Sea ​​Water: 60 ಕೋಟಿ ವರ್ಷ ಹಿಂದಿನ ಸಮುದ್ರದ ನೀರು ಪತ್ತೆ

Sea ​​Water: ಹಿಮಾಲಯದಲ್ಲಿ 60 ಕೋಟಿ ವರ್ಷಗಳಷ್ಟು ಹಿಂದಿನ ಸಮುದ್ರದ ನೀರನ್ನು ಬೆಂಗಳೂರು ಮೂಲದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಸಂಶೋಧನೆಯು ಭೂಮಿಯ ಮೇಲೆ ಜೀವರಾಶಿಗಳ ಉಗಮದಂತಹ ಸಂಕೀರ್ಣ ವಿಷಯದ ಮೇಲೆ ಹೊಸ ಸುಳಿವುಗಳನ್ನು ನೀಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಭೂ ವಿಜ್ಞಾನಗಳ ಕೇಂದ್ರ ಪ್ರಾಧ್ಯಾಪಕ ಸಜೀವ್ ಕೃಷ್ಣನ್ ನೇತೃತ್ವದ ವಿಜ್ಞಾನಿಗಳ ತಂಡವು ಈ ಕುರಿತು ಅಧ್ಯಯನ ನಡೆಸಿದ್ದು, ಪ್ರಿಕ್ಯಾಂಬ್ರಿಯನ್ ರಿಸರ್ಚ್ ಎಂಬ ನಿಯತಕಾಲಿಕದಲ್ಲಿ ಈ ವರದಿ ತಿಳಿಸಿದೆ.

ಅಲ್ಲದೇ, ಹಿಮಾಲಯದ ಖನಿಜಗಳಲ್ಲಿ ನೀರಿನ ಹನಿಗಳಿರುವುದನ್ನು ಕೂಡ ಪತ್ತೆ ಹಚ್ಚಿದ್ದಾರೆ. ಭೂಮಿ ಮೇಲೆ ಜೀವರಾಶಿ ವಿಕಾಸಗೊಂಡಿದ್ದ ಆರಂಭಿಕ ಅವಧಿಯಲ್ಲಿ ಅಗತ್ಯದಷ್ಟು ಪ್ರಮಾಣದ ಆಮ್ಲಜನಕ ಹೇಗೆ ಉತ್ಪತ್ತಿಯಾಗಿತ್ತು ಎಂಬ ಪ್ರಶ್ನೆಗೂ ಸಂಶೋಧನೆಯಿಂದ ಪರಿಹಾರ ಸಿಕ್ಕಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು 


Sea ​​Water: 60 ಕೋಟಿ ವರ್ಷಗಳಷ್ಟು ಕಡಲ ನೀರು ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ. ನೀರಿನ ಹನಿಗಳಿದ್ದ ಖನಿಜಗಳನ್ನು ಹೊಂದಿದ್ದ ಶಿಲೆಗಳ ಯುಗವನ್ನು ಪತ್ತೆ ಮಾಡುವ ಮೂಲಕ ನೀರು ರೂಪುಗೊಂಡ ಕಾಲಾವಧಿಯನ್ನು ನಿರ್ಧರಿಸಿದ್ದೇವೆ ಎಂದು ಸಜೀವ್ ಕೃಷ್ಣನ್ ಹೇಳಿದ್ದಾರೆ.

Sea ​​Water:
Sea ​​Water:

ಕೆಲವು ನಿರ್ದಿಷ್ಟ ರೀತಿಯ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಅಂದಿನ ವಾತಾವರಣ ಪೂರಕವಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶಗಳು ಅಗತ್ಯವಿಲ್ಲದಿದ್ದರೂ ಈ ಸೂಕ್ಷ್ಮಾಮ ಜೀವಿಗಳ ವಾತಾವರಣಕ್ಕೆ ಅಪಾರ ಪ್ರಮಾಣದ ಆಮ್ಲಜನಕ ಬಿಡುಗಡೆ ಮಾಡುತ್ತಿದ್ದವು ಎಂಬುವುದು ತಿಳಿದಿದೆ ಎಂದು ತಿಳಿಸಿದ್ದಾರೆ.

ಭೂಗೋಳ ವಿಜ್ಞಾನದ ರಹಸ್ಯಗಳನ್ನು ಬಿಚ್ಚಿಡುವ ಹಿನ್ನೆಲೆಯಲ್ಲಿ ಹಿಮಾಲಯದ ಪಶ್ಚಿಮ ಭಾಗದಲ್ಲಿ ವಿಜ್ಞಾನಿಗಳ ತಂಡ ಮೂರು ತಿಂಗಳ ಕಾಲ ಕ್ಷೇತ್ರ ಅಧ್ಯಯನ ಕೈಗೊಂಡಿತ್ತು. ರಾಸಾಯನಿಕವಾಗಿ ಮೂಲ ರೂಪದಲ್ಲಿರುವ ಖನಿಜಗಳನ್ನು ಸಂಗ್ರಹಿಸಿರುವ ತಂಡ, ಪ್ರಯೋಗಾಲಯದಲ್ಲಿ ಕೂಲಂಕುಷಣ ಅಧ್ಯಯನ ನಡೆಸುತ್ತಿದೆ.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಕಾಳುಮೆಣಸಿನ ರೇಟ್ ನಲ್ಲಿ ದಿಢೀರ್ ಜಿಗಿತ..!
  2. ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ
  3. ಮೂಡಿಗೆರೆ: ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ
  4. ಶೃಂಗೇರಿ: ತೋಟಗಾರಿಕಾ ಇಲಾಖೆ ಸಮೀಪ ಮೀನಿನ ಬಲೆಯಲ್ಲಿ ಸಿಲುಕ್ಕಿದ್ದ ಹೆಬ್ಬಾವಿನ ರಕ್ಷಣೆ
  5. ಕಾಫಿನಾಡು ಪೊಲೀಸರಿಗೆ ತಲೆನೋವಾದ ಟೂರಿಸ್ಟ್
  6. ಪ್ರವಾಸಿಗರ ಗಮನಕ್ಕೆ: ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಪ್ರವಾಸಿಗರಿಗೆ ನಿರ್ಬಂಧ
  7. ಶೃಂಗೇರಿ : ಅಧಿಕಾರಿಯ ಅಮಾನತು ಆದೇಶ ರದ್ದಾಗಿದ್ದರೂ ನಿಯೋಜನೆ ಆದೇಶ ನೀಡದೆ ಕಿರುಕುಳ: ಪ್ರತಿಭಟನೆ ಎಚ್ಚರಿಕೆ
  8. ಪಿಎಂ ಕಿಸನ್ 14 ನೇ ಕಂತು; ಈ ರೀತಿ ಮಾಡಿದರೆ ತಿಂಗಳಿಗೆ 2000 ಹಣ ನಿಮ್ಮ ಖಾತೆಗೆ ಖಚಿತ
  9. ಮೂಡಿಗೆರೆ: ಮಳೆಯ ಆರ್ಭಟಕ್ಕೆ ಮನೆ ಸಂಪೂರ್ಣ ಜಖಂ
  10. ಅರಶಿನ ನೀರನ್ನು ಕುಡಿಯೋದ್ರಿಂದ ನಿಮಗೆ ಸಿಗಲಿದೆ ಈ 7 ಲಾಭಗಳು..
  11. ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ತೆರಳಿದ್ದ ವೃದ್ಧೆ ನಾಪತ್

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇