Maha Kumbh:ಕುಂಭಮೇಳದಲ್ಲಿ ಕಾಲ್ತುಳಿತ: 2-3 ನಿಮಿಷದಲ್ಲಿ ರಕ್ಷಣೆಗೆ ಧಾವಿಸಿದ್ದ ಆ್ಯಂಬುಲೆನ್ಸ್

(Maha Kumbh) ಮಹಾ ಕುಂಭಮೇಳದಲ್ಲಿ ದುರಂತಕ್ಕೆ 30 ಜನರು ಸಾ*ವ-ನ್ನಪ್ಪಿದ್ದು, 60 ಜನರು ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭಮೇಳದಲ್ಲಿ ಪವಿತ್ರ ಮೌನಿ ಅಮಾವಾಸ್ಯೆ ದಿನ ಪುಣ್ಯಸ್ನಾನಕ್ಕಾಗಿ ನೆರೆದಿದ್ದ ಕೋಟ್ಯಂತರ ಜನರ ಪೈಕಿ ಲಕ್ಷಾಂತರ ಜನರು ಏಕಾಏಕಿ ನದಿಯತ್ತ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕರ್ನಾಟಕ ಬೆಳಗಾವಿಯ ನಾಲ್ವರು ಸೇರಿದಂತೆ ಒಟ್ಟು 30 ಜನರು ಸಾ*ವ-ನ್ನಪ್ಪಿದ್ದು, 60 ಜನರು ಗಾಯಗೊಂಡಿದ್ದಾರೆ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?


ಆಗಿದ್ದೇನು?:
ಬುಧವಾರ ಮೌನಿ ಅಮಾವಾಸ್ಯೆ. ಪ್ರಯಾಗದಲ್ಲಿ ಪುಣ್ಯ ಸ್ನಾನ ಮಾಡಲು ಅತ್ಯಂತ ವಿಶೇಷವಾದ ದಿನಗಳಲ್ಲಿ ಇದೂ ಒಂದು. ಪ್ರಯಾಗರಾಜಕ್ಕೆ 10 ಕೋಟಿ ಭಕ್ತರು ಬರಬಹುದೆಂಬ ಅಂದಾಜಿತ್ತು. ಅದರಂತೆ ಜನರು ಸಾಗರೋಪಾದಿಯಲ್ಲಿ ಬಂದಿದ್ದರು. ಬುಧವಾರ ಮುಂಜಾನೆ 3ಕ್ಕೆ ನಾಗಾಸಾಧುಗಳು, ಸಂತರು ಸ್ನಾನಕ್ಕೆ ಸಜ್ಜಾಗಿದ್ದರು. ಅವರ ಬಳಿಕ ಇತರರು ಮಿಂದೇಳಬೇಕಾಗಿತ್ತು. ಸಾಧು-ಸಂತರ ಜೊತೆ ಅಥವಾ ಅವರು ಸ್ನಾನ ಮಾಡಿದ ಬಳಿಕ ನದಿಗಿಳಿದರೆ ಪುಣ್ಯ ಸಿಗಲಿದೆ ಎಂಬ ನಂಬಿಕೆಇದೆ. ಹೀಗಾಗಿ ಸ್ನಾನಕ್ಕೆ ತೆರಳುವ ಸಲುವಾಗಿ ಬೆಳಗಿನ ಜಾವ 1-2 ಗಂಟೆ ಹೊತ್ತಿಗೇ ಜನರು ಬ್ಯಾರಿಕೇಡ್‌ ದಾಟಿದ್ದಾರೆ. ಪರಿಣಾಮ ನೂಕು ನುಗ್ಗಲು ಉಂಟಾಗಿ 30 ಜನ ಸಾ*ವಿ-ಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ;  ಇ-ಖಾತಾ ಇಲ್ಲದವರಿಗೆ ಬಿ-ಖಾತಾ ವಿತರಣೆ


ಮುಂಜಾಗ್ರತಾ ಕ್ರಮದಿಂದ ತಪ್ಪಿತು ದೊಡ್ಡ ಹಾನಿ:
ಕುಂಭಮೇಳದಲ್ಲಿ ಕಾಲ್ತುಳಿತ ನಡೆಯಲು ಸರ್ಕಾರದ ವೈಫಲ್ಯ ಕಾರಣ ಎಂಬ ವಿಪಕ್ಷಗಳ ಆರೋಪ ನಡುವೆಯೂ ಯುಪಿ ಸರ್ಕಾರ ತೆಗೆದುಕೊಂಡಿರುವ ತ್ವರಿತ ಸೇವೆ, ಹಸಿರು ಕಾರಿಡಾ‌ರ್ ಕ್ರಮಗಳು ದೊಡ್ಡ ಅನಾಹುತ ತಪ್ಪಿಸಿದೆ ಎಂದು ಸರ್ಕಾರ ಹೇಳಿದೆ.

ಹೌದು, ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಕಾಲ್ತುಳಿತ ಸಂತ್ರಸ್ತರನ್ನು ರಕ್ಷಿಸಲು ಹಸಿರು ಕಾರಿಡಾ‌ರ್ ಮೂಲಕ 2 – 3 ನಿಮಿಷದಲ್ಲಿ 50 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ನೆರವಿಗೆ ಧಾವಿಸಿವೆ. ಸುಮಾರು 100 ಸಲ ಆ್ಯಂಬುಲೆನ್ಸ್ ಸಂಚರಿಸಿ ಜನರನ್ನು ರಕ್ಷಿಸಿದೆ.


ಇದನ್ನೂ ಓದಿ: ಪಿಯುಸಿ ಪಾಸ್‌ ಆದ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್; ಎಷ್ಟು ಸ್ಕಾಲರ್ಶಿಪ್‌ ಲಭ್ಯ, ಅರ್ಜಿ ಸಲ್ಲಿಕೆ ಹೇಗೆ?


ವೈದ್ಯರು 2-3 ನಿಮಿಷದಲ್ಲಿ ಘಟನಾ ಸ್ಥಳ ತಲುಪಿದ್ದಾರೆ. ಎನ್.ಡಿ.ಆರ್.‌ ಎಫ್‌, ಎಸ್.ಡಿ.ಆರ್.‌ ಎಫ್‌ ಮತ್ತು ಪೊಲೀಸರೂ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸಣ್ಣಪಟ್ಟ ಗಾಯಳುಗಳಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡರವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದು ಸಾ*ವಿ-ನ ಸಂಖ್ಯೆ ತಗ್ಗಿಸಲು ಕಾರಣವಾಯಿತು ಎಂದಿದೆ.

ಅಲ್ಲದೇ ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಕೂಡ ಆಸ್ಪತ್ರೆಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲು ಸಿದ್ದರಾಗಿದ್ದರು. ಇದು ಸಾ*ವಿ-ನ ಸಂಖ್ಯೆ ನಿಯಂತ್ರಣಕ್ಕೆ ಬರಲು ಕಾರಣ ಎನ್ನಲಾಗಿದೆ. ಹಸಿರು ಕಾರಿಡಾರ್‌ ಗಳನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣಾ ತಂಡಗಳು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಲು ನಿರ್ಮಿಸಲಾಗಿತ್ತು.


ನ್ನೂ ಓದಿ: 10th, ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ; 10,000 ರಿಂದ 12,000ರ ವರೆಗೆ ಸ್ಕಾಲರ್ಶಿಪ್; ಜಸ್ಷ್‌ ಈ ರೀತಿ ಅರ್ಜಿ ಸಲ್ಲಿಸಿ


(Maha Kumbh) ಇನ್ನು ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಸಾವನನ್ನಪ್ಪಿದ್ದ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಿಸಿದೆ.

ಈ ಹಿಂದಿನ ಕುಂಭಮೇಳದಲ್ಲಿ ದುರಂತಗಳು ಹೀಗಿದೆ ನೋಡಿ:
* 1954: ಸ್ವಾತಂತ್ರ್ಯಾನಂತರ ನಡೆದ ಮೊದಲ ಕುಂಭಮೇಳ ಕಾಲ್ತುಳಿತ, ನದಿಯಲ್ಲಿ ಮುಳುಗಿ ಅಲಹಾಬಾದಲ್ಲಿ ಸುಮಾರು 800 ಜನರ ಸಾ*ವು
1906: ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಸುಮಾರು 200 ಮಂದಿ ಮೃ*ತ.
* 2003: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋದಾವರಿ ತೀರದಲ್ಲಿ ಪವಿತ್ರ ಸ್ನಾನಕ್ಕಾಗಿ ಸೇರಿದ್ದ ಜನ ಕಾಲ್ತುಳಿತಕ್ಕೆ 200 ಜನರ ದುರ್ಮರಣ. 100ಕ್ಕೂ ಅಧಿಕರಿಗೆ ಗಾಯ.
* 2013: ಫೆ.10ರಂದು ಕುಂಭಮೇಳದ ವೇಳೆ ಅಲಹಾಬಾದ್ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 47 ಮಂದಿ ಸಾ*ವು, 45 ಮಂದಿಗೆ ಗಾಯ.

Maha Kumbh:ಕುಂಭಮೇಳದಲ್ಲಿ ಕಾಲ್ತುಳಿತ: 2-3 ನಿಮಿಷದಲ್ಲಿ ರಕ್ಷಣೆಗೆ ಧಾವಿಸಿದ್ದ ಆ್ಯಂಬುಲೆನ್ಸ್
Maha Kumbh:ಕುಂಭಮೇಳದಲ್ಲಿ ಕಾಲ್ತುಳಿತ: 2-3 ನಿಮಿಷದಲ್ಲಿ ರಕ್ಷಣೆಗೆ ಧಾವಿಸಿದ್ದ ಆ್ಯಂಬುಲೆನ್ಸ್

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ