲ್ಲಿ ಸಿಲುಕ್ಕಿದ್ದ ಹೆಬ್ಬಾವಿನ ರಕ್ಷಣೆ
- ಕಾಫಿನಾಡು ಪೊಲೀಸರಿಗೆ ತಲೆನೋವಾದ ಟೂರಿಸ್ಟ್
- ಪ್ರವಾಸಿಗರ ಗಮನಕ್ಕೆ: ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಪ್ರವಾಸಿಗರಿಗೆ ನಿರ್ಬಂಧ
- ಶೃಂಗೇರಿ : ಅಧಿಕಾರಿಯ ಅಮಾನತು ಆದೇಶ ರದ್ದಾಗಿದ್ದರೂ ನಿಯೋಜನೆ ಆದೇಶ ನೀಡದೆ ಕಿರುಕುಳ: ಪ್ರತಿಭಟನೆ ಎಚ್ಚರಿಕೆ
- ಪಿಎಂ ಕಿಸನ್ 14 ನೇ ಕಂತು; ಈ ರೀತಿ ಮಾಡಿದರೆ ತಿಂಗಳಿಗೆ 2000 ಹಣ ನಿಮ್ಮ ಖಾತೆಗೆ ಖಚಿತ
- ಮೂಡಿಗೆರೆ: ಮಳೆಯ ಆರ್ಭಟಕ್ಕೆ ಮನೆ ಸಂಪೂರ್ಣ ಜಖಂ
- ಅರಶಿನ ನೀರನ್ನು ಕುಡಿಯೋದ್ರಿಂದ ನಿಮಗೆ ಸಿಗಲಿದೆ ಈ 7 ಲಾಭಗಳು..
- ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ತೆರಳಿದ್ದ ವೃದ್ಧೆ ನಾಪತ್
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply